Kadaba

ಸೆ.6 ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05: ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.‌       11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ವಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ಸೆಪ್ಟೆಂಬರ್ 7 ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ […]

ಸೆ.6 ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ: ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಸೆ. 05: ಕಡಬ ತಾಲೂಕಿನ ನೂಜಿಬಾಳ್ತಿಲ ಉ.ಹಿ.ಪ್ರಾ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಹಿರಿಯ ಪತ್ರಕರ್ತ ಖಾದರ್‌ ಸಾಹೇಬ್‌ ದೀಪ ಬೆಳಗಿಸಿ ಉದ್ಘಾಟಿಸಿದರು.   ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಸುಂದರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ಸಚಿದೇವಿ ಎಸ್‌ ಡಿ ಎಂ ಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂಜಿಬಾಳ್ತಿಲ: ಶಿಕ್ಷಕರ ದಿನಾಚರಣೆ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ ಮೂವರು ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.05:  ಸರ್ಕಾರಿ ಗುಡ್ಡದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ತಂಡವೊಂದರ ಮೇಲೆ ಗುರುವಾರ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ಧಾರೆ. ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ನಾಲ್ವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.   ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಎಂಬಲ್ಲಿ ಗುರುವಾರ ದಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸರ್ಕಾರಿ ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಪೊಲೀಸ್

ಉಪ್ಪಿನಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ ಮೂವರು ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 05: ಕಳೆದ ಶುಕ್ರವಾರ ಕೊರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಬಂದಿದ್ದ ಸುಳ್ಯ ಶಾಸಕ ಎಸ್‌.ಅಂಗಾರರು ಇಂದು ಮತ್ತೆ ಕೊರೋನ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ. ಅವರು ಒಂದು ವಾರಗಳ ಕಾಲ ಕ್ವಾರಂಟೈನ್‌ ನಲ್ಲಿದ್ದರು. ಅವರ ಪತ್ನಿ ಮತ್ತು ಕಾರು ಚಾಲಕನನ್ನು ಕೂಡ ಪರೀಕ್ಷೆ ಮಾಡಲಾಗಿದ್ದು ಅವರ ವರದಿಯೂ ಕೂಡ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್ Read More »

ಕರಾವಳಿ, ಕರ್ನಾಟಕ

ಎಂಬಿಎ ವಿದ್ಯಾರ್ಥಿನಿ ಅನಿಷಾ ಆತ್ಮಹತ್ಯೆ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.05:  ಎಂಬಿಎ ವಿದ್ಯಾರ್ಥಿನಿ ಅನಿಷಾ (26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರಿಸಿಕೊಂಡಿದ್ದ ಆಕೆಯ ಪ್ರಿಯಕರ, ಆರೋಪಿ ಚೇತನ್ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.   ಆಗಸ್ಟ್.21 ರಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆರೋಪಿ ಚೇತನ್ ತಲೆಮರಿಸಿಕೊಂಡಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುವತಿ ಮನೆಯವರಯ ಯುವಕನ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ದೂರು ದಾಖಲಿಸಿದ್ದರು. ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಪತ್ತೆ ವಿಭಾಗದ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು

ಎಂಬಿಎ ವಿದ್ಯಾರ್ಥಿನಿ ಅನಿಷಾ ಆತ್ಮಹತ್ಯೆ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ

(ನ್ಯೂಸ್ ಕಡಬ) newskadaba.com ಪಂಜ, ಸೆ. 05: ಹಿಂದೂ ಜಾಗರಣ ವೇದಿಕೆ ಪಂಜ ವಲಯ, ಕೇನ್ಯ ಘಟಕ ಇದರ ಶ್ರೀ ಮಹಾವಿಷ್ಣು ಶಾಖೆಯು ಇಂದು ಸುಬ್ರಹ್ಮಣ್ಯ ಕೆ.ಬಿ.ಕಣ್ಕಲ್‌ ಇವರ ಮನೆಯಲ್ಲಿ ರಚನೆಯಾಯಿತು.     ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ರಾಜೀವ್‌ ಗೌಡ ಕಣ್ಕಲ್‌, ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ,ಉಪಾಧ್ಯಕ್ಷರಾಗಿ ವಿನ್ಯಾಸ್‌ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್‌. ಆನೆಮನೆ ಕಾರ್ಯದರ್ಶಿಗಳಾಗಿ ಪ್ರವೀಣ್‌ ಗೆಜ್ಜೆ, ಸುರೇಶ್‌ ನೆಲ್ಯಡ್ಕ, ಸಂಪರ್ಕ ಪ್ರಮುಖ ವಾಸುದೇವ ಆನೆಮನೆ, ಹಿಂದೂ ಯುವವಾಹಿನಿ ಪ್ರಮುಖರಾಗಿ ಪದ್ಮನಾಭ ಕೆರೆಕ್ಕೋಡಿ

ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ Read More »

ಕರಾವಳಿ, ಕರ್ನಾಟಕ

ಮಂಗಳೂರು : ಬಾಂಬರ್ ಆದಿತ್ಯರಾವ್ ನ ಮಂಪರು ಪರೀಕ್ಷೆ ಮುಕ್ತಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.05:  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯರಾವ್ ಮಂಪರು ಪರೀಕ್ಷೆ ಕಳೆದ ದಿನ ಮುಕ್ತಾಯಗೊಂಡಿದೆ. ಬೆಂಗಳೂರಿನ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಎರಡು ದಿನಗಳ ಆದಿತ್ಯ ರಾವ್ ಅವರ ಮಂಪರು ಪರೀಕ್ಷೆಯನ್ನು ನಡೆಸಲಾಗಿತ್ತು.   ಮಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣಕ್ಕೆ ಆರೋಪಿ ಆದಿತ್ಯ ರಾವ್ ಬಾಂಬ್ ಇಟ್ಟು, ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು ತನಿಖೆ ನಡೆಸಿದ್ದರು. ಆದರೆ ತನಿಖೆ ಸಂದರ್ಭ ಪೊಲೀಸರ ಕೆಲವೊಂದು

ಮಂಗಳೂರು : ಬಾಂಬರ್ ಆದಿತ್ಯರಾವ್ ನ ಮಂಪರು ಪರೀಕ್ಷೆ ಮುಕ್ತಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಧರ್ಮಸ್ಥಳದಿಂದ ಶಿಕ್ಷಣ ಕ್ಷೇತ್ರಕ್ಕೆ 17 ಕೋಟಿ ರೂ. ಸಹಕಾರ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಸೆ.05:  ವಿದ್ಯಾಕ್ಷೇತ್ರಕ್ಕೆ ಧರ್ಮಸ್ಥಳದಿಂದ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ.ಈ ಬಾರಿ ವಿದ್ಯಾಸಂಸ್ಥೆಗಳಿಗೆ ಕೊಡುವ ಸಹಕಾರದಲ್ಲಿ ವಿಶೇಷವಾಗಿ ಬೆಂಚು-ಡೆಸ್ಕ್ ಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಮರದ ಬಳಕೆ ಇಲ್ಲದೆ ಸಿಮೆಂಟ್ ಮತ್ತು ತೆಂಗಿನ ಮರದ ಕಾಂಡದಿಂದ ತಯಾರಿಸಲಾದ ಪರಿಸರ ಸ್ನೇಹಿ ಬೆಂಚು-ಡೆಸ್ಕ್ ಗಳನ್ನು 1990 ನೇ ಇಸವಿಯಿಂದ ಇದುವರೆಗೆ ಕರ್ನಾಟಕ ರಾಜ್ಯದ 9645 ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಫಾರಸಿನೊಂದಿಗೆ 17 ಕೋಟಿ ರೂ. ಮೌಲ್ಯದ ಬೆಂಚು-ಡೆಸ್ಕ್ ಗಳನ್ನು ನೀಡಲಾಗಿದೆ.   ಈ ವರ್ಷದ

ಧರ್ಮಸ್ಥಳದಿಂದ ಶಿಕ್ಷಣ ಕ್ಷೇತ್ರಕ್ಕೆ 17 ಕೋಟಿ ರೂ. ಸಹಕಾರ Read More »

ಕರಾವಳಿ, ಕರ್ನಾಟಕ

ಮೂಡುಬಿದಿರೆ: ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್‌ ಪದವಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಸೆ. 05: ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಹಿಂದಿ ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್.‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.     “ಮಧು ಕಾಂಕರಿಯಾ ಕೆ ಕಥಾ ಸಾಹಿತ್ಯ ಮೆ ಮಾನವೀಯ ಸಂವೇದನಾ” ಎನ್ನುವ ವಿಷಯದ ಬಗ್ಗೆ ಡಾ.ಪ್ರಭಾ.ವಿ.ಭಟ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು. ಅವರು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ಸಂತೋಷ್‌ ಕುಮಾರ್‌ ಅವರ ಪತ್ನಿ ಹಾಗೂ ಸುಳ್ಯ ಕೇರ್ಪಳದ

ಮೂಡುಬಿದಿರೆ: ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್‌ ಪದವಿ Read More »

ಕರಾವಳಿ, ಕರ್ನಾಟಕ

ಕೊಯಿಲ ಫಾರ್ಮ್ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ

(ನ್ಯೂಸ್ ಕಡಬ) newskadaba.com ಕಡಬ:. ಸೆ.05:  ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಸಮೀಪದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಆದೇಶ ಹೊರಡಿಸಿದೆ. ಹಚ್ಚಹಸಿರಾಗಿ ಭೂಮಾತೆಯ ಮಡಿಲಲ್ಲಿ ಕಂಗೊಳಿಸುತ್ತಿದ್ದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರು ಪ್ರವಾಸಿಗರು ಭೇಟಿ ನೀಡಿ ತ್ಯಾಜ್ಯಗಳನ್ನು ಎಸೆದು ವಾಪಾಸ್ಸಗುತ್ತಿದ್ದರು. ಇದರಿಂದ ಗೋವುಗಳು ಮೇವಿನ ವೇಳೆ ತ್ಯಾಜ್ಯಗಳನ್ನು ತಿಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದಾಗಿ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪಶುಸಂಗೋಪಾನ ಮತ್ತು

ಕೊಯಿಲ ಫಾರ್ಮ್ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ Read More »

ಕರಾವಳಿ
Scroll to Top