Kadaba News

ಚುನಾವಣೆಯಲ್ಲಿ ಆಯ್ಕೆಯಾದ ವಿಜಯಿ ಅಭ್ಯರ್ಥಿಗಳಿಗೆ ಸಚಿವರಿಂದ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿಜಯಿ ಅಭ್ಯರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಅಭಿನಂದಿಸಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಅಗತ್ಯ ಸಂಪನ್ಮೂಲಗಳನ್ನು ಸೃಷ್ಠಿಸಲು ಹಾಗೂ ಬಳಸಿಕೊಳ್ಳಲು ರಾಜ್ಯ ಸರಕಾರದಿಂದ ಎಲ್ಲಾ ನೇರವನ್ನು ಒದಗಿಸುವುದಾಗಿ ಸಚಿವರು ಹೇಳಿದರು.ಚುನಾವಣೆಯಲ್ಲಿ ವಿಜಯಿಗಳಾದ ಅಭ್ಯರ್ಥಿಗಳಿಗೆ ಹಾಗೂ ಮತದಾನ ಮಾಡಿದ ಮತದಾರರಿಗೆ ಉಸ್ತುವಾರಿ ಸಚಿವರು ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದರು. ಜನರನ್ನು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನರ ವಿಶ್ವಾಸಕ್ಕೆ ಕುಂದು ಉಂಟಾಗದಂತೆ ಕೆಲಸ […]

ಚುನಾವಣೆಯಲ್ಲಿ ಆಯ್ಕೆಯಾದ ವಿಜಯಿ ಅಭ್ಯರ್ಥಿಗಳಿಗೆ ಸಚಿವರಿಂದ ಅಭಿನಂದನೆ Read More »

ಕರಾವಳಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧಾ ವಿಜೇತರ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಾಲ್ಕು ವಿಭಾಗಗಳಲ್ಲಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಇಂತಿದೆ. ತುಳುನಾಡಿನ ಅಪೂರ್ವ ಕ್ಷೇತ್ರ ಪರಿಚಯ ವಿಭಾಗದಲ್ಲಿ ಪ್ರಥಮ ನವೀನ್‍ಕುಮಾರ್ ಪೆರಾರ, ದ್ವಿತೀಯ ಸದಾನಂದ ನಾರಾವಿತುಳುನಾಡಿನ ಅಪೂರ್ವ ಸಾಧಕರು ವಿಭಾಗದಲ್ಲಿ ಪ್ರಥಮ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ದ್ವಿತೀಯ ಡಾ. ಕರುಣಾಕರ್ ಎನ್ ಶೆಟ್ಟಿ ತುಳುನಾಡಿನ ಅಪೂರ್ವ ನಂಬಿಕೆ ವಿಭಾಗದಲ್ಲಿ ಪ್ರಥಮ ಸುನಿತಾ ಶೆಣೈ, ದ್ವಿತೀಯ ಭರತೇಶ ಅಲಸಂಡೆಮಜಲು ತುಳುನಾಡಿನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧಾ ವಿಜೇತರ ಆಯ್ಕೆ Read More »

ಕರಾವಳಿ

2019-20ನೇ ಸಾಲಿನ ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಪ್ರವೇಶಾತಿ ➤ಅರ್ಜಿ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.2019-20ನೇ ಸಾಲಿನ ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಡಿಪ್ಲೋಮಾ ಬಯಸುವ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ನೀಡುವ ಹಾಗೂ ಸ್ವೀಕರಿಸುವ ದಿನಾಂಕವನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್  www.dte.kar.nic.in ಮತ್ತು ಕರ್ನಾಟಕ ಸಂಜೆ ಪಾಲಿಟೆಕ್ನಿಕ್‍ನ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಎಂದು ಸ್ಪೆಷಲ್ ಆಫೀಸರ್, ಕರ್ನಾಟಕ ಸರ್ಕಾರಿ (ಸಂಜೆ) ಪಾಲಿಟೆಕ್ನಿಕ್, ಕದ್ರಿ ಹಿಲ್ಸ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

2019-20ನೇ ಸಾಲಿನ ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಪ್ರವೇಶಾತಿ ➤ಅರ್ಜಿ ಅವಧಿ ವಿಸ್ತರಣೆ Read More »

ಕರಾವಳಿ

ದ.ಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ➤ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಗಳಿಗೆ ದಾಖಲಾತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಬೋಳಾರ ಮಂಗಳೂರು ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಚಿಲಿಂಬಿ, ದೇರಳಕಟ್ಟೆ, ಗುರುಕಂಬ್ಲ, ಬೆಂಜನಪದವು ಹಾಗೂ ಕಡಬ ಇಲ್ಲಿಗೆ ದಾಖಲಾತಿಗೆ ಅರ್ಜಿ ಆಹ್ವಾನಿಸಿದ್ದು, ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಚೇರಿ, ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಮತ್ತು

ದ.ಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ➤ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಗಳಿಗೆ ದಾಖಲಾತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ಕರ್ನಾಟಕ ಸರ್ಕಾರವು ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಇಂದು  ಅಪರಾಹ್ನ 4 ಗಂಟೆಗೆ ವಾರ್ಡ್ ನಂ. 18 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕಾವೂರು ಮಾರ್ಕೆಟ್ ಬಳಿ ಕೆಯುಐಡಿಎಫ್‍ಸಿ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ. ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ Read More »

ಕರಾವಳಿ

ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ “ರಂಗ ಶಾಲೆ” ಯನ್ನು ಕಳೆದ ಒಂಬತ್ತು ವರ್ಷಗಳಿಂದ ನಡೆಸುತ್ತಿದ್ದು, ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ನೀಡಿದೆ. ಇದು ಹತ್ತನೇ ವರ್ಷ. ಈ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮಾ’ ಕೋರ್ಸಿನ 2019-20ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳ ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ.(10+2) ಆಗಿರಬೇಕು. 18 ತುಂಬಿದ 28 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು

ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಇಂದಿನಿಂದ ಆರಂಭ (IDCF)

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ರಾಷ್ಟ್ರೀಯ IDCF  (ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ) ಕಾರ್ಯಕ್ರಮವು ಜೂನ್ 03 ರಿಂದ ಜೂನ್ 17 ರ ತನಕ ಜರುಗಲಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ನಿಯಂತ್ರಿಸಲು ಪ್ರತಿ ವರ್ಷದಂತೆ ಈ ವರ್ಷವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣರಾವ್ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಚೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು

ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಇಂದಿನಿಂದ ಆರಂಭ (IDCF) Read More »

ಕರಾವಳಿ

ಗೃಹ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಅಮಿತ್ ಶಾ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂನ್.1. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಬಾರಿ ಕೇಂದ್ರ ಸರ್ಕಾರದ ಆಡಳಿತ ಆವಧಿಯಲ್ಲಿ ಅಮಿತ್ ಶಾ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡು ದಿನಗಳ ನಂತರ ಅಂದರೆ ಶನಿವಾರ ಗೃಹ ಸಚಿವರಾಗಿ ಅಧಿಕಾರವಹಿಸಿಕೊಂಡು ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. 54ವರ್ಷವಯಸ್ಸಿನ ಅಮಿತ್ ಶಾ ಬಿಳಿ ಬಣ್ಣದ ಕುರ್ತಾ ಮೇಲೆ ತಿಳಿ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಇಂದು ಸಂಸತ್ ನ  ಉತ್ತರ ಬ್ಲಾಕ್ ನಲ್ಲಿರುವ ಕೊಠಡಿಗೆ ತೆರಳಿದ್ದ ಅಮಿತ್ ಶಾ

ಗೃಹ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಅಮಿತ್ ಶಾ Read More »

ರಾಷ್ಟ್ರೀಯ ನ್ಯೂಸ್

ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ

  (ನ್ಯೂಸ್ ಕಡಬ) newskadaba.com ,ಕಲ್ಲುಗುಡ್ಡೆ  ಜೂನ್.1.ಕಳೆದ 2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದ ಬಳಿಕ ಎಂಡೋಪೀಡಿತ ವಿದ್ಯಾರ್ಥಿ ಮನೋಜ್ ಕುಮಾರ್ ಕನ್ನಡದಲ್ಲಿ ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಈ ಮೊದಲು ಕನ್ನಡದಲ್ಲಿ 67 ಅಂಕ ಪಡೆದಿದ್ದು, ಮರುಮೌಲ್ಯಮಾಪನದ ಬಳಿಕ ಹೆಚ್ಚುವರಿ 14 ಅಂಕ ಸೇರ್ಪಡೆಗೊಂಡಿದ್ದು ಇದೀಗ ಕನ್ನಡದಲ್ಲಿ ಒಟ್ಟು 81 ಅಂಕ ಪಡೆದಿದ್ದಾರೆ. ಇವರ ಒಟ್ಟು ಅಂಕ ಇದೀಗ 406 ಆಗಿದೆ. ಮನೋಜ್ ಕುಮಾರ್ ಎಂಡೋಪೀಡಿತನಾಗಿದ್ದು, ಕೊೈಲ

ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ Read More »

ಕರಾವಳಿ

ನರೇಂದ್ರ ಮೋದಿ ಪ್ರಮಾನವಚನ ➤ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು

(ನ್ಯೂಸ್ ಕಡಬ) newskadaba.com , ಕಲ್ಲುಗುಡ್ಡೆ, ಜೂನ್.1. ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಲಾಯಿತು. ಸತತ ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಪಡೆದು ಪದಗ್ರಹಣ ಸಮಾರಂಭ ನಡೆಯುತ್ತಿರುವ ಸಂಭ್ರಮದಲ್ಲಿ ನೂಜಿಬಾಳ್ತಿಲ ಗ್ರಾಮದ ನೀರಾರಿ ಛತ್ರಪತಿ ವೃತ್ತದ ಬಳಿ ಸೇರಿದ ಮೋದಿ ಅಭಿಮಾನಿಗಳು, ಕಾರ್ಯಕರ್ತರು ದೀಪ ಬೆಳಗಿ ಸಂಭ್ರಮಿಸಿ, ಬೈಠಕ್ ನಡೆಸಿದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.ಛತ್ರಪತಿ ವೃತ್ತದ ಬಳಿ ದೀಪ ಹಚ್ಚಿ ಮೋದಿ ಅಭಿಮಾನಿಗಳು ಸಂಭ್ರಮಿಸಿದರು.

ನರೇಂದ್ರ ಮೋದಿ ಪ್ರಮಾನವಚನ ➤ನೂಜಿಬಾಳ್ತಿಲದಲ್ಲಿ ದೀಪಹಚ್ಚಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು Read More »

ಕರಾವಳಿ
Scroll to Top