‘ಮನಸ್ಸಿನಿಂದ ಮಾತನಾಡಬೇಕು, ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ’; ಹೈದರಾಬಾದ್ ನ ವೇದಿಕೆ ಮೇಲೆ ಎಲ್ಲರ ಗಮನ ಸೆಳೆದ ರಿಷಬ್ ಶೆಟ್ಟಿ
(ನ್ಯೂಸ್ ಕಡಬ) newskadaba.com, ಸೆ. 30 ಹೈದರಬಾದ್: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ದೇಶಾದ್ಯಂತ 6 ಸಾವಿರಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ.ಈ ಸಿನಿಮಾದ ಬಜೆಟ್ 150 ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಬ್ ಶೆಟ್ಟಿ ಹಾಗೂ ತಂಡ ಹೈದರಾಬಾದ್ಗೆ ತೆರಳಿ ಸಿನಿಮಾ ಪ್ರಚಾರ ಮಾಡಿದೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ರಿಷಬ್ ಅವರು ಕನ್ನಡದಲ್ಲೇ ಮಾತನಾಡಿದರು ಅನ್ನೋದು ವಿಶೇಷ. […]

