➤➤ ವಿಶೇಷ ಲೇಖನ ಜೂನ್ 26: “ಮಾದಕವಸ್ತು ವಿರೋಧಿ ದಿನ” ಎಲ್ಲಾ ಓಕೆ ಗಾಂಜಾ ಯಾಕೆ? ✍? ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ಜೂ. 26. ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ. ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ, […]

