Kadaba News

ಪಂಜ: ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ

 (ನ್ಯೂಸ್ ಕಡಬ) newskadaba.com ಪಂಜ , ಅ. 28.  ರಂಗ ಸಾಮ್ರಾಟ್ ಅಭಿನಯ ಶಾಲೆ ಧಾರವಾಡ ಕರ್ನಾಟಕ, ಇವರು ಆಯೋಜಿಸಿದ ರಾಷ್ಟ್ರಮಟ್ಟದ ಆರ್ಟ್ ಪೆಸ್ಟ್ 2020 ರ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ-ಅಂತರಾಷ್ಟೀಯ ಮಟ್ಟ, ರಾಜ್ಯ ಮಟ್ಟ, ಜಿಲ್ಲಾ ಮಟ್ಟದಲ್ಲಿ ಹಲಾವರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇಲ್ಲಿಯ ವಿದ್ಯಾರ್ಥಿಗಳಾದ ಕುಶಿತ್ ಮಲ್ಲಾರ 3 ನೇ ತರಗತಿ “ಪ್ರಥಮ” ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಪ್ರಣಮ್ ಸಂಕಡ್ಕ 4ನೇ ತರಗತಿ “ಪ್ರಥಮ”, ಪ್ರೇಕ್ಷಕ್.ಹೆಚ್ 7 ನೇ ತರಗತಿ “ದ್ವಿತೀಯ” […]

ಪಂಜ: ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ Read More »

ಕರಾವಳಿ

ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ ➤ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಲ್ಲಡ್ಕ ಅ. 29: ದನ ಕದಿಯಲು ಪ್ರಯತ್ನಿಸಿದ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಕಲ್ಲಡ್ಕದ ಕುಂಟಿಬಾಪು ಎಂಬಲ್ಲಿ ನಡೆದಿದೆ. ವಶಕ್ಕೆ ಪಡೆಯಲಾದ ಆರೋಪಿಗಳಲ್ಲಿ ನವೀನ್, ಮಾಧವ ಸುಧೆಕಾರ್ ಸಂಘಪರಿವಾರದ ಸದಸ್ಯರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.     ಆರೋಪಿಗಳು ಬೀದಿ ಬದಿ ಮೇಯುತ್ತಿದ್ದ ದನವೊಂದನ್ನು ಪಿಕಪ್ ಗೆ ಲೋಡ್ ಮಾಡಿದ್ದು ಈ‌ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಘ ಪರಿವಾರದವರೆನ್ನಲಾದ ಆರೋಪಿಗಳ ಕೃತ್ಯದಿಂದ ಸ್ಥಳೀಯರಲ್ಲಿ ಹಲವು ಸಂಶಯಗಳು ಹಬ್ಬಿವೆ.

ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ ➤ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮದ್ವೆಯಾಗಲು ನಿರಾಕರಿಸಿದವನ ಮೇಲೆ ಆ್ಯಸಿಡ್ ಎರಚಿದ ಯುವತಿ.!

(ನ್ಯೂಸ್ ಕಡಬ) newskadaba.com ತ್ರಿಪುರಾ ಅ. 29: ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವಕನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿದ ಘಟನೆ ತ್ರಿಪುರಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 27 ವರ್ಷದ ಯುವತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನ್ನ ಬಾಯ್‍ಫ್ರೆಂಡ್ ಬೇರೊಬ್ಬಳ ಜೊತೆ ಸಂಬಂಧ ಹೊಂದಿದ್ದ ಸಿಟ್ಟಿನಿಂದ ಆಕೆ ಈ ಕೃತ್ಯ ಎಸಗಿದ್ದಾಳೆ. ಆ್ಯಸಿಡ್ ದಾಳಿಗೊಳಗಾದ ಯುವಕನನ್ನು ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕನ ಮೂಗು ಹಾಗೂ ಕಣ್ಣುಗಳಿಗೆ

ಮದ್ವೆಯಾಗಲು ನಿರಾಕರಿಸಿದವನ ಮೇಲೆ ಆ್ಯಸಿಡ್ ಎರಚಿದ ಯುವತಿ.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ ಅ. 29: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ಸರಕಾರಕ್ಕೆ ಸಮಸ್ತ ಜನರ ಪರವಾಗಿ ಒತ್ತಾಯಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡ್‌ ಸಂಘಟನೆಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜೈ ತುಳುನಾಡ್‌ ಬೆಂಗಳೂರು ಘಟಕದ ಸದಸ್ಯ ಧನಂಜಯ್‌ ಆಚಾರ್ಯ ಅವರು ಓಂ ಎಂದು ತುಳು ಲಿಪಿಯಲ್ಲಿ ಬರೆದಂತಹ ಫಲಕವನ್ನು ಕಾಣಿಕೆಯಾಗಿ ಡಾ. ವೀರೇಂದ್ರ ಹೆಗ್ಗಡೆ

ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ Read More »

ಕರಾವಳಿ, ಕರ್ನಾಟಕ

ಐಸಿಯುನಲ್ಲಿದ್ದ ರೋಗಿಯನ್ನೂ ಬಿಡದ ಕಾಮುಕರು.!

(ನ್ಯೂಸ್ ಕಡಬ) newskadaba.com ಹರ್ಯಾಣ ಅ. 29: ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಕ್ಷಯ ರೋಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಹರ್ಯಾಣದ ಗುರುಗ್ರಾಮ್ ನಗರದಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಯುವತಿಯೊಬ್ಬಳು ಚಿಕಿತ್ಸೆ ಪಡೆಯುತ್ತಿದ್ದಳು. ಶ್ವಾಸಕೋಶದ ಕ್ಷಯರೋಗದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಯುವತಿ ಕಳೆದ ಆರು ದಿನಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಈ ವೇಳೆ ಮನೆಯವರು ನೋಡಲು ಹೋದಾಗ ಚೀಟಿಯೊಂದರಲ್ಲಿ ‘ಅತ್ಯಾಚಾರಿ ವಿಕಾಸ್’ ಎಂದು ಬರೆದು ಮನೆಯವರ ಕೈಗಿಟ್ಟಿದ್ದಾಳೆ. ಆಗ ಆಕೆಯ

ಐಸಿಯುನಲ್ಲಿದ್ದ ರೋಗಿಯನ್ನೂ ಬಿಡದ ಕಾಮುಕರು.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 29: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು.     ಎದೆನೋವಿನಿಂದ ದೂರಿದ ನಂತರ ಅವರನ್ನು ಅಹಮದಾಬಾದ್‌ನ ಸ್ಟರ್ಲಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಕೇಶುಭಾಯ್ ಪಟೇಲ್ 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದರು.ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಆರು ಬಾರಿ

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಗುದ್ದಿದ ಕಾರು ➤ ಚಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು ಅ. 29: ಅತಿವೇಗವಾಗಿ ಚಲಿಸುತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿ, ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ಬೋಗಾದಿ ಜಂಕ್ಷನ್ ಬಳಿ ನಡೆದಿದೆ.   ಕಾರು ಕುಕ್ಕರಹಳ್ಳಿ ಕೆರೆಯ ಬಳಿಯಿಂದ ಬೋಗಾದಿ ಜಂಕ್ಷನ್ ಕಡೆ ಅತಿವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಚಾಲಕ ಚನ್ನಪಟ್ಟಣ ನಿವಾಸಿ ಅರುಣ್ ಕುಮಾರ್(23) ಸ್ಥಳದಲ್ಲೇ ಮೃತನಾಗಿದ್ದಾನೆ.ಕಾರಿನಲ್ಲಿ ಪ್ರಯಾಣಿಸುತಿದ್ದ ಇನ್ನೂ ಮೂವರು ಗಂಭಿರವ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆ.ಆರ್.ಸಂಚಾರಿ

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಗುದ್ದಿದ ಕಾರು ➤ ಚಾಲಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 29: ರಾ.ಹೆ 75ರ ಕಲಡ್ಕದಲ್ಲಿ ಸ್ಕೂಟರ್ ಮತ್ತು ಗೂಡ್ಸ್ ಟೆಂಪೋ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಬಿ.ಸಿ ರೋಡಿನ ಸಿವಿಲ್ ಇಂಜಿನಿಯರ್ ವಸಂತ ಪೂಜಾರಿ ಎಂದು ತಿಳಿದು ಬಂದಿದೆ. ಸ್ಕೂಟರ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ವಸಂತ ಪೂಜಾರಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರಾವಳಿ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 29. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 16 ಮಂದಿಯನ್ನು ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 28 ಮೊಬೈಲ್, 8 ಲಕ್ಷ ರೂಪಾಯಿ ಮೌಲ್ಯದ ಕಾರ್, 2.67 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.     ಐಪಿಎಲ್ ನಡೆಯುತ್ತಿರುವುದರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಇದರಿಂದಾಗಿ ಮಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದ್ದು, 4 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ Read More »

ಕರಾವಳಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು ಅ. 29: ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಎಂಬಲ್ಲಿ ನಡೆದಿತ್ತು.ಮೃತ ಮಹಿಳೆಯನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿ‌ ನಿವಾಸಿ ಮಧುಶ್ರೀ ಎಂದು ಗುರುತಿಸಲಾಗಿದೆ.  ಇವರ, “ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ, ಜೀವ ಬೆದರಿಕೆಯಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ” ಆಕೆ ತನ್ನ ಡೈರಿಯಲ್ಲಿ ಬೆರೆದುಕೊಂಡಿರುವ ಆಧಾರದಲ್ಲಿ ಮತ್ತು ಆಕೆಯ ಮಾವ ನೀಡಿದ ದೂರಿನ ಆಧಾರದಲ್ಲಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಪುತ್ತೂರಿನ ಖಾಸಗಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ Read More »

ಕರಾವಳಿ
Scroll to Top