ಉದರ ದರ್ಶಕ ಶಸ್ತ್ರಚಿಕಿತ್ಸೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.4  ದಕ್ಷಿಣ ಕನ್ನಡ ಜಿಲ್ಲೆಯ 2020ನೇ ಜನವರಿ ಮಾಹೆಯಲ್ಲಿ ನಡೆಯುವ ಪರಿಷ್ಕೃತ ಉದರ ದರ್ಶಕ ಶಸ್ತ್ರಚಿಕಿತ್ಸೆಯ ವಿವರ ಹೀಗಿವೆ, ಜನವರಿ 07 ರಂದು ಪುತ್ತೂರು ತಾಲೂಕಿನ  ಸರಕಾರಿ ಆರೋಗ್ಯ ಕೇಂದ್ರ ಕಡಬ ಮತ್ತು ಮಂಗಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಗಂಜಿಮಠ, 10 ರಂದು ಬಂಟ್ವಾಳ  ತಾಲೂಕಿನ  ತಾಲೂಕು ಆಸ್ಪತ್ರೆ ಮತ್ತು ಸುಳ್ಯ ತಾಲೂಕಿನ ಸಾರ್ವಜನಿಕ ಆಸ್ಪತ್ರೆ, 13 ರಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆ, 14 ರಂದು ಮಂಗಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, 17 ರಂದು ಬೆಳ್ತಂಗಡಿ ತಾಲೂಕಿನ ತಾಲೂಕು ಆಸ್ಪತ್ರೆ, ಮತ್ತು ಬಂಟ್ವಾಳ ತಾಲೂಕಿನ ವಿಟ್ಲ, ಮಾಣಿ,   ಪ್ರಾಥಮಿಕ ಆರೋಗ್ಯ ಕೇಂದ್ರ, 24 ರಂದು ಮಂಗಳೂರು ತಾಲೂಕಿನ ಸರಕಾರಿ ಆರೋಗ್ಯ ಕೇಂದ್ರ ಮೂಡಬಿದ್ರೆ, 27 ರಂದು ಮಂಗಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳಾಲದಲ್ಲಿ ನಡೆಯಲಿದೆ.


ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Scroll to Top