Kadaba

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.24.ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಸೆ. 19 ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಕೋಡಿಂಬಾಳ ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹಿರಿಯ ವಿಭಾಗದ ರಸಪ್ರಶ್ನೆ ಸ್ವರ್ದೆಯಲ್ಲಿ ಭವನ್ ಕೆ.ಟಿ, ಚೈತ್ರಾ.ಕೆ, ಸಾನಿಧ್ಯ ಕೆ, ಗ್ರೇಷ್ಮಾ ಎಂ, ಭವಾನಿ ಯು, ಪವಿನ್ ಯು, ದ್ವೀತಿಯ ಸ್ಥಾನ ಗಳಿಸಿಕೊಂಡಿದ್ದಾರೆ. ಆಶುಭಾಷಣ ಸ್ಪರ್ದೆಯಲ್ಲಿ ಭವನ್ ಕೆ.ಟಿ, ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ Read More »

ಕರಾವಳಿ

6 ಮೈಕ್ರೋ ಬಚತ್ ಪಾಲಿಸಿ ಬಾಂಡ್ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,ಸಪ್ಟೆಂಬರ್.24.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ 102 ನೆಕ್ಕಿಲಾಡಿ ಒಕ್ಕೂಟದ ಸದಸ್ಯರಿಗೆ ಮೈಕ್ರೋ ಬಚತ್ ಪಾಲಿಸಿ ಬಾಂಡ್ ವಿತರಣೆ ರವಿವಾರ ನಡೆಯಿತು. ಬಂಟ್ರ ಮರ್ದಾಳ ಹಿ.ಪ್ರಾ ಶಾಲೆಯಲ್ಲಿ ನಡೆದ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಯುವ ವಕೀಲರಾದ ಪ್ರಶಾಂತ್ ಪಂಜೋಡಿ ಅವರು ಸದಸ್ಯರಿಗೆ ಮೈಕ್ರೋ ಬಚತ್ ಪಾಲಿಸಿಯ ಬಾಂಡ್ ವಿತರಿಸಿದರು. ಒಕ್ಕೂಟದ ಅಧ್ಯಕ್ಷ ಗಣಪಯ್ಯ ಗೌಡ ಪಂಜೋಡಿ, ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್., ಬಿಳಿನೆಲೆ ವಲಯ ಮೇಲ್ವಿಚಾರಕ ದರ್ಣಪ್ಪ, ಸೇವಾಪ್ರತಿನಿಧಿ ಸತೀಶ್

6 ಮೈಕ್ರೋ ಬಚತ್ ಪಾಲಿಸಿ ಬಾಂಡ್ ವಿತರಣೆ Read More »

ಕರಾವಳಿ

ನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ‘ಹಿಂದಿ ದಿವಸ’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ 23.09.2019ರಂದು ‘ಹಿಂದಿ ದಿವಸ’ ಕಾರ್ಯಕ್ರಮಜರುಗಿತು. ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿಧ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗ ಮುಖ್ಯಸ್ಥೆಡಾ. ಸುಮ ಟಿ.ಆರ್‍ಅವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ದಿನಗಳಿಂದಲೂ ಹಿಂದಿ ಭಾಷೆಯುತನ್ನ ಸೇವೆ ಹಾಗೂ ಕೊಡುಗೆ ನೀಡುತ್ತಾ ಬಂದಿದೆ. ವಂದೇ ಮಾತರಂ, ಭಾರತ್ ಮಾತಾಕೀಜೈ ನಾನಾ ಸಂದೇಶಗಳು ಹಿಂದಿ ಭಾಷೆಯ ಮೂಲಕವೇ ವ್ಯಕ್ತವಾಗಿವೆಎಂದರು. ಮತ್ತೊಬ್ಬ ಮುಖ್ಯಅತಿಥಿ ವಿಶ್ವವಿದ್ಯಾಲಯಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆಡಾ. ನಾಗರತ್ನರಾವ್‍ಇವರು ಮಾತನಾಡಿ ಭಾಷೆ ಹರಿಯುವ ನದಿಯಿದ್ದಂತೆ. ನದಿ

ನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ‘ಹಿಂದಿ ದಿವಸ’ ಕಾರ್ಯಕ್ರಮ Read More »

ಕರಾವಳಿ

ಸಮುದ್ರಕ್ಕೆ ತೆರಳದಂತೆ – ಮೀನುಗಾರರಿಗೆ ಮುನ್ನೆಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಹವಾಮಾನ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ಮುಂದಿನ 24 ಗಂಟೆಗಳ ಕಾಲ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವನೀಯತೆ ಇದೆ. ಆದ್ದರಿಂದ ಸೆಪ್ಟೆಂಬರ್ 23 ರಿಂದ 25 ರವರೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳದಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಸಮುದ್ರಕ್ಕೆ ತೆರಳದಂತೆ – ಮೀನುಗಾರರಿಗೆ ಮುನ್ನೆಚ್ಚರಿಕೆ Read More »

ಕರಾವಳಿ

ಆಯುಷ್ಮಾನ್ ಭಾರತ್ ➤ ಜಾಥಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಯೋಜನೆಯ ಅರಿವು ಮೂಡಿಸಲು ಹಾಗೂ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಾಥ ಆರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬಳಿಕ ಜಾಥವು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿಗೆ

ಆಯುಷ್ಮಾನ್ ಭಾರತ್ ➤ ಜಾಥಾ ಕಾರ್ಯಕ್ರಮ Read More »

ಕರಾವಳಿ

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಪ್ಟೆಂಬರ್ 25 ರಂದು ಬೆಳಿಗ್ಗೆ 10 ಗಂಟೆಗೆ ಮಹಿಳಾ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ Read More »

ಕರಾವಳಿ

ಕೊಡಗು ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.2020-21 ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಕ್ಟೋಬರ್ 10 ರವರೆಗೆ ಮುಂದೂಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ    www.sainikschooladmission.in   ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08276-278963, 08276-278965 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು ಇವರ ಪ್ರಕಟಣೆ ತಿಳಿಸಿದೆ.

ಕೊಡಗು ಸೈನಿಕ ಶಾಲೆಯ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ Read More »

ಕರಾವಳಿ

ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ ➤ ಶಾಸಕ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ಭಾನುವಾರ ಸ್ವಚ್ಚತಾ ಜನ ಜಾಗರಣ ಅಭಿಯಾನ ಹಮ್ಮಿಕೊಳ್ಳಲಾಯಿತು. ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅಮೃತ ಜ್ಯೋತಿ ಬೆಳಗಿ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಈ ಸಂದರ್ಭದಲ್ಲಿ ಮಾತನಾಡಿ ಸ್ವಚ್ಚ ಭಾರತ, ಸ್ವಚ್ಚ ಮಂಗಳೂರಿನ ಬಗ್ಗೆ ಮಠಗಳ ಪ್ರಯತ್ನ ಶ್ಲಾಘನೀಯ, 2000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿರುವ ಪರಿಣಾಮ ಇಂದು ಹೆಚ್ಚಿನ ಜನರಲ್ಲಿ

ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ ➤ ಶಾಸಕ ವೇದವ್ಯಾಸ ಕಾಮತ್ Read More »

ಕರಾವಳಿ

ಬಾಲಭವನ ಸಂಸ್ಥೆಯ ವತಿಯಿಂದ ಕಲಾಶ್ರೀ ಆಯ್ಕೆ ಶಿಬಿರಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಬಾಲಭವನ ಸಂಸ್ಥೆಯು 2019 ನೇ ಸಾಲಿನ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಆರಿಸಿ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡುವ ಉದ್ದೇಶದಿಂದ ಒಕ್ಟೋಬರ್ 15 ರಂದು ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಇಲ್ಲಿ ನಡೆಯುವ ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧೆಗಳ ವಿವರ ಇಂತಿವೆ : ಸೃಜನಾತ್ಮಕ ಕಲೆ-

ಬಾಲಭವನ ಸಂಸ್ಥೆಯ ವತಿಯಿಂದ ಕಲಾಶ್ರೀ ಆಯ್ಕೆ ಶಿಬಿರಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಹಳೆಯ ಕಡತ ಪೇಪರ್‍ಗಳ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ರೆಕಾರ್ಡ್ ಕೊಠಡಿಗೆ ಸಂಬಂಧಿಸಿದ ಹಳೆಯ ಕಡತಗಳಲ್ಲಿರುವ ಎಲ್ಲಾ ವಿಧದ ಪೇಪರ್ ಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಅಕ್ಟೋಬರ್ 4 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಚೇರಿ, ದ.ಕ ಜಿಲ್ಲೆ ಮಂಗಳೂರು ಇವರನ್ನು ಸಂಪರ್ಕಿಸಲು ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಹಳೆಯ ಕಡತ ಪೇಪರ್‍ಗಳ ಬಹಿರಂಗ ಹರಾಜು Read More »

ಕರಾವಳಿ
Scroll to Top