Kadaba News

ಬಸ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ

(ನ್ಯೂಸ್ ಕಡಬ) newskadaba.com ಹೆಬ್ರಿ, ಆಗಸ್ಟ್.28. ಉಡುಪಿಯಿಂದ ಕಾರ್ಕಳ ಹೋಗುತಿದ್ದ ಖಾಸಗಿ ಬಸ್ ಹಾಗೂ ಎದುರುಗಡೆಯಿಂದ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಹಿರಿಯಡ್ಕ ಓಂತಿಬೆಟ್ಟುಎಂಬಲ್ಲಿ ನಡೆದಿದೆ. ಸ್ಕೂಟಿ ಎದುರು ಕಾರೊಂದು ಚಲಿಸುತ್ತಿದ್ದು ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಒಮ್ಮೆಲೆ ಬಲ ಬದಿಗೆ ಬಂದ ಕಾರಣ ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಎನ್ನಲಾಗುತ್ತಿದೆ. ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದಾನೆ.ಗಾಯಗೊಂಡ ವ್ಯಕ್ತಿ ಮೂಲತಃ ಕುಂಜಿಬೆಟ್ಟುವಿನ ನಿವಾಸಿ ಪ್ರಸ್ತುತ ಪೆರ್ಡೂರಿನಲ್ಲಿ ವಾಸವಾಗಿರುವ ಮೂಲ್ಯ (೫೦) […]

ಬಸ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ Read More »

ಕರಾವಳಿ

ನೂತನ ಸಚಿವರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಕರ್ನಾಟಕ ಸರಕಾರದ ಬಂದರು, ಮೀನುಗಾರಿಕಾ ಹಾಗೂ ಮುಜರಾಯಿ ಇಲಾಖೆಯ ನೂತನ ಸಚಿವರಾದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಕಡಬ ತಾಲೂಕಿನ ಬಿಜೆಪಿಯ ಪ್ರಮುಖರಾದ ಎ.ಪಿ.ಎಂ.ಸಿ. ಸದಸ್ಯೆ ಪುಲಸ್ತ್ಯಾ ರೈ, ಮರ್ದಾಳ ಬಿಜೆಪಿ ಶಕ್ತಿ ಕೇಂದ್ರದ ಉಸ್ತುವಾರಿ ನೂಜಿಬಾಳ್ತಿಲದ ಉಮೇಶ್ ಶೆಟ್ಟಿ ಬೆಂಗಳೂರಿನ ಸಚಿವರ ಕಛೇರಿಯಲ್ಲಿ ಮಂಗಳವಾರ ಬೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ನೂತನ ಸಚಿವರಿಗೆ ಅಭಿನಂದನೆ Read More »

ಕರಾವಳಿ

ಮೆನ್ನಬೆಟ್ಟು ಗ್ರಾ.ಪಂ.ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಮೆನ್ನಬೆಟ್ಟು ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ಆಯೋಜಿಸಲಾಗಿದೆ. ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಇವರ ಪ್ರಕಟಣೆ ತಿಳಿಸಿದೆ.

ಮೆನ್ನಬೆಟ್ಟು ಗ್ರಾ.ಪಂ.ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ Read More »

ಕರಾವಳಿ

ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ➤ ತ್ರೈಮಾಸಿಕ ಅಂಚೆ ಅದಾಲತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಬಲ್ಮಠದಲ್ಲಿ ತ್ರೈಮಾಸಿಕ ಅಂಚೆ ಅದಾಲತ್ ಸೆಪ್ಟೆಂಬರ್ 6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಅಂಚೆ ಅದಾಲತ್ ತಲೆಬರಹದಡಿಯಲ್ಲಿ ಸೆಪ್ಟೆಂಬರ್ 4 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ ಮಂಗಳೂರು 575002 ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072 ಕಳುಹಿಸಬಹುದು. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸಬೇಕು

ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ➤ ತ್ರೈಮಾಸಿಕ ಅಂಚೆ ಅದಾಲತ್ Read More »

ಕರಾವಳಿ

ಸಮಾಜ ಕಲ್ಯಾಣ ಇಲಾಖೆ ಮಂಗಳೂರು ➤ ದೀಕ್ಷಾ ಭೂಮಿಯಾತ್ರೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿ ಯಾತ್ರೆಗೆ ನಿಯೋಜಿಸುವ ಕುರಿತು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ವೆಬ್‍ಸೈಟ್ www.sw.kar.nic.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಸಮಾಜ ಕಲ್ಯಾಣ ಇಲಾಖೆ ಮಂಗಳೂರು ➤ ದೀಕ್ಷಾ ಭೂಮಿಯಾತ್ರೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಕರ್ನಾಟಕ ಋಣ ಪರಿಹಾರ ಕಾಯ್ದೆ ➤ ಸಾಲ ಮನ್ನಾಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಕರ್ನಾಟಕ ಋಣ ಪರಿಹಾರ ವಿಧೇಯಕ – 2018 ಜುಲೈ 23 ರಿಂದ ಜಾರಿಗೆ ಬಂದಿರುತ್ತದೆ. ಅದರಂತೆ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ಮತ್ತು ದುರ್ಬಲ ವರ್ಗದ ಜನರು (ವಾರ್ಷಿಕ ಆದಾಯ ರೂ.1.20.000/- ಗಳ ಮೀರುದಿರುವ) ಖಾಸಗಿ ಲೇವದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ. ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂಕಂದಾಯದ ಹಿಂಬಾಕಿ ವಸೂಲಿ

ಕರ್ನಾಟಕ ಋಣ ಪರಿಹಾರ ಕಾಯ್ದೆ ➤ ಸಾಲ ಮನ್ನಾಗೆ ಅರ್ಜಿ ಆಹ್ವಾನ Read More »

ಕರಾವಳಿ

ಮಂಗಳೂರು ಮಹಾನಗರಪಾಲಿಕೆ ➤ ಆ.29- ನೀರು ಪೂರೈಕೆ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸುತ್ತಿರುದರಿಂದ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹಾಗೂ ಜಾಕ್‍ವೆಲ್‍ನ್ನು ಶುಚಿಗೊಳಿಸಲು ಹಾಗೂ ಎನ್.ಆರ್.ವಿ ದುರಸ್ಥಿಗೊಳಿಸಲು ಆಗಸ್ಟ್ 29 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರಗೆ ಹಮ್ಮಿಕೊಳ್ಳಲಾಗಿದೆ. ಸದ್ರಿ ಅವಧಿಯಲ್ಲಿ ಪಡೀಲ್ ರೇಚಕ ಸ್ಥಾವರದಿಂದ ನೀರು ಸರಬರಾಜಾಗುವ ಮಂಗಳೂರು ನಗರ ಭಾಗಶಃ ಪ್ರದೇಶ,

ಮಂಗಳೂರು ಮಹಾನಗರಪಾಲಿಕೆ ➤ ಆ.29- ನೀರು ಪೂರೈಕೆ ಸ್ಥಗಿತ Read More »

ಕರಾವಳಿ

ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಇಫ್ಕೋ ಕಂಪನಿವತಿಯಿಂದ ರಸಗೊಬ್ಬರ ವಿಶೇಷ ರಿಯಾಯತಿ ದರದಲ್ಲಿ ಮಾರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಇಫ್ಕೋ ಕಂಪನಿಯವರು ಇಫ್ಕೋ 10:26:26 ಮತ್ತು ಡಿಎಪಿ ದರಗಳ ಎಂ.ಆರ್.ಪಿ. ದರವನ್ನು ಇಳಿಮುಖವಾಗಿ ಪರಿಷ್ಕರಿಸಿರುತ್ತಾರೆ. ಆದುದರಿಂದ, ಪ್ರತಿ 50 ಕೆ.ಜಿ. ಚೀಲಕ್ಕೆ ರೈತರು ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ. ದರದ ಬದಲು ಇಫ್ಕೋ 10:26:26 – ಪರಿಷ್ಕೃತ ದರ ರೂ.1200 ಹಾಗೂ ಇಫ್ಕೋ ಡಿಎಪಿ – ಪರಿಷ್ಕೃತ ದರ ರೂ.1250 ದರಗಳನ್ನು ನೀಡಿ ಖರೀದಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಇಫ್ಕೋ ಕಂಪನಿವತಿಯಿಂದ ರಸಗೊಬ್ಬರ ವಿಶೇಷ ರಿಯಾಯತಿ ದರದಲ್ಲಿ ಮಾರಾಟ Read More »

ಕರಾವಳಿ

ರಾಷ್ಟ್ರೀಯ ಜನತಾ ನ್ಯಾಯಾಲಯ ➤ ಪ್ರಕರಣಗಳ ವಿಲೇವಾರಿಗೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದಂತೆ ಸಪ್ಟೆಂಬರ್ 14 ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಜನತಾ ನ್ಯಾಯಾಲಯದ ಬೈಠಕ್‍ಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಿವಿಲ್, ಕ್ರಿಮಿನಲ್, ಮೋಟಾರು ವಾಹನಗಳ ಅಪಘಾತ ಪ್ರಕರಣಗಳ ವಿಲೇವಾರಿಗಾಗಿಕ್ರಮಕೈಗೊಳ್ಳಲಾಗಿರುತ್ತದೆ ಹಾಗೂ ವಿವಿಧ ಬ್ಯಾಂಕ್‍ಗಳ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಈ

ರಾಷ್ಟ್ರೀಯ ಜನತಾ ನ್ಯಾಯಾಲಯ ➤ ಪ್ರಕರಣಗಳ ವಿಲೇವಾರಿಗೆ ಅವಕಾಶ Read More »

ಕರಾವಳಿ

ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ➤ ಗೃಹ ರಕ್ಷಕ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ಇಲ್ಲಿ ಗೃಹ ರಕ್ಷಕ ತರಬೇತಿ ನಡೆಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಉಪ್ಪಿನಂಗಡಿ ಘಟಕದ ಇಬ್ಬರು  ಗೃಹರಕ್ಷಕರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಜುಲೈ 29 ರಿಂದ ಆಗಸ್ಟ್ 23 ರವರೆಗೆ 26 ದಿನಗಳು ನಡೆದ ಲೈಟ್ ರೆಸ್ಕ್ಯೂ ಕಮ್ ಪ್ಲಡ್ ರೆಸ್ಕ್ಯೂ ತರಬೇತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಪ್ಪಿನಂಗಡಿ ಘಟಕದ ಗೃಹರಕ್ಷಕರಾದ ಚರಣ್ ಕುಮಾರ್ ಮತ್ತು ಬಿ. ಆರಿಸ್ ಯಶಸ್ವಿಯಾಗಿ ಪೂರೈಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು ➤ ಗೃಹ ರಕ್ಷಕ ತರಬೇತಿ Read More »

ಕರಾವಳಿ
Scroll to Top