Kadaba

ಆತ್ಮ ಹತ್ಯೆಗೆ ಶರಣಾದ ಬಾಲಿವುಡ್ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈ, ಡಿ.12: ‘ಡರ್ಟಿ ಪಿಕ್ಚರ್’ ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಬೆಂಗಾಲಿ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಒಂಟಿಯಾಗಿ ಬದುಕುತ್ತಿದ್ದ ಆರ್ಯ ಬ್ಯಾನರ್ಜಿ ಶುಕ್ರವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಮಹಡಿಯಲ್ಲಿದ್ದ ಆರ್ಯ ಅವರ ಫ್ಲ್ಯಾಟ್​ನ ಬಾಗಿಲು ಮುರಿದು ಪೊಲೀಸರು ಒಳಗೆ ಹೋದಾಗ ಆಕೆ ಬೆಡ್​ರೂಂನಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ. 33 ವರ್ಷದ ಆರ್ಯ ಬ್ಯಾನರ್ಜಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರ್ಯ ಅವರ ಮನೆ […]

ಆತ್ಮ ಹತ್ಯೆಗೆ ಶರಣಾದ ಬಾಲಿವುಡ್ ನಟಿ.! Read More »

ರಾಷ್ಟ್ರೀಯ ನ್ಯೂಸ್

ಗ್ರಾ.ಪಂ.ಚುನಾವಣೆ: ಮತದಾರರಿಗೆಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಮೊದಲನೇ ಹಂತದ ಮತದಾನವು ಡಿಸೆಂಬರ್ 22 ರಂದು ಹಾಗೂ ಎರಡನೇ ಹಂತದ ಮತದಾನವು ಡಿಸೆಂಬರ್ 27 ರಂದು ನಡೆಯಲಿದೆ. ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್(ಚುನಾವಣೆ ನಡೆಸುವ ನಿಯಮಗಳು), 1993ರ ನಿಯಮ 52ರಂತೆ ಮತದಾರನ ಎಡ ತೋರುಬೆರಳಿಗೆ ಅಥವಾ ರಾಜ್ಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಿದ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡಬೇಕಾಗುತ್ತದೆ.ಇತ್ತೀಚಿಗೆ ಕೆಲವು ವಿಧಾನಸಭಾ ಉಪಚುನಾವಣೆಗಳು ಹಾಗೂ ವಿಧಾನಪರಿಷತ್ತಿಗೆ ಚುನಾವಣೆಗಳು

ಗ್ರಾ.ಪಂ.ಚುನಾವಣೆ: ಮತದಾರರಿಗೆಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ Read More »

ಕರಾವಳಿ

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ➤ 2020ರ ಕುರಿತು ಸ್ಪಷ್ಠೀಕರಣಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೊಂದಾಯಿತ ಗುತ್ತಿಗೆ ದಾರರು ಸ್ಪರ್ಧಿಸಲು ಅವಕಾಶ ನೀಡಬಹುದೇ – ಸ್ಪಷ್ಠೀಕರಣ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ ಗ್ರಾಮ ಪಂಚಾಯಿತಿ ಸದಸ್ಯನಾಗಲು ಅನರ್ಹತೆಯನ್ನು ಪರಾಂಬರಿಸಬಹುವುದು. ಗುತ್ತಿಗೆದಾರರು ತಾನು ಸ್ಪರ್ಧಿಸಿರುವ ಗ್ರಾಮ ಪಂಚಾಯಿತಿಯಲ್ಲಿ ಹೊರತುಪಡಿಸಿ ಬೇರೆ ಗ್ರಾಮ ಪಂಚಾಯಿತಿಯಲಿ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಅನರ್ಹತೆ ಅನ್ವಯವಾಗುವುದೇ ಎಂಬುದಕ್ಕೆ – ಸ್ಪಷ್ಟೀಕರಣ: ಸ್ಪರ್ಧಿಸುವವರು ಮತ್ತು ಸ್ಪರ್ಧಿಸಲು ಇಚ್ಛಿಸುವ ಗ್ರಾಮ ಪಂಚಾಯಿತಿ ಯೊಂದಿಗೆ ಚಾಲ್ತಿಯಲ್ಲಿರುವ ಯಾವುದೇ

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ➤ 2020ರ ಕುರಿತು ಸ್ಪಷ್ಠೀಕರಣಗಳು Read More »

ಕರಾವಳಿ

ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.12: ಸಾರಿಗೆ ನೌಕರರ ಪ್ರತಿಭಟನೆ 2ನೇ ದಿನಕ್ಕೆ ಕಾಲಿರಿಸಿದೆ‌. ಉಡುಪಿ ಜಿಲ್ಲೆಯಲ್ಲಿ ಬಂದ್ ಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇದೆ.   ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡಿಪೋದಿಂದ ಬಸ್ ಗಳು ನಿಲ್ದಾಣಕ್ಕೆ ಬಂದಿವೆ. ಎಲ್ಲ ತಾಲೂಕುಗಳಿಗೆ ಬಸ್ ಸಂಚರಿಸುತ್ತಿವೆ. ಜಿಲ್ಲೆಯಲ್ಲಿ ಪ್ರತಿದಿನ 300 ಬಸ್ಸುಗಳ ಓಡಾಟ ನಡೆದಿದೆ.  

ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ Read More »

ಕರಾವಳಿ, ಕರ್ನಾಟಕ

ವಸತಿ ಸಚಿವ ವಿ ಸೋಮಣ್ಣ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12 :ರಾಜ್ಯ ವಸತಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಡಿಸೆಂಬರ್ 13 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಡಿಸೆಂಬರ್ 13 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ, ಸಂಜೆ 5.30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾಗಿರುವ ಸರ್ವಧರ್ಮ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ

ವಸತಿ ಸಚಿವ ವಿ ಸೋಮಣ್ಣ ಜಿಲ್ಲಾ ಪ್ರವಾಸ Read More »

ಕರಾವಳಿ

ರಾಜ್ಯದ 15 ಸ್ಥಳಗಳನ್ನು ಮತ್ಸ್ಯಧಾಮ ಎಂದು ಘೋಷಿಸಲು ಜೀವವೈವಿಧ್ಯ ಮಂಡಳಿ ಶಿಫಾರಸ್ಸು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಮಲೆನಾಡಿನಲ್ಲಿ ಹುಟ್ಟಿ ಹರಿಯುವ ಹಲವು ನದಿಗಳಲ್ಲಿರುವ ಅಪರೂಪದ ಮೀನು ವೈವಿಧ್ಯತೆಇರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮೀನುಗಾರಿಕೆ ಕಾಯಿದೆ ಅಡಿಯಲ್ಲಿ ಮತ್ಸ್ಯಧಾಮ ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.ಮೀನುಗಾರಿಕೆ ಸಚಿವಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಭೇಟಿ ಮಾಡಿ ಶಿಫಾರಸ್ಸು ವಿವರ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು, ಮತ್ಸ್ಯಧಾಮಗಳ ಮೂಲಕ ಅಪರೂಪದ ಮೀನು ಸಂತತಿ ಸಂರಕ್ಷಣೆ ಸಾಧ್ಯವಾಗಿದ್ದು,ಇದು

ರಾಜ್ಯದ 15 ಸ್ಥಳಗಳನ್ನು ಮತ್ಸ್ಯಧಾಮ ಎಂದು ಘೋಷಿಸಲು ಜೀವವೈವಿಧ್ಯ ಮಂಡಳಿ ಶಿಫಾರಸ್ಸು Read More »

ಕರಾವಳಿ

ದೇವಿಪ್ರಸಾದ್ ಕಾನತ್ತೂರು ರವರಿಗೆ ಹೃದಯವಂತರು 2020’ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನ್ಸಿಪಲ್ ಎಂಪ್ಲಾಯಸ್ ಯೂನಿಯನ್ ಆಶ್ರಯದಲ್ಲಿ ಇಂದು ಮಂಗಳೂರಿನ ಪುರಭವನದಲ್ಲಿ ನಡೆದ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗ್ರಾಮೀಣ ಪಶುವೈದ್ಯಕೀಯ ಸೇವೆ, ಸಮಾಜ ಸೇವೆ ಹಾಗೂ ಧಾರ್ಮಿಕ ಸೇವೆಗಾಗಿ ಪಂಜದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಹಲವು ಸಾಧಕರಿಗೆ ‘ಹೃದಯವಂತರು 2020’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕನ್ನಡ ಸಮ್ಮೇಳನ ಅಧ್ಯಕ್ಷ

ದೇವಿಪ್ರಸಾದ್ ಕಾನತ್ತೂರು ರವರಿಗೆ ಹೃದಯವಂತರು 2020’ ಪ್ರಶಸ್ತಿ ಪ್ರದಾನ Read More »

ಕರಾವಳಿ

ಬಿಳಿನೆಲೆ -ಕೈಕಂಬ :ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆ ➤ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಡಿ.12: ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆಯಾದ ಘಟನೆ ಕಡಬ ತಾಲೂಕಿನ ಬಿಳಿನೆಯಲ್ಲಿ ವರದಿಯಾಗಿದೆ.  ಬಿಳಿನೆಲೆ ಗ್ರಾಮದ ಮೂಳೆ ನಿವಾಸಿ ವೆಂಕಪ್ಪ ಗೌಡ ಹಾಗೂ ಬಾಲಚಂದ್ರ ಎಂಬುವರು ಡಿ.05 ರಂದು ರಾಂಪತ್ರೆ ಕೊಯ್ಯಲು ಭಾಗ್ಯ ಮಲೆ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ.  ತೆರಳುವ ಮುನ್ನ ಡಿ.08 ಅಥವಾ ಡಿ.09 ರಂದು ಕಾಡಿನಿಂದ ಹಿಂತಿರುಗಿ ಬರುವುದಾಗಿ ಮನೆಯವರಲ್ಲಿ ತಿಳಿಸಿ ಪ್ರತಿ ವರ್ಷದಂತೆ ಈ ಭಾರಿಯು ತೆರಳಿದ್ದಾರೆ. ಆದರೆ ಡಿ.11

ಬಿಳಿನೆಲೆ -ಕೈಕಂಬ :ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆ ➤ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಕೊಪ್ಪರಿಗೆ ಏರುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.12: ಹೆಸರಾಂತ ನಾಗಕ್ಷೇತ್ರ, ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಜಾತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಷಷ್ಠಿಯ ಪ್ರಮುಖ ಆಕರ್ಷಣೆಯಾಗಿರುವ ಬ್ರಹ್ಮ ರಥ ಕಟ್ಟುವ ಕೆಲಸ ಈ ಹಿಂದೆಯೇ ಆರಂಭಗೊಂಡಿದೆ. ಡಿ.11 ರ ಕಳೆದ ದಿನ ಕಾರ್ತಿಕ ಬಹುಳ ಏಕಾದಶಿಯ ದಿನ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆಯನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿವಿಧಾನಗಳೊಂದಿಗೆ ಮೂಲಪ್ರಸಾದ ತೆಗೆಯುವ ಕಾರ್ಯಕ್ರಮ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಕೊಪ್ಪರಿಗೆ ಏರುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ Read More »

ಕರಾವಳಿ

ಮಂಗಳೂರು :ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಹಳೆಯಂಗಡಿ ಮೀನು ಮಾರುಕಟ್ಟೆ ಸಮೀಪದ ಅಂಗಡಿಗೆ ಕಳ್ಳರು ಕನ್ನ ಹಾಕಿರುವ ಘಟನೆ ಡಿ.11 ರ ಕಳೆದ ರಾತ್ರಿ ನಡೆದಿದೆ. ಹಳೆಯಂಗಡಿಯ ಮುದ್ದು ಸಾಲ್ಯಾನ್ ಎಂಬವರ ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು, ನಗದು ಹಾಗೂ ಕೆಲ ವಸ್ತುಗಳನ್ನು ಕದ್ದೊಯ್ದಿದ್ದಾರೆ.ಮುದ್ದು ಸಾಲ್ಯಾನ್ ಇಂದು ಬೆಳಗ್ಗೆ ಅಂಗಡಿ ತೆರೆದಾಗ ಕಳವು ಅರಿವಿಗೆ ಬಂದಿದೆ. ಮುಲ್ಕಿ ಠಾಣೆ ಪೊಲೀಸರು ಸ್ಥಳಕ್ಕೆ‌ ಭೇಟಿ ಪರಿಶೀಲನೆ‌ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.      

ಮಂಗಳೂರು :ಅಂಗಡಿಯ ಚಾವಣಿಯ ಹೆಂಚು ತೆಗೆದು ಒಳಹೊಕ್ಕ ಕಳ್ಳರು.! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top