Kadaba News

ಅಕ್ರಮ ಎಸಗಿದ ವೆಬ್ಸೈಟ್ಗೆ ಕುಕ್ಕೆ ದೇವಳ ಆನ್ಲೈನ್ ಸೇವೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ.20:  ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ ಅಕ್ರಮ ವೆಬ್ಸೈಟ್ ಮೂಲಕ ಆನ್ಲೈನ್ ಸೇವೆ ಬುಕ್ಮಾಡುತ್ತಿದ್ದ ಹಾಗೂ ಈಗ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ .ಸಂಸ್ಥೆಗೆ ರಾಜ್ಯ ಸರ್ಕಾರ, ದೇವಸ್ಥಾನಗಳ ಆನ್ಲೈನ್ ಸೇವೆ ನಡೆಸಲು ಅವಕಾಶ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.   ವ್ಯಕ್ತಿಯೊಬ್ಬರು ನಿರ್ವಹಿಸುತಿರುವ ವೆಬ್ಸೈಟ್ ಸುಬ್ರಹ್ಮಣ್ಯದಲ್ಲಿ ನಡೆಸಲಾಗುತ್ತಿರುವ ಸೇವೆಗಳನ್ನು ಅಕ್ರಮವಾಗಿ ಬುಕ್ ಮಾಡಿ ದೇವಸ್ಥಾನಕ್ಕೆ ವಂಚನೆ ನಡೆಸುತ್ತಿದ್ದು, ಇದು ಸೇರಿದಂತೆ ಮೂರು ವೆಬ್ಸೈಟ್ಗಳ ವಿರುದ್ಧ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. […]

ಅಕ್ರಮ ಎಸಗಿದ ವೆಬ್ಸೈಟ್ಗೆ ಕುಕ್ಕೆ ದೇವಳ ಆನ್ಲೈನ್ ಸೇವೆಗೆ ಅವಕಾಶ Read More »

ಕರಾವಳಿ, ಕರ್ನಾಟಕ

ಏರ್ ಲಿಫ್ಟ್ ಮೂಲಕ ಕತಾರ್ ನಿಂದ ಮಂಗಳೂರಿಗೆ ಬಂದಿಳಿದ 185 ಕನ್ನಡಿಗರು

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.20:ಕತಾರ್ ನ ದೋಹಾದಿಂದ 185 ಪ್ರಯಾಣಿಕರನ್ನು ವಂದೇ ಭಾರತ್ ಮಿಷನ್‍ನಡಿ ಏರ್ಲಿಫ್ಟ್ ಮೂಲಕ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಯಿತು. ಹಮಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಯನ್ ಏರ್‍ಲೈನ್ಸ್ ವಿಮಾನದಲ್ಲಿ 185 ಪ್ರಯಾಣಿಕರು ಬಂದಿಳಿದರು. ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರು ಮಾಸ್ಕ್, ಗ್ಲೌಸ್,ಫೇಸ್ ಕವರ್‍ಗಳನ್ನು ಧರಿಸಿದ್ದರು. ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸಲು ಕತಾರ್ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಮತ್ತು ಕತಾರ್‍ನ ಭಾರತೀಯ ರಾಯಭಾರಿ ಕಛೇರಿಯು ಪ್ರಮುಖ ಪಾತ್ರ ವಹಿಸಿದೆ.ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಬರಲು ಸಹಕರಿಸಿದ ಎಲ್ಲಾರಿಗೂ

ಏರ್ ಲಿಫ್ಟ್ ಮೂಲಕ ಕತಾರ್ ನಿಂದ ಮಂಗಳೂರಿಗೆ ಬಂದಿಳಿದ 185 ಕನ್ನಡಿಗರು Read More »

ಕರಾವಳಿ, ಕರ್ನಾಟಕ

ಎರಡು ವಾರ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ➤ ಸಾಮಾನ್ಯರ ಜೇಬಿಗೆ  ಕತ್ತರಿ

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ.20:  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಸತತ ಎರಡು ವಾರಗಳ ಕಾಲ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಕಂಡಿದೆ. ನಿರಂತರವಾಗಿ ಕಳೆದ 14 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಶನಿವಾರ ಲೀಟರ್ ಪೆಟ್ರೋಲ್ ಗೆ 51 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 61 ಪೈಸೆ

ಎರಡು ವಾರ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ➤ ಸಾಮಾನ್ಯರ ಜೇಬಿಗೆ  ಕತ್ತರಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಉಳ್ಳಾಲ :ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ,ಜೂ.20: ಶುಕ್ರವಾರ ದಂದು ಉಳ್ಳಾಲ ಸೇತುವೆಯಿಂದ ಹಾರಿದ ವ್ಯಕ್ತಿಯ ಶವವು ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನ ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ. ನದಿಯಲ್ಲಿ ತೇಲುತಿದ್ದ ಶವವನ್ನು ಕಿಂಗ್ಸ್ ಸ್ಟಾರ್ ಉಳಿಯ ಸದಸ್ಯರು ಮೇಲಕೆತ್ತಿದ್ದಾರೆ.ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಶುಕ್ರವಾರ ಅಪರಾಹ್ನ ಸುರೇಂದ್ರ ಅವರ ಫೋನ್ ಸೇತುವೆಯ ಮೇಲೆ ಪತ್ತೆಯಾಗಿತ್ತು ಇದರ ಹಿನ್ನೆಲೆಯಲ್ಲಿ ವ್ಯಕ್ತಿ

ಉಳ್ಳಾಲ :ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯು ಇಂಗ್ಲಿಷ್ ಕೀ ಉತ್ತರ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.19:  ರಾಜ್ಯದಲ್ಲಿ ಗುರುವಾರ ನಡೆದಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.   ಕೀ ಉತ್ತರಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಆಕ್ಷೇಪಣೆ ಸಲ್ಲಿಸಬಹುದು ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವೆಬ್‌ಸೈಟ್  ವಿಳಾಸ- www.puc.kar.nic.in

ದ್ವಿತೀಯ ಪಿಯು ಇಂಗ್ಲಿಷ್ ಕೀ ಉತ್ತರ ಪ್ರಕಟ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪಿಯು ಪರೀಕ್ಷೆ ಬರೆದಾಕೆಗೆ ಕೊರೊನಾ ಪಾಸಿಟಿವ್ !

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.19:ನಿನ್ನೇ ತಾನೇ ನಡೆದಿದ್ದ ಪಿಯು ಇಂಗೀಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು. ವಿದ್ಯಾರ್ಥಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಕಿರಣ ನಾಲ್ಕನೇ ಬ್ಲಾಕ್‍ನಲ್ಲಿರುವ ಎಕ್ಸಾಂ ಸೆಂಟರ್‍ನಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಈಕೆಯ ಕೈಗೆ ಸೀಲ್ ಹಾಕಿದ್ದು ಹೋಂ ಕ್ವಾರಂಟೈನ್‍ನಲ್ಲಿದ್ದಳು ಎಂದು ತಿಳಿದು ಬಂದಿದೆ. ಆದರೆ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿದ್ದು ಈಗ ಆಕೆಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಎಕ್ಸಾಂ ಸೆಂಟರ್‍ನಲ್ಲಿದ್ದ ಇತರ ವಿದ್ಯಾರ್ಥಿನಿಯರು,

ಪಿಯು ಪರೀಕ್ಷೆ ಬರೆದಾಕೆಗೆ ಕೊರೊನಾ ಪಾಸಿಟಿವ್ ! Read More »

ಕರ್ನಾಟಕ

ನಿಟ್ಟೆ ಸಂವೇದಕಾಧಾರಿತ ತೀರ್ಥ ನೀಡುವ ಯಂತ್ರದ ಆವಿಷ್ಕಾರ

(ನ್ಯೂಸ್ ಕಡಬ) newskadaba.com.ನಿಟ್ಟೆ,ಜೂ.19:ಕೊರೊನಾದಿಂದಾಗಿ ಹಲವು ಸಮಸ್ಯೆಗಳು ದಿನೇ ದಿನೇ ಬೆಳಕಿಗೆ ಬರುತ್ತಿದ್ದರೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಲು ಹಲವು ಸಂಘ ಸಂಸ್ಥೆಗಳು ಶ್ರಮಿಸುತ್ತಿದೆ, ಜೊತೆಗೆ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ ಇದೀಗ ಇಂತದ್ದೆ ಹೊಸ ಸಂಶೋಧನೆಯೊಂದಿಗೆ ಸುದ್ದಿಯಾಗುತ್ತಿದೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ. ಕೊರೊನಾ ತಡೆಗೆ ಅಗತ್ಯವಿರುವ ಸಾಮಾಜಿಕ ಅಂತರವನ್ನು ಕಾಪಾಡುವುದರೊಂದಿಗೆ ದೇವಾಲಯಗಳಲ್ಲಿ ತೀರ್ಥ ಪ್ರಸಾದ ವಿತರಣೆಗೆ ಅನುಕೂಲವಾಗುವ ರೀತಿಯಲ್ಲಿ ಸಂವೇದಕಾಧಾರಿತ ತೀರ್ಥ ನೀಡುವ ಯಂತ್ರವನ್ನು ಆವಿಷ್ಕರಿಸಿದ್ದಾರೆ ನಿಟ್ಟೆ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಸಂತೋಷ್ ಇವರು. ಈ

ನಿಟ್ಟೆ ಸಂವೇದಕಾಧಾರಿತ ತೀರ್ಥ ನೀಡುವ ಯಂತ್ರದ ಆವಿಷ್ಕಾರ Read More »

ಕರಾವಳಿ

ಮಾಂಸದಂಗಡಿ ಮಾಲೀಕನ ಮೇಲೆ ತಲವಾರು ದಾಳಿ ಪ್ರಕರಣ ➤ ಮೂವರು ಶಂಕಿತ ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ,ಜೂ.19: ತೊಕ್ಕೊಟ್ಟು ಒಳಪೇಟೆಯಲ್ಲಿ ಗುರುವಾರ ತಡರಾತ್ರಿ ಮಾಂಸದಂಗಡಿ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಶಂಕಿತ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಭಾಗದಲ್ಲಿ ಹಲವು ಕಡೆ ಮಾಂಸದಂಗಡಿ ಹೊಂದಿದ್ದ ಹಳೆಕೋಟೆ ನಿವಾಸಿ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇವರ ಮೇಲೆ ತಲವಾರು ದಾಳಿ ನಡೆಸಿದ್ದರು. ಇದೀಗ ತಲವಾರು ದಾಳಿ ನಡೆಸಿದ ಶಂಕಿತ ಆರೋಪಿಗಳನ್ನು ವಶಕ್ಕೆ

ಮಾಂಸದಂಗಡಿ ಮಾಲೀಕನ ಮೇಲೆ ತಲವಾರು ದಾಳಿ ಪ್ರಕರಣ ➤ ಮೂವರು ಶಂಕಿತ ಆರೋಪಿಗಳು ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ➤ ಕರುನಾಡಿಗೆ ಕರಾಳವಾದ ಜೂನ್ 18

(ನ್ಯೂಸ್ ಕಡಬ) newskadaba.com ಕರಾವಳಿ,ಜೂ.19: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಒಂದೇ ದಿನ 13,586 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 336 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,80,532 ಏರಿಕೆಯಾಗಿದ್ದು, ಒಟ್ಟು 12,573 ಮಂದಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸದ್ಯ 1,63,248 ಪ್ರಕರಣಗಳು ಸಕ್ರಿಯವಾಗಿದ್ದು, 2,04,711 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕರುನಾಡಿನ

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ➤ ಕರುನಾಡಿಗೆ ಕರಾಳವಾದ ಜೂನ್ 18 Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸೋಮೇಶ್ವರದಲ್ಲಿ ಮತ್ತೆ ಕಡಲ್ಕೊರೆತ ➤ಆತಂಕದಲ್ಲಿ ಕಡಲ ತೀರದ ನಿವಾಸಿಗಳು

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜೂ.19:ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಳ್ಳಾಲದ ಸೋಮೇಶ್ವರದಲ್ಲಿ ಕಡಲ್ಕೊರೆತ ಉಂಟಾಗಿದೆ. ಕಡಲ್ಕೊರೆತ ನಿಯಂತ್ರಣಕ್ಕಾಗಿ ಕಿನಾರೆಗೆ ಹಾಕಲಾಗಿದ್ದ ಬೃಹತ್ ಬಂಡೆಕಲ್ಲುಗಳನ್ನು ಭೇದಿಸಿ ಸಮುದ್ರದ ಅಲೆಗಳು ಮುನ್ನುಗ್ಗಿವೆ. ಅಲೆಗಳ ಅಬ್ಬರಕ್ಕೆ ಕಡಲ ನಿವಾಸಿಗಳು ಭಯಬಿದ್ದಿದ್ದಾರೆ. ಇಂದು ಮಳೆ ನಿಂತಿದ್ದರೂ ಕಡಲ ತೀರದ ನಿವಾಸಿಗಳು ಮಾತ್ರ ಕಡಲ್ಕೊರೆತದ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ.

ಸೋಮೇಶ್ವರದಲ್ಲಿ ಮತ್ತೆ ಕಡಲ್ಕೊರೆತ ➤ಆತಂಕದಲ್ಲಿ ಕಡಲ ತೀರದ ನಿವಾಸಿಗಳು Read More »

ಕರಾವಳಿ
Scroll to Top