ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಯೌವ್ವನವನ್ನು ಬಲಿ ನೀಡುತ್ತಿರುವುದು ಖೇದಕರ – ಬಹು|ಇಬ್ರಾಹಿಂ ಸಅದಿ ಮಾಣಿ – ಸೂರಿಕುಮೇರು ಸುನ್ನೀ ಸಂಘಟನೆಗಳ ವತಿಯಿಂದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಮಾಣಿ, ಜು. 31. ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಯೌವ್ವನವನ್ನು ಮುಗಿಸುತ್ತಿರುವುದು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಹೆಚ್ಚುತ್ತಿದ್ದು, ಆ ಮೂಲಕ ಕೆಡುಕಿನ ದಾಸರಾಗಿ ತಮ್ಮ ಇಹಪರ ನಷ್ಟ ಹೊಂದುತ್ತಿರುವುದು ಬಹಳ ಖೇದಕರ. ಮತ್ತು ಪೋಷಕರು ಮತ್ತೆ ಮತ್ತೆ ಜಾಗೃತಿಗೊಳ್ಳುವುದು ಹಾಗೂ ಕೆಟ್ಟ ಗೆಳೆಯರ ಸಹವಾಸದಿಂದ ದೂರ ಸರಿಯುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಬಹು| ಇಬ್ರಾಹಿಂ ಸಅದಿ ಮಾಣಿ ಹೇಳಿದರು. ಅವರು ಎಸ್‌ವೈಎಸ್ ಎಸ್ಸೆಸ್ಸೆಫ್ ಕೆಎಂಜೆ […]

