ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು
(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಭಾನುವಾರ ಜೆ.ಪಿ ಭವನದಲ್ಲಿ ನಡೆದ ಬೆಂಗಳೂರು ನಗರ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಎದುರೇ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸರ್ಕಾರ ಬಂದು ವರ್ಷವಾಗಿದೆ. ನಿಗಮ-ಮಂಡಳಿ ಸ್ಥಾನ ಏಕೆ ಭರ್ತಿ ಮಾಡಿಲ್ಲ? ಶಾಸಕರಿಗೆ ನಿಗಮ-ಮಂಡಳಿ ಕೊಡುತ್ತಿದ್ದೀರಿ. ನಾವು ಪಕ್ಷಕ್ಕೆ ದುಡಿದಿಲ್ಲವೇ? ನಮಗೂ ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕೆಲವರು ಒತ್ತಾಯಿಸಿದ್ದಕ್ಕೆ ದೇವೇಗೌಡರು ಒಂದು ಕ್ಷಣ ತಬ್ಬಿಬ್ಬಾದರು. ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಸುಮ್ಮನೆ ಕುಳಿತರು. ಕೊನೆಗೆ ಪದಾಧಿಕಾರಿಗಳು ಹಾಗೂ […]



