Kadaba News

ಜ.14 ರಂದು ಪುತ್ತೂರು ಸಾರಿಗೆ ಅದಾಲತ್

(ನ್ಯೂಸ್ ಕಡಬ) newskadaba.com, ಪುತ್ತೂರು, ಜ.4   ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 14 ರಂದು ಮಧ್ಯಾಹ್ನ 3.30 ಗಂಟೆಗೆ ಸಾರಿಗೆ ಅದಾಲತ್ ನಡೆಯಲಿದೆ. ಸಭೆಯಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳ ಬಗ್ಗೆ ಅಹವಾಲುಗಳು ಮತ್ತು ಸಲಹೆ ಸೂಚನೆಗಳನ್ನು ಸಲ್ಲಿಸಬಹುದು  ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.

ಜ.14 ರಂದು ಪುತ್ತೂರು ಸಾರಿಗೆ ಅದಾಲತ್ Read More »

ಕರಾವಳಿ

ಉದರ ದರ್ಶಕ ಶಸ್ತ್ರಚಿಕಿತ್ಸೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.4  ದಕ್ಷಿಣ ಕನ್ನಡ ಜಿಲ್ಲೆಯ 2020ನೇ ಜನವರಿ ಮಾಹೆಯಲ್ಲಿ ನಡೆಯುವ ಪರಿಷ್ಕೃತ ಉದರ ದರ್ಶಕ ಶಸ್ತ್ರಚಿಕಿತ್ಸೆಯ ವಿವರ ಹೀಗಿವೆ, ಜನವರಿ 07 ರಂದು ಪುತ್ತೂರು ತಾಲೂಕಿನ  ಸರಕಾರಿ ಆರೋಗ್ಯ ಕೇಂದ್ರ ಕಡಬ ಮತ್ತು ಮಂಗಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಗಂಜಿಮಠ, 10 ರಂದು ಬಂಟ್ವಾಳ  ತಾಲೂಕಿನ  ತಾಲೂಕು ಆಸ್ಪತ್ರೆ ಮತ್ತು ಸುಳ್ಯ ತಾಲೂಕಿನ ಸಾರ್ವಜನಿಕ ಆಸ್ಪತ್ರೆ, 13 ರಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆ, 14 ರಂದು ಮಂಗಳೂರು ತಾಲೂಕಿನ ಪ್ರಾಥಮಿಕ

ಉದರ ದರ್ಶಕ ಶಸ್ತ್ರಚಿಕಿತ್ಸೆ Read More »

ಕರಾವಳಿ

ಜ.4: ಬಿಳಿನೆಲೆಯಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ

(ನ್ಯೂಸ್ ಕಡಬ) newskadaba.com, ಸುಬ್ರಹ್ಮಣ್ಯ, ಜ.3   ಪುತ್ತೂರು ಶ್ರೀ.ಕ್ರೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್, ಬಿಳಿನೆಲೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬಿಳಿನೆಲೆ ವಲಯ ಜನಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಫೋಕ್ತ ಪೂಜಾ ಕಾರ್ಯಕ್ರಮ ನಾಳೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ. ಸಂಜೆ ಗಂಟೆ 4ರಿಂದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ಗಂಟೆ 5ರಿಂದ ಶನೈಶ್ಚರ ಪೂಜೆ ಪ್ರಾರಂಭಗೊಳ್ಳಲಿದೆ. ಬಿಳಿನೆಲೆ ಶ್ರೀ

ಜ.4: ಬಿಳಿನೆಲೆಯಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ Read More »

ಕರಾವಳಿ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.27   ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ 2019-20 ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಟ 5 ವರ್ಷಗಳಿಂದ ಮಹಿಳಾ ಅಭಿವೃದ್ದಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತಾವನೆಯನ್ನು

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ – ಅರ್ಜಿ ಆಹ್ವಾನ Read More »

ಕರಾವಳಿ

ಡಿ.22: ಕಲ್ಲುಗುಡ್ಡೆಯಲ್ಲಿ ಕಬಡ್ಡಿ ಪಂದ್ಯಾಟ, ಸನ್ಮಾನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.19   ನೂಜಿಬಾಳ್ತಿಲ ಕಲ್ಲುಗುಡ್ಡೆ ಅಪ್ಪೆ ಜಕ್ಕೆಲ್ ಯುವಕ ವೃಂದದ ವತಿಯಿಂದ ಕಲ್ಲುಗುಡ್ಡೆ ದಿ. ಅಂಗಾರ ಅಜಿಲ ಹಾಗೂ ದಿ. ಲಿಂಗಮ್ಮ ಅವರ ಸ್ಮರಣಾರ್ಥ ನಲಿಕೆ ಸಮಾಜ ಬಂಧುಗಳ ಮುಕ್ತ ಕಬಡ್ಡಿ ಪಂದ್ಯಾಟ ಡಿ. 22ರಂದು ಕಲ್ಲುಗುಡ್ಡೆ ನೂಜಿಬಾಳ್ತಿಲ ಸ.ಉ.ಹಿ.ಪ್ರಾ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ದೈವ ನರ್ತಕ ರಾಮ ಅಜಿಲ ಉದ್ಘಾಟಿಸಲಿದ್ದು, ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ, ನಿವೃತ್ತ

ಡಿ.22: ಕಲ್ಲುಗುಡ್ಡೆಯಲ್ಲಿ ಕಬಡ್ಡಿ ಪಂದ್ಯಾಟ, ಸನ್ಮಾನ Read More »

ಕರಾವಳಿ

ಹೋಟೆಲ್, ಕ್ಲಬ್‍ಗಳಲ್ಲಿ ಹೊಸ ವರ್ಷಾಚರಣೆ : ಪೂರ್ವಾನುಮತಿ ಕಡ್ಡಾಯ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.12   2020ರ ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ವಹಿಸಲಾಗಿದೆ. ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗದವರು ನೂತನ ವರ್ಷಾಚರಣೆ ಆಚರಿಸಲು ಏರ್ಪಡಿಸಲು ಇಚ್ಚಿಸಿದಲ್ಲಿ ಈ ಕುರಿತು ಕಡ್ಡಾಯವಾಗಿ ಮಂಗಳೂರು

ಹೋಟೆಲ್, ಕ್ಲಬ್‍ಗಳಲ್ಲಿ ಹೊಸ ವರ್ಷಾಚರಣೆ : ಪೂರ್ವಾನುಮತಿ ಕಡ್ಡಾಯ Read More »

ಕರಾವಳಿ

ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.12  ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟೆ ಇವರ ವತಿಯಿಂದ ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ ಜನವರಿ ತಿಂಗಳಲ್ಲಿ ಬಾಗಲಕೋಟೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ 18 ರಿಂದ 55 ವರ್ಷದೊಳಗಿನ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು ಡಿಸೆಂಬರ್ 31 ರೊಳಗೆ ಮೊಬೈಲ್ ಸಂಖ್ಯೆ 9482630790

ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರ Read More »

ಕರಾವಳಿ

ಕಡಬ: ಬೈಕ್ ಮತ್ತು ಮಾರುತಿ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com, ಕಡಬ, ಡಿ.11  ಬೈಕ್ ಮತ್ತು ಮಾರುತಿ ನಡುವೆ ಡಿಕ್ಕಿ ಸಂಭವಿಸಿ ವಾಹನಗಳು ಜಖಂಗೊಂಡು ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ನಿನ್ನೆ ನಡೆದಿದೆ. ಮೋಟಾರ್ ಸೈಕಲ್ ಸವಾರ ಗಣೇಶ್ ಎಂಬವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಸವಾರನು ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿನ ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ 108 ನೇ ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್

ಕಡಬ: ಬೈಕ್ ಮತ್ತು ಮಾರುತಿ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10   ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ, ಬೆಂಗಳೂರು ಇವರ ಸುತ್ತೋಲೆಯಲ್ಲಿ 2019-20ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಬ್ಯಾಡ್ಮಿಂಟನ್ ಪಂದ್ಯಾವಳಿ ಡಿಸೆಂಬರ್ 27 ರಿಂದ ಜನವರಿ 2 ರವರೆಗೆ ಸಚಿವಾಲಯ ಜಿಮ್ಕಾನ್, ಸೆಕ್ಟರ್-21, ಗಾಂಧಿನಗರ, ಗುಜರಾತ್ ಇಲ್ಲಿ ನಡೆಯಲಿದೆ. ಈ ಸಂಬಂಧ ರಾಜ್ಯ ತಂಡವನ್ನು ಡಿಸೆಂಬರ್ 15 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಗೆ ಜಿಲ್ಲಾ ಮಟ್ಟದಿಂದ ನಾಗರಿಕ ಸೇವಾ

ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ Read More »

ಕರಾವಳಿ

ಸಮ್ಯಕ್ತ್ ಜೈನ್ ಅವರ ಮಾರ್ದನಿ ಕವನಸಂಕಲನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.10   ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಮ್ಯಕ್ತ್ ಹೆಚ್. ಜೈನ್ ಅವರ ಮಾರ್ದನಿ ಕವನಸಂಕಲನವನ್ನು ಪುತ್ತೂರಿನಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು. ಪುತ್ತೂರು ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳು ಕವನಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಇದು ಸಮ್ಯಕ್ತ್  ಜೈನ್ ಅವರ  ಮೂರನೇ ಕವನಸಂಕಲನವಾಗಿದ್ದು, ಈ ಹಿಂದೆ ಅಂಕುರ ಹಾಗೂ ಮಂಜರಿ ಎಂಬ ಕೃತಿಯನ್ನು ರಚಿಸಿ ಬಿಡುಗಡೆಗೊಳಿಸಿದ್ದರು. ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇವರು ನೂಜಿಬಾಳ್ತಿಲ

ಸಮ್ಯಕ್ತ್ ಜೈನ್ ಅವರ ಮಾರ್ದನಿ ಕವನಸಂಕಲನ ಬಿಡುಗಡೆ Read More »

ಕರಾವಳಿ
Scroll to Top