Kadaba News

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 04: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯದಲ್ಲಿ ಮಂಗಳೂರು ಕಡೆ ಚಲಿಸುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅನತಿ ದೂರದಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.     ಪುತ್ತೂರಿನಿಂದ ರಾತ್ರಿ ಮಂಗಳೂರು ಕಡೆಗೆ ಹೋಗುತಿದ್ದ ಟಿಪ್ಪರ್ ಕಬಕ ಸಮೀಪದ ಪೋಳ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯನ್ನು ಬಿಟ್ಟು ದೂರದಲ್ಲಿದ್ದ ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ವಿದ್ಯುತ್ ತಂತಿಯ ಕಡಿತದಿಂದಾಗಿ […]

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ Read More »

ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04:  ಕಳೆದ ಡಿ.19 ರಂದು ನಡೆದ ಮಂಗಳೂರು ಹಿಂಸಾಚಾರ ಮತ್ತು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಮೆಜಿಸ್ಟೀರಿಯಲ್ ತನಿಖೆಯ ಅಂತಿಮ ವರದಿಯನ್ನು ನ.4ರಂದು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 50 ಪುಟಗಳ ವರದಿ ಮತ್ತು ಸುಮಾರು 2500 ದಾಖಲೆಗಳನ್ನು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.    

ಮಂಗಳೂರು ಗೋಲಿಬಾರ್ ಪ್ರಕರಣ ➤ ಸರ್ಕಾರದ ಕೈಸೇರಿದ ಮೆಜಿಸ್ಟೀರಿಯಲ್ ತನಿಖೆ ವರದಿ Read More »

ಕರಾವಳಿ

ಕನಕದಾಸರ ತತ್ವ ,ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ➤ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಕನಕದಾಸರು ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದರು, ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಇಂದು ನಗರದ ಜಿಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕನಕದಾಸರು 15-16 ನೇ

ಕನಕದಾಸರ ತತ್ವ ,ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ➤ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ Read More »

ಕರಾವಳಿ

ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ➤ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03:  ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ. ಹಾಗಿರುವಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ..? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ. ಚರ್ಚಿಸುವ ಎಂದು ಶಾಸಕ ಯುಟಿ ಖಾದರ್ ಸವಾಲೆಸೆದಿದ್ದಾರೆ.     ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೀಗ ಗೋ ಹತ್ಯಾ ನಿಷೇಧ ಕಾನೂನಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಲಿದೆ. ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು

ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ➤ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಯು.ಟಿ.ಖಾದರ್ Read More »

ಕರಾವಳಿ

ಸುಳ್ಯ: ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಡೆಕೋಲು, ಡಿ. 03: ಇಂದು ಮಂಗಳೂರಿನಲ್ಲಿ ನಡೆದ ಸ್ಕ್ಯಾಡ್ಸ್ ಮಹಾಸಭೆಯಲ್ಲಿ 2019-20 ನೇ ಸಾಲಿನಲ್ಲಿ ದ.ಕ ಕೃಷಿ ಅಭಿವೃದ್ಧಿ ಸಹಕಾರಿ ಸಂಘ (skads) ಇಲ್ಲಿ ಕೃಷಿ ಯಂತ್ರೋಪಕರಣ ಖರೀದಿಸಿ ಸುಳ್ಯ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುವ ಮಂಡೆಕೋಲು ಸಹಕಾರಿ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.     ಪ್ರಶಸ್ತಿಯನ್ನು ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಹಾಗೂ ಮುಖ್ಯ ಕಾರ್ಯನಿರ್ವನಿರ್ವಹಣಾಧಿಕಾರಿ ಅನಂತಕೃಷ್ಣ ಚಾಕೋಟೆಯವರು ಸ್ವೀಕರಿಸಿದರು.    

ಸುಳ್ಯ: ಮಂಡೆಕೋಲು ಸಹಕಾರಿ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ Read More »

ಕರಾವಳಿ

ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ ‘ಕನ್ನಡ ಬೋರ್ಡ್’ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಉಡುಪಿ ಶ್ರೀಕೃಷ್ಣ ಮಠದ ಮಹಾದ್ವಾರದ ಮೇಲಿದ್ದ ಕನ್ನಡ  ಬದಲಿಗೆ ತುಳು ಹಾಗೂ ಸಂಸ್ಕೃತ ಬೋರ್ಡ್ ಅಳವಡಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕೃಷ್ಣಮಠದ ಆಡಳಿತ ಮಂಡಳಿ ಮಹಾದ್ವಾರಕ್ಕೆ ಕನ್ನಡದ ನಾಮಫಲಕವನ್ನು ಅಳವಡಿಸಿದೆ.   ಕೊರೊನಾ ಲಾಕ್‌ಡೌನ್ ವೇಳೆ ಸಂಪೂರ್ಣವಾಗಿ ಮಠವನ್ನು ಪುನಶ್ಚೇತನ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಹಳೆಯ ಬೋರ್ಡ್ ತೆಗೆದು, ಹೊಸ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಹೊಸ ಬೋರ್ಡ್ ನಲ್ಲಿ ಕನ್ನಡ ಮಾಯವಾಗಿ ತುಳು ಮತ್ತು ಸಂಸ್ಕೃತ ಪ್ರತ್ಯಕ್ಷವಾಗಿತ್ತು.

ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ ‘ಕನ್ನಡ ಬೋರ್ಡ್’ ಪ್ರತ್ಯಕ್ಷ Read More »

ಕರಾವಳಿ

ವಿಟ್ಲ: ಮುಖಾಮುಖಿಯಾಗಿ ಕಾರುಗಳ ನಡುವೆ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 03: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಚಾಲಕ, ಮಗು ಹಾಗೂ ಮಹಿಳೆ ಗಾಯಗೊಂಡ ಘಟನೆ ಇಂದು ನಡೆದಿದೆ.     ನೇರಳಕಟ್ಟೆ ಮದುವೆ ಹಾಲ್ ಇಂಡಿಯನ್ ಅಡಿಟೋರಿಯಮ್ ನಿಂದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಕೊಡಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ತೆರಳುವ ರಸ್ತೆಯ ಮುಂಭಾಗದಲ್ಲಿ ಮಾಣಿ ಕಡೆಯಿಂದ ಬಂದ ರಿಡ್ಜ್ ಕಾರೊಂದು ಢಿಕ್ಕಿ ಹೊಡೆದಿದ್ದು, ಮಾಣಿ

ವಿಟ್ಲ: ಮುಖಾಮುಖಿಯಾಗಿ ಕಾರುಗಳ ನಡುವೆ ಅಪಘಾತ ➤ ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಪರ್ಲಡ್ಕ: ಕಲ್ಲಿಮಾರಿನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ, ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 03: ಶಾಸಕ ಸಂಜೀವ ಮಠಂದೂರು ಅವರು ನಗರಸಭೆ 19 ನೇ ವಾರ್ಡ್‍ನ ಪರ್ಲಡ್ಕದಲ್ಲಿ ಶಾಸಕರ ವಿಶೇಷ ನಿಧಿಯಿಂದ ರೂ 1.5ಲಕ್ಷದ ಇಂಟರ್ ಲಾಕ್ ಉದ್ಘಾಟನೆ ಮತ್ತು ಕಲ್ಲಿಮಾರಿನಲ್ಲಿ ರೂ.10 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.     ಈ ಸಂದರ್ಭದಲ್ಲಿ ನಗರಸಭೆ ಸ್ಥಳೀಯ ಸದಸ್ಯರೂ, ಉಪಾಧ್ಯಕ್ಷರೂ ಆಗಿರುವ ವಿದ್ಯಾ ಆರ್ ಗೌರಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯರಾದ ದೀಕ್ಷಾ ಪೈ, ಇಂದಿರಾ

ಪರ್ಲಡ್ಕ: ಕಲ್ಲಿಮಾರಿನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ, ಉದ್ಘಾಟನೆ Read More »

ಕರಾವಳಿ

ಮಂಗಳೂರು: ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಪರ್ಸೀನ್ ಬೋಟ್ ದುರಂತದಲ್ಲಿ ಮೃತರಾದ ಆರು ಮಂದಿ ಮೀನುಗಾರರ ಕುಟುಂಬಕ್ಕೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯಲ್ಲಿ ಇಂದು (ಗುರುವಾರ) ಪರಿಹಾರದ ಚೆಕ್ ವಿತರಿಸಿದರು. ಒಂದು ಕುಟುಂಬಕ್ಕೆ ತಲಾ 6 ಲಕ್ಷ ರೂ.ನಂತೆ ಒಟ್ಟು 36 ಲಕ್ಷ ರೂ.ನ ಚೆಕ್ ವಿತರಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು.  

ಮಂಗಳೂರು: ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ Read More »

ಕರಾವಳಿ

100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 03: ನೂರಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಮಹಾಶಯ ಧರ್ಮಪಾಲ್ ಗುಲಾಟಿ(98) ಅವರು ನಿಧನರಾಗಿದ್ದಾರೆ. ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಮಾಲೀಕರಾಗಿದ್ದ ಧರ್ಮಪಾಲ್ ಗುಲಾಟಿ ಅವರು, ತಮ್ಮದೇಯಾ ಮಸಾಲೆ ಬ್ರಾಂಡ್ ಸೃಷ್ಟಿಸಿ ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇವರನ್ನು ‘ಮಸಾಲೆಗಳ ರಾಜ (ಕಿಂಗ್ ಆಫ್ ಸ್ಪೈಸಸ್)’ ಎಂದೇ ಕರೆಯುತ್ತಿದ್ದರು. ಗುಲಾಟಿ ಅವರು ಕಳೆದ ಮೂರು ವಾರಗಳಿಂದ ನವದೆಹಲಿ ಮಾತಾ ಚನನ್ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ

100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ Read More »

ರಾಷ್ಟ್ರೀಯ ನ್ಯೂಸ್
Scroll to Top