ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.10. ಕರಾವಳಿಯು ಕಳೆದ ಒಂದು ತಿಂಗಳಿನಿಂದ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದು, ಕೋಮು ಸಂಘರ್ಷಕ್ಕೆ ಎರಡು ಹೆಣಗಳು ಉರುಳಿವೆ. ಎರಡೂ ಧರ್ಮಗಳ ನಡುವೆ ಸರಿಪಡಿಸಲಾಗದಷ್ಟು ದೊಡ್ಡ ಕಂದಕ ನಿರ್ಮಾಣವಾಗಿದೆ. ದಿನಂಪ್ರತಿ ಕೋಮು ಪ್ರಚೋದಿತ ಹಿಂಸಾಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ಜಿಲ್ಲೆಯ ಶಾಂತಿಪ್ರಿಯ ನಾಗರೀಕರನ್ನು ಆತಂಕಕ್ಕೀಡುಮಾಡಿದೆ. ಇವೆಲ್ಲದರ ಮಧ್ಯೆ 5 ದಿನಗಳ ಹಿಂದೆ ಪುತ್ತೂರಿನ ಅರಿಯಡ್ಕದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಗಾಯಾಳು ಯುವಕರನ್ನು ಹಿಂದೂ ಸಂಘಟನೆಯ ಪ್ರಮುಖರೊಬ್ಬರು ಆಸ್ಪತ್ರೆಗೆ […]









