Kadaba

ಪಂಜ: ಎಂ.ಆರ್.ಎಫ್. ಬೈಕ್ ರ್ಯಾಲಿ

(ನ್ಯೂಸ್ ಕಡಬ) newskadaba.com ಪಂಜ ನ. 29: ಇಂದು ಎಂ.ಆರ್.ಎಫ್. ಡರ್ಟ್ ಟ್ರ್ಯಾಕ್ ಬೈಕ್ ರ್ಯಾಲಿಯು ಪಂಜದಲ್ಲಿ ನಡೆಯಿತು.     ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಪಂಜ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ರವರು ಚಾಲನೆ ನೀಡಿದರು.  

ಪಂಜ: ಎಂ.ಆರ್.ಎಫ್. ಬೈಕ್ ರ್ಯಾಲಿ Read More »

ಕರಾವಳಿ

ನೆಲ್ಯಾಡಿ ಪೇಟೆಯಲ್ಲಿ ಎರಡು ಅಂಗಡಿಗಳಿಂದ ದರೋಡೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ ನ. 29: ನೆಲ್ಯಾಡಿ ಪೇಟೆಯಲ್ಲಿ ಶೆಟರ್ ಮುರಿದು ಎರಡು ಅಂಗಡಿಗಳಿಂದ ಕಳ್ಳರು ಸಾಮಾಗ್ರಿಗಳನ್ನ ದೋಚಿದ್ದಾರೆ. ಇಂದು (ನ.29) ಬೆಳಿಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಧು ಇಚಿಲಂಪಾಡಿ ಇವರ ಮಾಲಕತ್ವದ ತರಕಾರಿ ಅಂಗಡಿ ಹಾಗೂ ದತ್ತ ಕೃಪಾ ಸ್ಟೋರ್ ನಿಂದ ಕಳ್ಳತನ ನಡೆದಿದ್ದು ಎರಡು ಅಂಗಡಿಗಳ ಶೆಟರ್ ಮುರಿದು ಒಳನುಗ್ಗಿರುವ ಕಳ್ಳರು ಸಾಮಾಗ್ರಿಗಳನ್ನು ದೋಚಿರುವುದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ನೆಲ್ಯಾಡಿ ಪೇಟೆಯಲ್ಲಿ ಎರಡು ಅಂಗಡಿಗಳಿಂದ ದರೋಡೆ Read More »

ಕರಾವಳಿ

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ

(ನ್ಯೂಸ್ ಕಡಬ) newskadaba.com ಮಲ್ಪೆ ನ. 29: ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರಿದ್ದ ದೋಣಿ ಕಳೆದ ದಿನ  ಮುಳುಗಡೆಯಾಗಿತ್ತು. ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಸಮುದ್ರದಲ್ಲಿ ಮುಳುಗಿದ ದೋಣಿಯು ಮಲ್ಪೆಯದ್ದಾಗಿದ್ದು, ಮಥುರಾ ಹೆಸರಿನ ಈ ಆಳಸಮುದ್ರ ಮೀನುಗಾರಿಕಾ ದೋಣಿಯು ನ. 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.   ದೋಣಿಯಲ್ಲಿ ಏಳು ಮಂದಿ ಮೀನುಗಾರರಿದ್ದರು. ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿ ಬಲೆ, ಡೀಸೆಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ.

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ Read More »

ಕರಾವಳಿ, ಕರ್ನಾಟಕ

ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಾರ್ಕಳ ನ. 29: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹತ್ತಿರ ಮೇಯಲು ಬಿಟ್ಟಿದ ದನವೊಂದು ಆಕಸ್ವಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಗಾಯಗೊಂಡಿದೆ.     ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ ಯಶಸ್ವಿ ಕಾರ್ಯಚರನೆ ನಡೆಸಿ ದನವನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಠಾಣಧಿಕಾರಿ ಬಿ.ಎಂ ಸಂಜೀವ, ರೂಪೇಶ್, ಸಿಬ್ಬಂದಿಗಳಾದ ಸುರೇಶ್, ಜಯ ಮೂಲ್ಯ, ಗೃಹ ರಕ್ಷಕ ದಳದ ಮನ್ಮಥ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.  

ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ Read More »

ಕರಾವಳಿ

ಪ್ರೊ ಕಬಡ್ಡಿ ಲೀಗ್ ಮುಂದಿನ ವರ್ಷಕ್ಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ ನ. 29: ಕೋವಿಡ್ -19 ಕಾರಣದಿಂದಾಗಿ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಎಂಟನೇ ಆವೃತ್ತಿಯ ಟೂರ್ನಿಯನ್ನು ಮುಂದೂಡಲಾಗಿದೆ. ಆಟಗಾರರ ಅಧಿಕೃತ ಮಾರ್ಗಸೂಚಿಗಳು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಘಟಕರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಿಕೆಎಲ್‌ನ 8ನೇ ಆವೃತ್ತಿಯನ್ನು ಮುಂದೂಡಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಪುನರಾರಂಭಿಸಲು ಮುಂದಿನ ವರ್ಷ ಸೂಕ್ತ ಸಮಯ ನೋಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.     ಸ್ಟಾರ್ ಸ್ಪೋರ್ಟ್ಸ್ ಲೀಗ್‌ನ ಐದು ವರ್ಷಗಳ ಒಪ್ಪಂದವು ಕಳೆದ ವರ್ಷ

ಪ್ರೊ ಕಬಡ್ಡಿ ಲೀಗ್ ಮುಂದಿನ ವರ್ಷಕ್ಕೆ Read More »

ರಾಷ್ಟ್ರೀಯ ನ್ಯೂಸ್

ಶಿಲೀಂಧ್ರಶಾಸ್ತ್ರ ಸಂಶೋಧನಾ ಕ್ಷೇತ್ರ ➤ ಪ್ರೊ.ಕೆ.ಆರ್. ಶ್ರೀಧರ್‍ರವರಿಗೆ ವಿಶೇಷ ಸ್ಥಾನಮಾನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 29: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರೊ. ಕೆ.ಆರ್.ಶ್ರೀಧರ್‍ರವರಿಗೆ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲ್ಪಟ್ಟ ಮೆಗಾ ದತ್ತಾಂಶ ವಿಶ್ಲೇಷಣೆಯ ಪ್ರಕಾರ ಶಿಲೀಂಧ್ರಶಾಸ್ತ್ರ ಸಂಶೋಧನಾಕ್ಷೇತ್ರದಲ್ಲಿ ವಿಶ್ವದಅಗ್ರ 2%ವಿಜ್ಞಾನಿಗಳಲ್ಲಿ ಉನ್ನತ ಸ್ಥಾನಮಾನ ಲಭಿಸಿದೆ. ಸ್ಟ್ಯಾನ್ ಪೋರ್ಡ್  ವಿಶ್ವವಿದ್ಯಾನಿಲಯದ ವಿಜ್ಞಾನಿಗಳು “ಓಪನ್ ಅಕ್ಸ್‍ಸ್ ಜರ್ನ್‍ಲ್ ಪ್ಲಾಸ್ ಬಯಾಲಜಿ” (PLOS Biology)ಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ.ಪ್ರೊ.ಕೆ.ಆರ್.ಶ್ರೀಧರ್‍ರವರು ಕರ್ನಾಟಕದ ದಕ್ಷಿಣಕನ್ನಡ, ಕೊಡಗು ಮತ್ತು ಪಶ್ಚಿಮಘಟ್ಟ ಪ್ರದೇಶಗಲ್ಲಿನ ಶಿಲೀಂದ್ರಗಳ ಕುರಿತು ನಿರ್ವಹಿಸಿದ ಸಂಶೋಧನೆಗೆ ವಿಶೇಷ ಸ್ಥಾನಮಾನದ ಗೌರವ

ಶಿಲೀಂಧ್ರಶಾಸ್ತ್ರ ಸಂಶೋಧನಾ ಕ್ಷೇತ್ರ ➤ ಪ್ರೊ.ಕೆ.ಆರ್. ಶ್ರೀಧರ್‍ರವರಿಗೆ ವಿಶೇಷ ಸ್ಥಾನಮಾನ Read More »

ಕರಾವಳಿ

ಉಳ್ಳಾಲ: ಸ್ಕೂಟರ್ ಗೆ ಕಾರು ಡಿಕ್ಕಿ ➤ ಸ್ಕೂಟರ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 29: ತೊಕ್ಕೊಟ್ಟು ನಾಗನಕಟ್ಟೆ ಬಳಿ ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ  ನಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಇಕ್ಬಾಲ್ ಅಹ್ಮದ್ ಎಂದು ಗುರುತಿಸಲಾಗಿದೆ.     ತೊಕ್ಕೊಟ್ಟಿನಿಂದ ಸ್ಕೂಟರ್ ನಲ್ಲಿ ನಾಗನಕಟ್ಟೆಗೆ ಬರುತ್ತಿದ್ದಾಗ ಓವರ್‍ ಬ್ರಿಡ್ಜ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟರ್ ಡಾಂಬರು ರಸ್ತೆಯಲ್ಲಿ ಬಿದ್ದಿದ್ದು, ಸ್ಕೂಟರ್ ಸವಾರನಿಗೆ ಗಂಭಿರ ಗಾಯವಾಗಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ

ಉಳ್ಳಾಲ: ಸ್ಕೂಟರ್ ಗೆ ಕಾರು ಡಿಕ್ಕಿ ➤ ಸ್ಕೂಟರ್ ಸವಾರ ಗಂಭೀರ Read More »

ಕರಾವಳಿ

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ

(ನ್ಯೂಸ್ ಕಡಬ) newskadaba.com ಉಡುಪಿ ನ. 29: ಉಡುಪಿ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ದೇಗುಲಕ್ಕೆ ಭೇಟಿ ನೀಡಿದರು. ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಅವರು,ರಾತ್ರಿಯ ಮಹಾಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿದ ಡಿಕೆಶಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದರು. ಇಂದು ಕೊಲ್ಲೂರಿನಲ್ಲಿ ಪೂಜೆಯ ಬಳಿಕ ಉಡುಪಿಗೆ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆಗೊಂಡಿದೆ. ಉಡುಪಿಯಲ್ಲಿ ಶ್ರೀ ಕೃಷ್ಣಮಠ ಭೇಟಿಯ ಕಾರ್ಯಕ್ರಮವೂ ನಿಗದಿಯಾಗಿದೆ.

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ Read More »

ಕರಾವಳಿ

ನಗರದಲ್ಲಿ ಮತ್ತೊಂದು ‘ಉರ್ದುವಿನಲ್ಲಿ ಕಾಣಿಸಿಕೊಂಡ ಉಗ್ರ’ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು ನ. 29: ಉಗ್ರ ಸಂಘಟನೆ ಪರ ಜೈಕಾರ ಘೋಷಣೆ ಬರಹ ಕಾಣಿಸಿಕೊಂಡ ಎರಡೇ ದಿನಗಳ ಅಂತರದಲ್ಲಿ ನಗರದ ಕೋರ್ಟ್ ಆವರಣದಲ್ಲಿ ಮತ್ತೊಂದು ಇಂತಹದ್ದೇ ಬರವಣಿಗೆ ಕಾಣಿಸಿಕೊಂಡಿದೆ. ಈ ಬಾರಿ ಉರ್ದುವಿನಲ್ಲಿ ಕಾಣಿಸಿಕೊಂಡ ಬರವಣಿಗೆಯಲ್ಲಿ ‘ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದು’ ಅನ್ನೋ ಅರ್ಥದಲ್ಲಿ ಮತ್ತದೇ ಕಪ್ಪು ಬಣ್ಣದ ಸ್ಪ್ರೇ ಪೇಂಟ್ ಬಳಿದು ಈ ಕೃತ್ಯ ನಡೆಸಲಾಗಿದೆ.   ಕಳೆದ ದಿನ ಸಂಜೆ ವೇಳೆಗೆ ಈ ಕೃತ್ಯ ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸ್

ನಗರದಲ್ಲಿ ಮತ್ತೊಂದು ‘ಉರ್ದುವಿನಲ್ಲಿ ಕಾಣಿಸಿಕೊಂಡ ಉಗ್ರ’ ಬರಹ Read More »

ಕರಾವಳಿ, ಕ್ರೈಮ್ ನ್ಯೂಸ್

ಅರಂತೋಡು: ಕಾರು ಪಲ್ಟಿ ➤ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಅರಂತೋಡು ನ. 29: ಕಳೆದ ದಿನ ಮಾಣಿ ಮೈಸೂರು ರಸ್ತೆಯ ಅರಂತೋಡು ಸಮೀಪ ಓಮ್ನಿ ಕಾರು ಪಲ್ಟಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಪಾರಾದ ಘಟನೆ ನಡೆದಿದೆ.     ಓಮ್ನಿ ಕಾರು ಸುಳ್ಯದಿಂದ ಮೈಸೂರು ಕಡೆಗೆ ತೆರಳುತ್ತಿದ್ದು, ಪ್ರ ಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅದೃಷ್ಟವಶತ್ ನಿಂದ ಪಾರಾಗಿದ್ದಾರೆ.    

ಅರಂತೋಡು: ಕಾರು ಪಲ್ಟಿ ➤ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು Read More »

ಕರಾವಳಿ
Scroll to Top