Kadaba News

ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ,ಜು.17 : ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು  ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ ಒರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ನಿವಾಸಿ ಕರಿಕೆ ಮನೆಯ ಅಬ್ದುಲ್ ಫಾರೂಕ್ (45) ಎಂದು ಗುರುತಿಸಲಾಗಿದೆ. ಜುಲೈ 14 ರಂದು ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ ಪಿಕಪ್ ವಾಹನದಲ್ಲಿ ಎರಡು ದನಗಳನ್ನು  ತೆಗೆದುಕೊಂಡು ಹೋಗುತ್ತಿದ್ದುದನ್ನು ಕಂಡು ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ತಡೆಯಲು ಯತ್ನಿಸಿದ್ದರು. ಆದರೆ […]

ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೊಲೀಸ್ ಸಿಬ್ಬಂದಿಗಳ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ➤ ಕಾನ್‍ಸ್ಟೇಬಲ್ ಮೃತ್ಯು

(ನ್ಯೂಸ್ ಕಡಬ) newskadaba.com.ಮಂಡ್ಯ,ಜು.16:  ಪೊಲೀಸ್ ಸಿಬ್ಬಂದಿ ಸಂಚರಿಸುತ್ತಿದ್ದ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಎಎಸ್ಐ ಗಂಭೀರ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಇಂದು ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಪೇದೆ ಅರುಣ್(26) ಮೃತರು. ಕೆಸ್ತೂರಿನ ಎಎಸ್ಐ ಬಾಲಯ್ಯ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಪ್ಪನಹಳ್ಳಿಯ ವ್ಯಕ್ತಿಗೆ ಅರುಣ್ ಗನ್‌ಮ್ಯಾನ್ ಆಗಿದ್ದರು. ಕಾರ್ಯನಿಮಿತ್ತ ತೊರೆಶೆಟ್ಟಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಪೇದೆ ಸವಾರಿ ಮಾಡುತ್ತಿದ್ದ ಬೈಕ್​ ಮತ್ತು ಎಎಸ್​ಐ

ಪೊಲೀಸ್ ಸಿಬ್ಬಂದಿಗಳ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ➤ ಕಾನ್‍ಸ್ಟೇಬಲ್ ಮೃತ್ಯು Read More »

ಕರ್ನಾಟಕ

ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.16: ಕಳೆದೊಂದು ವಾರದಿಂದ ಬೆಂಗಳೂರು ಜತೆಗೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ.   ಇದರಿಂದ ಕೊರೊನಾ ರೋಗ ಹರಡುವ ಭಯದಲ್ಲಿ ಜನ ಕಾಲ ಕಳೆಯುವಂತಾಗಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ಇನ್ನು, ರಾಜ್ಯದಲ್ಲಿ ಒಂದಷ್ಟು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಇದು ಮಳೆಗಾಲವಾಗಿದ್ದು, ಮುಂಗಾರು ನಂತರ ಬರುವ ಮಳೆಯಾಗಿದೆ. ಈ ಮಳೆ ಹೆಚ್ಚಿರುವ ತಾಪಮಾನವನ್ನು ಈ ಮಳೆ ಕಡಿಮೆ ಮಾಡುತ್ತದೆ.

ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ Read More »

ಕರಾವಳಿ, ಕರ್ನಾಟಕ

ಉಡುಪಿ :ಆರಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

(ನ್ಯೂಸ್ ಕಡಬ) newskadaba.com ಉಡುಪಿ ,ಜು.16: ಕೊರೊನಾ ವೈರಸ್‌ಗೆ ಉಡುಪಿಯಲ್ಲಿ ಇಂದು (ಗುರುವಾರ) 6ನೇ ಬಲಿ ಪಡೆದಿದೆ. ಮೃತರನ್ನು ಉಡುಪಿ ನಿವಾಸಿ 49 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.   ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಇವರು ಮಧುಮೇಹ ಮತ್ತು ಉಸಿರಾಟದ ಸಮಸ್ಯೆಗಳಂತಹ ಇತರ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಜುಲೈ 15 ರ ಬುಧವಾರ ರಾತ್ರಿ ಅವರ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಉಡುಪಿಯ ಡಾ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು .

ಉಡುಪಿ :ಆರಕ್ಕೇರಿದ ಕೊರೊನಾ ಸಾವಿನ ಸಂಖ್ಯೆ Read More »

ಕರಾವಳಿ, ಕರ್ನಾಟಕ

ವೈದ್ಯರು, ನರ್ಸ್ ಸೇರಿದಂತೆ 14 ಮಂದಿಗೆ ಕೊರೊನಾ ಅಜ್ಜರಕಾಡು ಆಸ್ಪತ್ರೆ 2ದಿನ ಸೀಲ್ ಡೌನ್

(ನ್ಯೂಸ್ ಕಡಬ) newskadaba.com. ಉಡುಪಿ,ಜು.16: ಕೊರೊನಾ ಬಾಧೆಯಿಂದಾಗಿ ಈಗಾಗಲೇ ಹಲವು ಭಾಗಗಳಲ್ಲಿ ಆಸ್ಪತ್ರೆ, ಮನೆ, ಪೊಲೀಸ್ ಸ್ಟೇಷನ್,ಬ್ಯಾಂಕ್, ಅಂಗಡಿ ಮುಂಗಟ್ಟು ಸೀಲ್ ಡೌನ್ ಆಗಿತ್ತು ಇದೀಗ ಅಂತದ್ದೆ ಇನ್ನೊಂದು ಪ್ರಕರಣ ಉಡುಪಿಯಲ್ಲಿ ವರದಿಯಾಗಿದೆ. ಗ್ಯಾಂಗ್ರಿನ್‌‌ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ದ್ರವ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿತ್ತು, ಈತನ ವಾರ್ಡ್‌‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು

ವೈದ್ಯರು, ನರ್ಸ್ ಸೇರಿದಂತೆ 14 ಮಂದಿಗೆ ಕೊರೊನಾ ಅಜ್ಜರಕಾಡು ಆಸ್ಪತ್ರೆ 2ದಿನ ಸೀಲ್ ಡೌನ್ Read More »

ಕರ್ನಾಟಕ

ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.16: ದರೋಡೆ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ದರೋಡೆಕೋರ ಶಮ್ಮಿ ಯಾನೇ ಶಮೀರ್ ಕಾಟಿಪಳ್ಳ (30)ನನ್ನು ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದಿದ್ದ. ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ

ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು Read More »

ಕರ್ನಾಟಕ

ಗುಡಿಸಲಲ್ಲಿ ವಾಸವಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ ಹಸ್ತಾಂತರ ➤ ವೀರಕೇಸರಿ ಮತ್ತು ಸ್ಪಂದನ ಸೇವಾ ಸಂಘದಿಂದ ಮನೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಪಟ್ರಮೆ ,ಜು.16: ವೀರಕೇಸರಿ ಸಂಘಟನೆ ಅನಾರು, ಪಟ್ರಮೆ ಹಾಗೂ ಸ್ಪಂದನ ಸೇವಾ ಸಂಘ ಬೆಳ್ತಂಗಡಿ ಹಾಗೂ ಊರಿನ ಸಹೃದಯಿಗಳ ಸಹಾಯದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬವೊಂದಕ್ಕೆ, 2 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟ ಪ್ರಶಂಶನೀಯ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮೈಕೆ ಎಂಬಲ್ಲಿ ನಡೆದಿದೆ.   ಕಳೆದ ಹಲವಾರು ವರ್ಷಗಳಿಂದ ಗಿರಿಜ ಎಂಬುವರು ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ ನಿರ್ಗತಿಕರಂತೆ ಗುಡಿಸಲಲ್ಲಿ ವಾಸಮಾಡುತ್ತಿದ್ದರು. ಇವರ ಕಷ್ಟವನ್ನು ಗಮನಿಸಿದ ವೀರಕೇಸರಿ ಸಂಘಟನೆ ಹಾಗೂ

ಗುಡಿಸಲಲ್ಲಿ ವಾಸವಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ ಹಸ್ತಾಂತರ ➤ ವೀರಕೇಸರಿ ಮತ್ತು ಸ್ಪಂದನ ಸೇವಾ ಸಂಘದಿಂದ ಮನೆ ನಿರ್ಮಾಣ Read More »

ಕರಾವಳಿ, ಕರ್ನಾಟಕ

ಕರಾವಳಿ ಮತ್ತೆ ವರುಣನ ಆರ್ಭಟ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.16: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗಿನಿಂದ ರಾತ್ರಿವರೆಗೂ ನಿರಂತರವಾಗಿ ಮಳೆ ಸುರಿದಿದೆ. ಕೆಲವೆಡೆ ಸಾಧಾರಣ, ಕೆಲವೆಡೆ ಉತ್ತಮ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಮಳೆ ಸ್ವಲ್ಪ ಚುರುಕುಗೊಂಡಿದ್ದು, ಹವಾಮಾನ ಇಲಾಖೆಯೂ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಬೆಳಗ್ಗಿನಿಂದ ಸಾಯಂಕಾಲವರೆಗೆ ಕಡಬ, ಮರ್ಧಾಳ, ಬಿಳಿನೆಲೆ, ಕಾಣಿಯೂರು ನೂಜಿಬಾಳ್ತಿಲದಲ್ಲಿ ಉತ್ತಮ ಮಳೆ ಸುರಿದಿದೆ. ಮಳೆಯೊಂದಿಗೆ ಹಗುರವಾಗಿ ಗಾಳಿಯೂ ಬೀಸುತ್ತಿದೆ. ಸಮುದ್ರದಿಂದಲೂ ತೀರಕ್ಕೆ ಗಂಟೆಗೆ 45-55 ಕಿ.ಮೀ.

ಕರಾವಳಿ ಮತ್ತೆ ವರುಣನ ಆರ್ಭಟ Read More »

ಕರಾವಳಿ

ಕಡಬ ತಾಲೂಕಿನಲ್ಲಿ ಲಾಕ್‍ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

(ನ್ಯೂಸ್ ಕಡಬ) newskadaba.com ಕಡಬ,ಜು.16: ಮಾನವ ಸಂಕುಲಕ್ಕೆ ಮೃತ್ಯುವಾಗಿ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ತನ್ನ ವರಸೆಯನ್ನೆ  ಬದಲಾಯಿಸುತ್ತಿದೆ. ಮಿತಿ ಮೀರಿ ಹಬ್ಬುತ್ತಿರುವ ಕೊರೋನಾ ಸೊಂಕಿನಿಂದಾಗಿ, ರಾಜ್ಯ ಸರ್ಕಾರ ಮುಂದಿನ 7 ದಿನಗಳ ಕಾಲ ಲಾಕ್ ಡೌನ್ ಆದೇಶ ಹೊರಡಿಸಿದೆ. ಲಾಕ್ ಡೌನ್ ನ ಮೊದಲ ದಿನವಾದ ಇಂದು ಕಡಬ ತಾಲೂಕು ವ್ಯಾಪ್ತಿಯಲ್ಲಿ ಹಾಲು, ಮೆಡಿಕಲ್ , ಆಸ್ಪತ್ರೆ, ತರಕಾರಿ, ಅಗತ್ಯ ವಸ್ತುಗಳ ಅಂಗಡಿಗಳು, ಪತ್ರಿಕೆ ಬಿಟ್ಟು ಉಳಿದೆಲ್ಲಾ ವ್ಯವಹಾರದ ಅಂಗಡಿಗಳು ಸ್ಥಗಿತಗೊಂಡಿತ್ತು.

ಕಡಬ ತಾಲೂಕಿನಲ್ಲಿ ಲಾಕ್‍ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ Read More »

ಕರಾವಳಿ, ಕರ್ನಾಟಕ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ

(ನ್ಯೂಸ್ ಕಡಬ) newskadaba.com ಬಳ್ಳಾರಿ ,ಜು.16:  ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು(81) ವಿಧಿವಶರಾಗಿದ್ದಾರೆ. ಸ್ವಗ್ರಾಮ ಬಳ್ಳಾರಿಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.   ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ಕಳೆದವರು. ತಮ್ಮ 27ನೇ ವಯಸ್ಸಿಗೆ ರಂಗಪ್ರವೇಶಿಸಿದ್ದ ಇವರು, ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ ಪಾತ್ರಗಳ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿದ್ದ ಕಲಾವಿದೆ. ಬಳ್ಳಾರಿ ಸುಭದ್ರಮ್ಮ ಅಂತಲೇ ಖ್ಯಾತಿ ಗಳಿಸಿದ್ದ ರಂಗಕರ್ಮಿ. ಎರಡು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದ ಸುಭದ್ರಮ್ಮನವರು. ರಾಜ್ಯೋತ್ಸವ ಪ್ರಶಸ್ತಿ,

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ Read More »

ಕರಾವಳಿ, ಕರ್ನಾಟಕ
Scroll to Top