Kadaba News

ಇನ್ನುಂದೆ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ ಎಷ್ಟು ಮೊತ್ತದ ದಂಡ ಗೊತ್ತೇ..!!?

(ನ್ಯೂಸ್ ಕಡಬ) newskadaba.com ಮಂಗಳೂರು, ಅ.05: ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಕಟ್ಟು ನಿಟ್ಟಾಗಿ ಆದೇಶಗಳನ್ನು  ಹೊರಡಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದ್ದು, ಕೊರೋನಾ ಮಾರ್ಗಸೂಚಿಯನ್ನು ಉಲ್ಲಂಘಿಸುವವರು ಇನ್ನು ಮುಂದೆ ಬಹಳ ಎಚ್ಚರವಾಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೇ ಇಂದಿನಿಂದ, ಭಾರೀ ದಂಡ ಪಾವತಿಸಬೇಕಾಗುತ್ತದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಜನರಿಗೆ 1,000 ರೂ.ಗಳ ದಂಡ ಮತ್ತು ಇತರ ಸ್ಥಳಗಳಲ್ಲಿ ಮಾಸ್ಕ್‌ ಹಾಕದವರಿಗೆ 500 ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. […]

ಇನ್ನುಂದೆ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ ಎಷ್ಟು ಮೊತ್ತದ ದಂಡ ಗೊತ್ತೇ..!!? Read More »

ಕರಾವಳಿ

ಸುಬ್ರಹ್ಮಣ್ಯ :ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 05. ಸುಬ್ರಹ್ಮಣ್ಯದಲ್ಲಿ ಎಸ್ಕಾಂಗಳ ವತಿಯಿಂದ ಖಾಸಗೀಕರಣ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ.  ರಾಜ್ಯಾದಾದ್ಯಂತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮಡುವುದನ್ನು ವಿರೋಧಿಸಿ ಸುಬ್ರಹ್ಮಣ್ಯ ಸಬ್ ಸ್ಟೇಶನ್ ನ ವ್ಯಾಪ್ತಿಯ ನೌಕಕರು ಇಂಧು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಎಲ್ಲರೂ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸಡರಣ ನಿಗಮ ನೌಕರರ ಸಂಘ ಮತ್ತು ಸಂಘಗಳ ಒಕ್ಕೋಟ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ.

ಸುಬ್ರಹ್ಮಣ್ಯ :ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ Read More »

ಕರಾವಳಿ

ಕುಂದಾಪುರ: ಸರಣಿ ಕಳ್ಳತನ ➤ ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ.05: ಕುಂದಾಪುರದ ಆಸು – ಪಾಸಿನ ಪ್ರದೇಶದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಆರೋಪಿಗಳನ್ನು ಹೊನ್ನಾವರದ ಮಂಕಿ ಗ್ರಾಮದ ವಿಲ್ಸನ್ ಪಿಯದಾಸ್ ಲೋಪಿಸ್ (29) ಹಾಗೂ ತೊಕೆಟ್ಟೆಯ 2 ನೇ ಕ್ರಾಸ್ ನಿವಾಸಿ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಬಂಧಿತರಿಂದ 64.76 ಗ್ರಾಂ ಚಿನ್ನ ಮತ್ತು 112 ಗ್ರಾಂ ಬೆಳ್ಳಿ ಮತ್ತು

ಕುಂದಾಪುರ: ಸರಣಿ ಕಳ್ಳತನ ➤ ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಳಿಗೆ: ಆಕಸ್ಮಿಕವಾಗಿ ತೆಂಗಿನಮರವೊಂದು ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.05: ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಒಣಗಿದ ತೆಂಗಿನ ಮರವೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ನಡೆದಿದೆ.     ಉಪ್ಪಳಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಉಪ್ಪಳಿಗೆ ಗುರುವ ಎಂಬವರ ಪುತ್ರ ಬಾಬು ಯಾನೆ ನೋನ (50 ವ.) ಎಂದು ಗುರುತಿಸಲಾಗಿದೆ.  

ಉಪ್ಪಳಿಗೆ: ಆಕಸ್ಮಿಕವಾಗಿ ತೆಂಗಿನಮರವೊಂದು ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ : ಎಂಡಿಎಂಎ ಮಾತ್ರೆ ಪೂರೈಸುತ್ತಿದ್ದ ಡ್ರಗ್ಸ್ ಪೆಡ್ಲರ್ ವಿದ್ಯಾರ್ಥಿಯ ಅರೆಸ್ಟ್

 (ನ್ಯೂಸ್ ಕಡಬ) newskadaba.com ಉಡುಪಿ, ಅ. 05. ಸಹಪಾಠಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಿರುವ ಪೊಲೀಸರು 14.94 ಲಕ್ಷ ರೂ. ಮೌಲ್ಯದ ನಿಷೇಧಿತ ನಿದ್ರಾಜನಕ ಎಂಡಿಎಂಎ ಮಾತ್ರೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಕಾಲೇಜಿನ ಇನ್‌ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿ, ಉತ್ತರ ಭಾರತ ಮೂಲದ ಹಿಮಾಂಶು ಜೋಷಿ(20) ಬಂಧಿತ ಆರೋಪಿ. ಆಂತರಿಕ ಭದ್ರತಾ ವಿಭಾಗದ ಮಾಹಿತಿ ಮೇರೆಗೆ ಉಡುಪಿ ಐಎಸ್‌ಡಿ ಘಟಕ ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದು, ಶೀಂಬ್ರಾ ಸೇತುವೆ ಬಳಿ

ಉಡುಪಿ : ಎಂಡಿಎಂಎ ಮಾತ್ರೆ ಪೂರೈಸುತ್ತಿದ್ದ ಡ್ರಗ್ಸ್ ಪೆಡ್ಲರ್ ವಿದ್ಯಾರ್ಥಿಯ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಡಾ| ನವೀನ್‌ ಭಟ್‌ ನೇಮಕ

(ನ್ಯೂಸ್ ಕಡಬ) newskadaba.com ಉಡುಪಿ, ಅ. 05. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ಭಾನುವಾರ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಡಾ. ವೈ. ನವೀನ್ ಭಟ್‌ ಅವರನ್ನು ನಿಯೋಜಿಸಲಾಗಿದೆ.     ನವೀನ್‌ ಭಟ್‌ 2017ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದು, ಹಾಸನ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರೀತಿ ಗೆಹ್ಲೋಟ್‌ ಸೆ. 07, 2019ರಂದು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಸದ್ಯಕ್ಕೆ ಸರಕಾರ ಅವರಿಗೆ ಯಾವುದೇ ಸ್ಥಾನವನ್ನು ತೋರಿಸಿಲ್ಲ.

ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಡಾ| ನವೀನ್‌ ಭಟ್‌ ನೇಮಕ Read More »

ಕರಾವಳಿ, ಕರ್ನಾಟಕ

ಟ್ರಬಲ್ ಶೂಟರ್​ಗೆ ಮತ್ತೊಂದು ಸಂಕಷ್ಟ ➤ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 05. ಟ್ರಬಲ್ ಶೂಟರ್, ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವಾಗ ನಡೆದಿರುವ ದಾಳಿ ರಾಜಕೀಯ ಸ್ವರೂಪ ಪಡೆಯುವ ನಿರೀಕ್ಷೆ ಇದೆ. ಸೋಮವಾರ ಬೆಳಗ್ಗೆ ಐವರು ಅಧಿಕಾರಿಗಳ ತಂಡ ಸದಾಶಿವ ನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿಯೇ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ

ಟ್ರಬಲ್ ಶೂಟರ್​ಗೆ ಮತ್ತೊಂದು ಸಂಕಷ್ಟ ➤ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಗಾಂಜಾದಿಂದ ಎಣ್ಣೆ ತೆಗೆಯುತ್ತಿದ್ದ ವ್ಯಕ್ತಿಯ ಅರೆಸ್ಟ್

 (ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 05.ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡು ಸುಮಾರು 80ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಉಕ್ಕುಡ ಕಾಂತಡ್ಕದಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್ ಖಾದರ್ ಯಾನೆ ಅದ್ದು (25) ಬಂಧಿತ ಆರೋಪಿ. ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುವ ಮಾಹಿತಿ ಹಿನ್ನಲೆಯಲ್ಲಿ

ಬಂಟ್ವಾಳ: ಗಾಂಜಾದಿಂದ ಎಣ್ಣೆ ತೆಗೆಯುತ್ತಿದ್ದ ವ್ಯಕ್ತಿಯ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಂಬೆಟ್ಟು: ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಕೊಂಬೆಟ್ಟು, ಅ.04: ಕೊಬೆಟ್ಟು ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ.     ನೇಣಿಗೆ ಶರಣಾದ ವ್ಯಕ್ತಿಯನ್ನು ಕೊಡಿಪ್ಪಾಡಿ ನಿವಾಸಿ ಇಲೆಕ್ಟ್ರೀಷಿಯನ್‌ ವೃತ್ತಿ ಮಾಡುತ್ತಿರುವ ಸದಾಶಿವ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.  

ಕೊಂಬೆಟ್ಟು: ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ನೇಣಿಗೆ ಶರಣು Read More »

ಕರಾವಳಿ, ಕ್ರೈಮ್ ನ್ಯೂಸ್

ಕಲ್ಲು ಜಾರಿ ಬಿದ್ದು ಯುವ ಕಲಾವಿದ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.04: ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕಲ್ಲು ಜಾರಿ ಬಿದ್ದು ಯುವ ಕಲಾವಿದ ರಾಘವೇಂದ್ರ ಆಚಾರ್ಯ (38 ವ.) ರವರು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ನಾವರ ಎಂಬಲ್ಲಿ ನಡೆದಿದೆ.     ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಗೋಳಿಕಟ್ಟೆ ನಿವಾಸಿ ರಾಘವೇಂದ್ರ ಆಚಾರ್ಯರವರು ಕಳೆದ ಹಲವು ವರ್ಷಗಳಿಂದ ಕಾವಲಿ ಮಾಡುವ ಕೆಲಸ ಮಾಡುತ್ತಿದ್ದು, ಇಂದು ಕೂಡ ಕೆಲಸದಲ್ಲಿ ನಿರತರಾಗಿದ್ದು ಕಲ್ಲು ಜಾರಿ ತಲೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಉತ್ತಮ ನಾಟಕ

ಕಲ್ಲು ಜಾರಿ ಬಿದ್ದು ಯುವ ಕಲಾವಿದ ಮೃತ್ಯು Read More »

ಕರಾವಳಿ
Scroll to Top