Kadaba News

ಶಾಲೆಗೆ ನುಗ್ಗಿ ಕಳ್ಳತನ ➤ಮೂವರ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 24: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸರ್ಕಾರಿ ಶಾಲೆಯಲ್ಲಿ ಅ. 20ರಂದು ನಡೆದ ಕಳವು ಪ್ರಕರಣ ಸಂಬಂಧ ಮೂವರು ಆರೋಪಿ ಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಕ್ಕಡ ನಿವಾಸಿಗಳಾದ ಕೃಷ್ಣಾನಂದ ಯಾನೆ ಕಿಣಿ, ಸಿದ್ದೀಕ್, ಇಚಿಲಂಪಾಡಿಯ ವಿನೋದ್ ಎಂದು ಗುರುತಿಸಲಾಗಿದೆ. ಅ. 20ರಂದು ಶಾಲೆಯ ಕಂಪ್ಯೂಟರ್‌ ಕೋಣೆ, ಬಿಸಿ ಊಟದ ಕೊಠಡಿ ಹಾಗೂ ತರಗತಿಗಳ ಕೊಠಡಿಯ ಬೀಗ ಮುರಿದು 2 ಕಂಪ್ಯೂಟರ್‌ ಹಾಗೂ ಗ್ಯಾಸ್‌ ಸಿಲಿಂಡರ್ ಕಳವು ಮಾಡಿರುವ ಬಗ್ಗೆ […]

ಶಾಲೆಗೆ ನುಗ್ಗಿ ಕಳ್ಳತನ ➤ಮೂವರ ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 24: ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ನಿನ್ನೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಪಿಲ್ ದೇವ್ ಗೆ ಹೃದಯಾಘಾತಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೇ ವಿರಾಟ್ ಕೊಹ್ಲಿ ಸೇರಿದಂತೆ ಹಾಲಿ-ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಚಿಕಿತ್ಸೆ ಬಳಿಕ ಸ್ವತಃ ಕಪಿಲ್ ತಮಗೆ ಶುಭ ಹಾರೈಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ತಾವೀಗ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.ತಮ್ಮ ಮಗಳ ಜೊತೆಗೆ ಕಪಿಲ್ ದೇವ್ ಖುಷಿಯಿಂದ

ಕ್ರಿಕೆಟ್ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.24: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳೂರು ನಾರ್ಲಗುಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಕೃಷಿಕರೋರ್ವರು ಮೃತಪಟ್ಟ ಘಟನೆ ನಡೆದಿದೆ.   ಮೃತಪಟ್ಟ ವ್ಯಕ್ತಿಯನ್ನು ರಫಾಯಲ್ ಡಿ ಸೋಜ ( 49) ಎಂದು ಗುರುತಿಸಲಾಗಿದೆ. ರಫಾಯಲ್ ರವರ ಕೃಷಿ ಸ್ಥಳಕ್ಕೆ ಕಾಡು ಹಂದಿಗಳು ನಿರಂತರ ದಾಳಿ ನಡೆಸುತ್ತಿದ್ದು, ಭಾರೀ ಪ್ರಮಾಣದ ಬೆಳೆಗಳು ಹಾನಿಗೊಂಡಿದ್ದವು. ಇದರಿಂದ ಭತ್ತ ಕೃಷಿಗೆ ಕಾಡು ಹಂದಿಗಳ ಉಪಟಳ ತಡೆಯಲು ತಂತಿಯ ಬೇಲಿ ಅಳವಡಿಸಿ ವಿದ್ಯುತ್ ಪ್ರವಹಿಸಲಾಗಿತ್ತು. ರಾತ್ರಿ ಹಂದಿಯ ಶಬ್ದ

ಕಾಸರಗೋಡು: ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 24: ಬೆಂಗಳೂರು ನಗರದಾದ್ಯಂತ ಭಾರಿ ಮಳೆ ಸುರಿದ ಹಿನ್ನಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಮಠ ಕಳೆದುಕೊಂಡು ಪರದಾಡುತ್ತಿದ್ದಾರೆ.ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ನಗರವೇ ನಲುಗಿ ಹೋಗಿದೆ.   ಅಲ್ಲದೇ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಕಮಿಷನರ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಕರೆ ಮಾಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಸೂಚಸಿದ್ದಾರೆ. ಅಲ್ಲದೇ

ಬೆಂಗಳೂರು ನಗರದಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ Read More »

ಕರ್ನಾಟಕ

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ..!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24: ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ರಿಲಯನ್ಸ್ ಜಿಯೋ ವತಿಯಿಂದ ಮೇಡ್ ಇನ್ ಇಂಡಿಯಾ ಎಂಬ ವಿಶೇಷತೆಯನ್ನು ಬ್ರೌಸರ್ ಹೊಂದಿದ್ದು ವೆಬ್ ಸುರಕ್ಷತೆ, ಡೇಟಾ, ಗೌಪ್ಯತೆಗೆ ಒತ್ತು ನೀಡಲು ಹೊಸ ಜಿಯೋ ಪೇಜಸ್ ಎನ್ನುವ ಬ್ರೌಸರ್ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.   ಗುಣಮಟ್ಟ ವರ್ಧಿತ ಬ್ರೌಸಿಂಗ್ ಅನುಭವವನ್ನು ಜಿಯೋ ಬ್ರೌಸಿಂಗ್ ಬಳಕೆದಾರರಿಗೆ ಒದಗಿಸುತ್ತದೆ. ಭಾರತ ನಿರ್ಮಿತ ಬ್ರೌಸರ್ ಇರಲಿಲ್ಲ ಎನ್ನುವ ಕೊರತೆಯನ್ನು ಇದು ನೀಗಿಸಿದೆ. ವೇಗವಾದ ಸರ್ಚ್ ಇಂಜಿನ್,

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ..! Read More »

ರಾಷ್ಟ್ರೀಯ ನ್ಯೂಸ್

ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ “ರಂಗ” ಬಲಿ

(ನ್ಯೂಸ್ ಕಡಬ) newskadaba.com ಸಕ್ರೆಬೈಲು ಅ. 24: ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆರಂಗ ಸಾವನ್ನಪ್ಪಿದೆ. ಈ ಮೂಲಕ ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.  ಬಿಡಾರದ ಅತ್ಯಂತ ಆಕರ್ಷಣೀಯ ಆನೆ ಎಂದೇ ಖ್ಯಾತಿ ಪಡೆದಿದ್ದ ಸಾಕಾನೆ ರಂಗ ಇಂದು ಕಾಡಾನೆಯ ದಂತ ತಿವಿತಕ್ಕೆ ಅಸುನೀಗಿದ್ದಾನೆ. ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅದರ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದ

ಸಕ್ರೆಬೈಲು :ಕಾಡಾನೆ ದಾಳಿಗೆ ಆಕರ್ಷಣೀಯ ಆನೆ “ರಂಗ” ಬಲಿ Read More »

ಕರ್ನಾಟಕ

ಐವರ್ನಾಡು : ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ

(ನ್ಯೂಸ್ ಕಡಬ) newskadaba.com ಐವರ್ನಾಡು ಅ. 24:  ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ನಂಭವಿಸಿದೆ. ಐವರ್ನಾಡು ಗ್ರಾಮದ ಚೀಮುಳ್ಳು ಎಂಬಲ್ಲಿರುವ ಗಾಗೇಶ್ ಬೊಮ್ಮೆಟ್ಟಿ ಎಂಬುವರ ಮನೆಗೆ ಹೊಂದಿಕೊಂಡಿರುವ ರಬ್ಬರ್ ಗೋಡೌನ್, ಸ್ನಾನಗೃಹ, ಶೌಚಾಲಯಕ್ಕೆ ಕಳೆದ ದಿನ ರಾತ್ರಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಸುಮಾರು 75,000 ಸಾವಿರ ಅಧೀಕ ಮೌಲ್ಯದ ರಬ್ಬರ್ ಶೀಟ್ ಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಯವರು ಮತ್ತು ಗ್ರಾಮ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐವರ್ನಾಡು : ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ Read More »

ಕರಾವಳಿ

ವಾಟ್ಸಾಪ್ ಬಳಕೆದಾರರೇ ಎಚ್ಚರ…! ➤ ಇನ್ಮುಂದೆ ವಾಟ್ಸಾಪ್ ಬಳಕೆಗೆ ನೀಡಬೇಕು ಶುಲ್ಕ..?

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24: ಭಾರತದಲ್ಲಿ ಸುಮಾರು 77 ಪ್ರತಿಶತ ವಯಸ್ಕರು ಸ್ನೇಹಿತರೊಂದಿಗೆ/ಕುಟುಂಬದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿಯೇ ವ್ಯವಹಾರಗಳೊಂದಿಗೆ ಸಂವಹನ ನಡೆಸಲು ಬಯಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯವಹಾರಕ್ಕಾಗಿ ವಾಟ್ಸಾಪ್ ಬಳಸುವ ಕಂಪನಿಗಳಿಗೆ ಚಾರ್ಜ್ ಮಾಡಲು ಸಂಸ್ಥೆ ನಿರ್ಧಾರ ಮಾಡಿದೆ.     ಸುಮಾರು 50 ಮಿಲಿಯನ್ ವ್ಯವಹಾರಗಳು ಮತ್ತು 175 ಮಿಲಿಯನ್ ಜನರು ಪ್ರತಿದಿನ ವಾಟ್ಸಾಪ್ ಬಿಸಿನೆಸ್ ಖಾತೆಗೆ ಸಂದೇಶ ಕಳುಹಿಸುತ್ತಾರೆ ಮತ್ತು ಈ ಕ್ರಮವು ವಾಟ್ಸಾಪ್ ತನ್ನದೇ ಆದ ವ್ಯವಹಾರವನ್ನು ಮುಂದುವರೆಸಲು ಸಹಾಯ

ವಾಟ್ಸಾಪ್ ಬಳಕೆದಾರರೇ ಎಚ್ಚರ…! ➤ ಇನ್ಮುಂದೆ ವಾಟ್ಸಾಪ್ ಬಳಕೆಗೆ ನೀಡಬೇಕು ಶುಲ್ಕ..? Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ ಅ. 24: ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದೆ. ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆ ಹೆಸರು ಲುಂಪಿ ಸ್ಕಿನ್ (ಚರ್ಮಗಂಟು ರೋಗ).ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪತ್ತೆಯಾಗಿದೆ. ಮಲೆನಾಡಿನ ಗ್ರಾಮಗಳ ಜಾನುವಾರುಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದೆ. ಈ ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಹರಡುವ ಚರ್ಮಗಂಟು ರೋಗ ಶಿವಮೊಗ್ಗದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್ Read More »

ಕರ್ನಾಟಕ

ಮಂಗಳೂರು: ಅನಧಿಕೃತ ಮಾಂಸ ಮಾರಾಟ ಕಂಡು ಬಂದಲ್ಲಿ ಪರವಾನಿಗೆ ರದ್ದು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ಆರೋಪಗಳು ಕೇಳಿಬರುತ್ತಿದ್ದು, ಇನ್ನು ಮುಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್‌ ಸ್ಟಾಲ್ ಗಳಲ್ಲಿ ಇತರ ರಾಜ್ಯ ಹಾಗೂ ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಸಂಬಂಧಿಸಿದ ಮಾಲಕರು ಕಠಿಣ ಕ್ರಮ ಕೈಗೊಳ್ಳಬೇಕು.     ಅನಧಿಕೃತವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸ್ಟಾಲಿ ನ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ ಹಾಗೂ ಪಾಲಿಕೆಯ

ಮಂಗಳೂರು: ಅನಧಿಕೃತ ಮಾಂಸ ಮಾರಾಟ ಕಂಡು ಬಂದಲ್ಲಿ ಪರವಾನಿಗೆ ರದ್ದು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top