ಪೊಲೀಸರ ಮೇಲೆ ದಾಳಿ ಪ್ರಕರಣ ➤ ಆರೋಪಿಗಳ ಸುಳಿವು ಲಭ್ಯ- ಶ್ರೀನಿವಾಸ ಪೂಜಾರಿ.
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ಮಂಗಳೂರಿನಲ್ಲಿ ಪೊಲೀಸರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಲಭಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಎರಡು ಪ್ರತ್ಯೇಕ ಘಟನೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಘಟನೆ ಹಿಂದಿರುವ ಷಡ್ಯಂತ್ರ, ಕಿಡಿಗೇಡಿಗಳ ಮಾಹಿತಿ ಸಿಕ್ಕಿದೆ. ಮುಂದೆ ಇಂತಹ ಕಿಡಿಗೇಡಿ ಕೃತ್ಯ ಆಗಬಾರದು. ಅಂತಹ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ.ಕಾನೂನು ಕ್ರಮಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಮೇಲೆ ದಾಳಿ ಪ್ರಕರಣ ➤ ಆರೋಪಿಗಳ ಸುಳಿವು ಲಭ್ಯ- ಶ್ರೀನಿವಾಸ ಪೂಜಾರಿ. Read More »
ಕರಾವಳಿ









