Kadaba News

ದ.ಕ :ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27: ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ 114 ಗ್ರಾಮ ಪಂಚಾಯತ್ ನ 1,500 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಬೂತ್ ಗಳಲ್ಲಿ ಬೆಳಗ್ಗಿನ ಜಾವ ಮತದಾನ ಮಾಡಲು ಉದ್ದದ ಸರತಿ ಸಾಲು ಕಂಡು ಬಂದಿದೆ. ಸುಳ್ಯ ಶಾಸಕ ಎಸ್.ಅಂಗಾರ ಅವರು ಅಮರಮುಡ್ನೂರು ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು. ಕುಟುಂಬ ಸಮೇತರಾಗಿ […]

ದ.ಕ :ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದೆ Read More »

ಕರಾವಳಿ

ರಮೇಶ್ ಅರವಿಂದ್ ಮನೆಯಲ್ಲಿ ಪುತ್ರಿಯ ಮದುವೆ ಸಂಭ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.26: ಖ್ಯಾತ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಇದೇ ಡಿಸೆಂಬರ್ 28 ರಂದು ನಡೆಯಲಿದೆ. ‌ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಡುತ್ತಿದ್ದಾರೆ. ಇವರ ವಿವಾಹ ಮಹೋತ್ಸವ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ನಡೆಯಲಿದೆ. ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು

ರಮೇಶ್ ಅರವಿಂದ್ ಮನೆಯಲ್ಲಿ ಪುತ್ರಿಯ ಮದುವೆ ಸಂಭ್ರಮ Read More »

ಸಿನಿಮಾ

ಮಂಗಳೂರು :ಸೇತುವೆಯಿಂದ ನದಿಗೆ ಹಾರಿದ ಮಹಿಳೆ ➤ ಸ್ಥಳೀಯರು, ಪೊಲೀಸರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26: ಕೂಳೂರು ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಿಳೆಯನ್ನು ಕೃಷ್ಣಾಪುರದ ನಿವಾಸಿ, ವಿವಾಹಿತೆ ಜುಲೈಖಾ ಎಂದು ಗುರುತಿಸಲಾಗಿದೆ. ಮಹಿಳೆ ತಾನು ಬಂದಿದ್ದ ದ್ವಿಚಕ್ರವಾಹನವನ್ನು ಸೇತುವೆ ಬಳಿ ನಿಲ್ಲಿಸಿ ಏಕಾಏಕಿ ಸೇತುವೆಯಿಂದ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಕೆ ನದಿಗೆ ಹಾರಿದ್ದನ್ನು ಗಮನಿಸಿ ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರು ಸಂಚಾರ ಉತ್ತರ ಠಾಣೆ ಇಂಟರ್ ಸೆಪ್ಟರ್ ವಾಹನದ ಎಎಸ್‌ಐ ಮಂಜುನಾಥ ಹಾಗೂ ಸಿಬಂದಿ ಈಕೆಯ ರಕ್ಷಣೆಗೆ

ಮಂಗಳೂರು :ಸೇತುವೆಯಿಂದ ನದಿಗೆ ಹಾರಿದ ಮಹಿಳೆ ➤ ಸ್ಥಳೀಯರು, ಪೊಲೀಸರಿಂದ ರಕ್ಷಣೆ Read More »

ಕರಾವಳಿ

ನಟ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸ ➤ ಅಭಿಮಾನಿಗಳ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.26:  ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ನಡೆದಿದೆ. ಇದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಇಂದು ಬೆಳಿಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ವಿಷ್ಣು ಅಭಿಮಾನಿಗಳು ಜಮಾಯಿಸಿ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ತಪ್ಪಿತಸ್ಥರನ್ನು ಬಂಧಿಸಿರುವುದಾಗಿ ಭರವಸೆ ನೀಡಿದ ಬಳಿಕ

ನಟ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸ ➤ ಅಭಿಮಾನಿಗಳ ಆಕ್ರೋಶ Read More »

ಕರ್ನಾಟಕ

ಮಂಗಳೂರು :ಸಿಎಫ್ ಐ ನಿಂದ ಸಂಸದ ನಳಿನ್ ಕಚೇರಿಗೆ ಮುತ್ತಿಗೆ ಯತ್ನ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26: ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ( ಸಿಎಫ್ಐ) ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.   PFI ಮುಖಂಡರ ಮೇಲೆ ಇ.ಡಿ. ತನಿಖೆ ವಿರೋಧಿಸಿ ಸಿಎಫ್ ಐ ಕಾರ್ಯಕರ್ತರು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ‌ ನಡೆಸಿದರು.ಈ ವೇಳೆ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು, ಮಾತಿನ ಚಕಮಕಿ ನಡೆಯಿತು.ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ

ಮಂಗಳೂರು :ಸಿಎಫ್ ಐ ನಿಂದ ಸಂಸದ ನಳಿನ್ ಕಚೇರಿಗೆ ಮುತ್ತಿಗೆ ಯತ್ನ.! Read More »

ಕರಾವಳಿ

ಉಡುಪಿ: ಗೀತಾ ಮಂದಿರಲ್ಲಿ ಗೀತಾಜಯಂತಿ ಉತ್ಸವ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.26: ಗೀತಾಜಯಂತಿ ಉತ್ಸವವು ಉಡುಪಿಯ ಗೀತಾಮಂದಿರದಲ್ಲಿ ವೈಭವದಿಂದ ನಡೆಯಿತು. ಪರ್ಯಾಯ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥರು ಹಾಗೂ ಪುತ್ತಿಗೆ ಶ್ರೀಗಳವರಾದ ಶ್ರೀ ಸುಗುಣೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು. ಈ ವೇಳೆ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶ್ರೀಗಳು ಎಲ್ಲರ ಅಂತರ್ಯಾಮಿಯಾಗಿ ಪ್ರೇರಣೆಗೈದ ಭಗವಂತ ಶ್ರೀ ಕೃಷ್ಣ ರೂಪದಿಂದ ಅನುಗ್ರಹಿಸಿದ ಸಾಧನವೇ ಭಗವದ್ಗೀತೆ ಅತೀ ಶ್ರೇಷ್ಟ ಸಾಧನೀಯ ಗ್ರಂಥ ಎಂದರು. ಪುತ್ತಿಗೆ ಶ್ರೀಗಳು ಭಗವಂತನ ಸಹಜ ಉದ್ಗಾರವೇ ಗೀತೆ. .ಸಹಜವಾಗಿದ್ದು ಸತ್ಯವಾಗಿದ್ದು

ಉಡುಪಿ: ಗೀತಾ ಮಂದಿರಲ್ಲಿ ಗೀತಾಜಯಂತಿ ಉತ್ಸವ Read More »

ಕರಾವಳಿ

ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.26: ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ ಗೊಳ್ಳಲಿದೆ. ಉಪ್ಪಿನಂಗಡಿಯಲ್ಲಿ ಡಿ.28 ರ ಸೋಮವಾರ ಮಹಾಲಸ ಕಾಂಪ್ಲೆಕ್ಸ್, ಶೆನೈ ಹಾಸ್ಪಿಟಲ್ ಎದುರುಗಡೆ ಹೊಸದಾಗಿ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭಗೊಳ್ಳಲಿದೆ .ನೂತನ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂದಿಸಿದ ಎಲ್ಲಾ ವಸ್ತುಗಳು ಗಿಫ್ಟ್ ಐಟಂಗಳು ಹಾಗೂ ಎಲ್ಲಾ ರೀತಿಯ ವಾಚ್ , ಗಡಿಯಾರ ಮುಂತಾದ ವಸ್ತುಗಳು ಗ್ರಾಹಕರ

ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ Read More »

ಕರಾವಳಿ

ಕುತ್ತಾರು :ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಅಪಘಾತ ನಡೆಸಿ, ಚೂರಿಯಿಂದ ಇರಿದ ದುಷ್ಕರ್ಮಿಗಳು.?!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕಿನಲ್ಲಿ ಬಂದ ತಂಡವೊಂದು ಅಪಘಾತ ನಡೆಸಿ, ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ಕಳೆದ ದಿನ ತಡರಾತ್ರಿ ಸಂಭವಿಸಿದೆ.   ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್ (27) ಚೂರಿ ಇರಿತಕ್ಕೊಳಗಾದವರು .ಆದಿತ್ಯ ಮತ್ತು ಪವನ್ ಅವರು ಕ್ಯಾಟ್ರಿಂಗ್ ನಲ್ಲಿ ಕೆಲಸಕ್ಕಿದ್ದ ಸ್ನೇಹಿತನನ್ನು ಕರೆ ತರಲು ಕುತ್ತಾರ್ ನಿಂದ

ಕುತ್ತಾರು :ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಅಪಘಾತ ನಡೆಸಿ, ಚೂರಿಯಿಂದ ಇರಿದ ದುಷ್ಕರ್ಮಿಗಳು.?! Read More »

ಕರಾವಳಿ, ಕ್ರೈಮ್ ನ್ಯೂಸ್

ತೊಕ್ಕೊಟ್ಟು :ಬೈಕ್ – ಆ್ಯಕ್ಟಿವಾ ನಡುವೆ ನಸುಕಿನ ಜಾವ ಭೀಕರ ಅಪಘಾತ ➤ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು (ಶನಿವಾರ) ನಸುಕಿನ ಜಾವ ನಡೆದಿದೆ. ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಸುಮಾರು 3 ಗಂಟೆಯ ವೇಳೆ ಈ ಅಪಘಾತ ನಡೆದಿದ್ದು, ಸಂದೇಶ್ ಅವರು ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದರು.ಅಪಘಾತದ ಪರಿಣಾಮ ಸಂದೇಶ್ ರಸ್ತೆಗುರುಳಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮಂಗಳೂರಿನ

ತೊಕ್ಕೊಟ್ಟು :ಬೈಕ್ – ಆ್ಯಕ್ಟಿವಾ ನಡುವೆ ನಸುಕಿನ ಜಾವ ಭೀಕರ ಅಪಘಾತ ➤ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಪಡುಬಿದ್ರೆ :ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26:ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್ (22) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಾರುತಿ ಅಲ್ಟೋ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳ್ ಸರಕಾರಿ ಶಾಲೆ ಮುಂಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ

ಪಡುಬಿದ್ರೆ :ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು Read More »

ಕರಾವಳಿ
Scroll to Top