ಕಲ್ಲಡ್ಕ ಭಟ್ ವಿರುದ್ಧ ರೈ ಹೇಳಿಕೆಯ ವೀಡಿಯೋ ವೈರಲ್
ಕಲ್ಲಡ್ಕ ಭಟ್ ವಿರುದ್ಧ ರೈ ಹೇಳಿಕೆಯ ವೀಡಿಯೋ ವೈರಲ್ Read More »
ಕರಾವಳಿ(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.18. ಕಳೆದ ಕೆಲವು ದಿನಗಳಿಂದ ಕಲ್ಲಡ್ಕ ಪರಿಸರವು ಕೋಮುದ್ವೇಷದಿಂದಾಗಿ ಬೂದಿ ಮುಚ್ಚಿದ ಕೆಂಡದಂತಾಗಲು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇರ ಕಾರಣ. ಅವರನ್ನು 307 ಸೆಕ್ಷನ್ ಹಾಕಿ ಬಂಧಿಸಿ. ಹೊರಗೆ ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರಿಗೆ ಸೂಚನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರದಂದು ಬಂಟ್ವಾಳದ ಐಬಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕೆಲವು ಮುಸ್ಲಿಂ ಮುಖಂಡರು ಮನವಿಯನ್ನು ಸಲ್ಲಿಸಿದ್ದರು. ಈ
ಕಲ್ಲಡ್ಕ ಭಟ್ ವಿರುದ್ಧ 307 ಕೇಸ್ ಹಾಕಲು ಸೂಚಿಸಿದ ರಮಾನಾಥ ರೈ Read More »
ಕರಾವಳಿ(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.18. ಉಡುಪಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ ಅವರು ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಉಡುಪಿಗೆ ತೆರಳಿದರು. ಈ ಸಂದರ್ಭ ರಾಷ್ಟ್ರಪತಿಯನ್ನು ಮಂಗಳೂರಿನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಕೆ ಜೆ ಜಾರ್ಜ್, ರಮಾನಾಥ ರೈ, ಯು. ಟಿ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಪ್ರಣವ್ ಮುಖರ್ಜಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ
ಕರಾವಳಿಗೆ ಆಗಮಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ Read More »
ಕರ್ನಾಟಕ(ನ್ಯೂಸ್ ಕಡಬ) newskadaba.com ಕಡಬ, ಜೂ.18. ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕೃಷಿಕರಿಗೆ ಉಚಿತ ತರಕಾರಿ ಬೀಜ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮವು ಮರ್ದಾಳದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಹೆಗ್ಡೆ ಅವರು ಮಾತನಾಡಿ, ಸಮಾಜ ಸೇವೆಯ ಉದ್ದೇಶದಿಂದ ವಿಜಯ ಬ್ಯಾಂಕ್ ಆರಂಭಿಸಿರುವ ಪ್ರತಿಷ್ಠಾನವು ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹೊಲಿಗೆ ತರಬೇತಿ ಕೇಂದ್ರ, ಗೃಹೋಪಯೋಗಿ ವಸ್ತುಗಳ ತಯಾರಿಕಾ ತರಬೇತಿ, ರಬ್ಬರ್
ಮರ್ದಾಳ: ಕೃಷಿಕರಿಗೆ ಉಚಿತ ತರಕಾರಿ ಬೀಜ ವಿತರಣೆ Read More »
ಕರಾವಳಿ(ನ್ಯೂಸ್ ಕಡಬ) newskadaba.com ಕಡಬ, ಜೂ,17. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಅಧೀನದಲ್ಲಿ ಮೇ ತಿಂಗಳಿನಲ್ಲಿ ನಡೆದ +2 ಪರೀಕ್ಷೆಯಲ್ಲಿ ಆತೂರು ತದ್ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಆದಂ ಶಾಕಿರ್ ಸುಹೈಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಅಲ್ಲದೆ ಅತೀ ಹೆಚ್ಚು ಅಂಕ ಪಡೆದು ಉಪ್ಪಿನಂಗಡಿ ರೇಂಜ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆದಂ ಶಾಕಿರ್ ಸುಹೈಬ್ 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿಯೂ ವಿಜ್ಞಾನ ವಿಭಾಗದಲ್ಲಿ 96 ಶೇಕಡಾ ಅಂಕದೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.
ಸಮಸ್ತ ಪರೀಕ್ಷೆ: ಉಪ್ಪಿನಂಗಡಿ ರೇಂಜ್ ನಲ್ಲಿ ಆದಂ ಶಾಕಿರ್ ಪ್ರಥಮ Read More »
ಕರಾವಳಿ(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ದಿನೇಶ್ ಹಾಲೆಮಜಲು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿಶ್ವನಾಥ ನಡುತೋಟ ಹಾಗೂ ಕೋಶಾಧಿಕಾರಿಯಾಗಿ ಭರತ್ ನೆಕ್ರಾಜೆ ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪ್ರಕಾಶ್ ರವರು ಕನ್ನಡ ಪ್ರಭ ಮತ್ತು ವಾರ್ತಾ ಭಾರತಿ ಪತ್ರಿಕೆ ಹಾಗೂ ಡೈಜಿವರ್ಲ್ಡ್ ದೃಶ್ಯ ಮಾಧ್ಯಮದ ಸುಬ್ರಹ್ಮಣ್ಯ ವಲಯದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆ Read More »
ಕರಾವಳಿ(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮೌಲ್ಯಾಧಾರಿತ ಶಿಕ್ಷಣದೊಂದಿಗೆ ರಾಷ್ಟ್ರಭಕ್ತಿಯ ಜ್ಞಾನವನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪ್ರೇರಣೆ ದೊರೆಯುತ್ತದೆ. ಈ ಕೆಲಸವನ್ನು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಮಾಡುತ್ತಿದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ ವ್ಯಕ್ತಪಡಿಸಿದರು. ಅವರು ಶನಿವಾರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಸಿಸ್ಕೋ ಸಂಭ್ರಮ ಪ್ರಾಯೋಜಿತ ಸಮುದಾಯ ಕಂಪ್ಯುಟರ್ ಶಿಕ್ಷಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು
ಮೌಲ್ಯಾಧಾರಿತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ: ನಳಿನ್ ಕುಮಾರ್ Read More »
ಕರಾವಳಿ(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.17. ಬೆಂಕಿ ಮತ್ತು ಸುರಕ್ಷತೆ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅರ್ಹತೆ ಗಳಿಸುವುದಕ್ಕೆ ಸಂಬಂಧಿಸಿದಂತೆ ಹತ್ತನೇ ತರಗತಿ ಅಥವಾ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಫೈರ್ ಆ್ಯಂಡ್ ಸೇಫ್ಟಿ ಮತ್ತು ಆತಿಥ್ಯ ಕ್ಷೇತ್ರದಲ್ಲಿ ದೇಶ- ವಿದೇಶದಲ್ಲಿ ಬಹಳಷ್ಟು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದನ್ನು ಗಮನಿಸಿ ಮಂಗಳೂರಿನ ಪ್ರತಿಷ್ಠಿತ IBVE ಸಂಸ್ಥೆಯು ಇದಕ್ಕೆ ಸಂಬಂಧಿಸಿದಂತೆ ಸೇಫ್ಟಿ ಆಫೀಸರ್, ಹೆಚ್.ಎಸ್.ಇ ಅಧಿಕಾರಿ, ಸೇಫ್ಟಿ ಇಂಜೀನಿಯರ್ ಹಾಗೂ ಹೋಟೆಲ್ ಎಂಡ್
ಫೈರ್ ಆ್ಯಂಡ್ ಸೇಫ್ಟಿ, ಆತಿಥ್ಯ ಕ್ಷೇತ್ರದಲ್ಲಿ ಭವಿಷ್ಯದ ಭರವಸೆ IBVE Read More »
ಕರಾವಳಿ