kalladka

ಕಲ್ಲಡ್ಕ ಗಲಭೆ ಹಿನ್ನೆಲೆ: ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ಕಳೆದ ಹಲವಾರು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕ ಪರಿಸರದಲ್ಲಿ ಮಂಗಳವಾರದಂದು ಸಂಜೆ ನಡೆದ ಗಲಭೆ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂ.13 ನೇ ಮಂಗಳವಾರ ಮಧ್ಯರಾತ್ರಿಯಿಂದ ಜೂ.14 ನೇ ಬುಧವಾರ ಮಧ್ಯರಾತ್ರಿ 12.00 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಪ್ರಸ್ತಾವನೆಯಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಆದೇಶಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ […]

ಕಲ್ಲಡ್ಕ ಗಲಭೆ ಹಿನ್ನೆಲೆ: ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »

ಕರಾವಳಿ

ಮೆಲ್ಕಾರ್: ಯುವಕನಿಗೆ ತಲವಾರು ದಾಳಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.14. ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೋರ್ವನಿಗೆ ದುಷ್ಕರ್ಮಿಗಳಿಬ್ಬರ ತಂಡ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಮೆಲ್ಕಾರ್ ಆರ್.ಆರ್. ಮಿಲ್ ಬಳಿ ನಡೆದಿದೆ. ಮೆಲ್ಕಾರ್ ಪೆಟ್ರೋಲ್ ಬಂಕ್ ಮಾಲಕನ ಪುತ್ರ ಪವನ್ (28) ದುಷ್ಕರ್ಮಿಗಳ ದಾಳಿಗೊಳಗಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್ ಪೆಟ್ರೋಲ್ ಬಂಕ್‌ನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮೆಲ್ಕಾರ್ ಆರ್.ಆರ್. ಮಿಲ್ ಬಳಿ ಪೊದೆಯಲ್ಲಿ ಅವಿತು ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಬೈಕನ್ನು ಅಡ್ಡಗಟ್ಟಿ ತಲವಾರಿನಿಂದ ದಾಳಿ

ಮೆಲ್ಕಾರ್: ಯುವಕನಿಗೆ ತಲವಾರು ದಾಳಿ Read More »

ಕರಾವಳಿ

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಜೂ.13. ಮನೆಗೆ ಹಣ್ಣುಹಂಪಲು ತೆಗೆದುಕೊಂಡು ಹೋಗುತ್ತಿದ್ದ ಯುವಕನಿಗೆ ತಂಡವೊಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ನಿವಾಸಿ ಅಬೂಸಾಲಿ ಎಂಬವರ ಪುತ್ರ ಖಲೀಲ್ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರತ್ನಾಕರ್ ಶೆಟ್ಟಿ ಹಾಗೂ ರವಿಭಂಡಾರಿ ಎಂಬವರು ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ. ರತ್ನಾಕರ ಶೆಟ್ಟಿಯ ಕೈಗಳಿಗೂ ಗಾಯಗಳಾಗಿದ್ದು, ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಕಂಡುಬಂದಿದ್ದು,

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ Read More »

ಕರಾವಳಿ

ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.11. ನದಿಯಲ್ಲಿ ಮುಳುಗಿ ಮೃತಪಟ್ಟ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲಕ್ಕೆತ್ತಿದ ಮುಸ್ಲಿಮರಿಗೆ ಶವವನ್ನು ಆಸ್ಪತ್ರೆಗೆ ಸಾಗಿಸಲು ಕ್ರಿಶ್ಚಿಯನ್ ಸಹೋದರನೋರ್ವ ತನ್ನ ಅಂಬ್ಯುಲೆನ್ಸ್ ನ್ನು ನೀಡಿ ಸಹಕರಿಸಿದ ಮಾನವೀಯ ಘಟನೆಗೆ ಬಂಟ್ವಾಳದ ನಗರ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗೂಡಿನ ಬಳಿ ಶನಿವಾರ ಸಾಕ್ಷಿಯಾಯಿತು. ಸದಾ ಒಂದಿಲ್ಲೊಂದು ಕೋಮು ಪ್ರಚೋದಿತ ಘಟನೆಗಳಿಂದ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಮಾನವೀಯ ಘಟನೆಗಳೂ ನಡೆಯುತ್ತದೆ ಎಂಬುವುದಕ್ಕೆ ಪುಷ್ಟಿ ನೀಡಿತು. ಪುದು

ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್ Read More »

ಕರಾವಳಿ
Scroll to Top