Hosmata

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಘಟ್ಟದ ತಪ್ಪಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಡಬ ಸಮೀಪದ ಹೊಸಮಠ ಮುಳುಗು ಸೇತುವೆಯು ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಕಡಬ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರ ಪರಿಣಾಮ ನದಿ, ಹಳ್ಳ, ಹೊಳೆಗಳು ತುಂಬಿ ಹರಿಯತೊಡಗಿವೆ. ಗುರುವಾರ ಬೆಳಿಗ್ಗೆಯಿಂದಲೇ ಕಡಬ ಸಮೀಪದ ಹೊಸ್ಮಠದಲ್ಲಿ ಗುಂಡ್ಯ ಹೊಳೆಗೆ ನಿರ್ಮಾಣವಾಗಿದ್ದ ಮುಳುಗು ಸೇತುವೆಯ ಅಂಚಿಗೆ ನೀರು ಹೊಡೆಯುತ್ತಿತ್ತಾದರೂ ಮಧ್ಯಾಹ್ನ ವೇಳೆಗೆ ಮುಳುಗಡೆಯಾಗಿದೆ. ಘಾಟ್ ತಪ್ಪಲಿನಲ್ಲಿ ಮಳೆಯ ಅಬ್ಬರ […]

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರ ಅಸ್ತವ್ಯಸ್ತ Read More »

ಕರಾವಳಿ

ಹೊಸ್ಮಠ: ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ನ.14. ಇಲ್ಲಿನ ಹೊಸ್ಮಠ ಬಸ್ ನಿಲ್ದಾಣದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸುಗುಣಾ ದಯಾನಂದ ಎಂಬವರ ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಲ್ಲಿ ಕುಟ್ರುಪ್ಪಾಡಿ ಗ್ರಾಮ ಪಂಚಾಯತಿಯ ಕೇಂದ್ರ ಗ್ರಂಥಾಲಯ ಹಾಗೂ ಫ್ಯಾನ್ಸಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿದ್ದ ಟೈಲರಿಂಗ್ ಮೆಷಿನ್,   ಮದುವೆ ಸಮಾರಂಭಗಳ ಕೃತಕ ಆಭರಣಗಳು, ಅಗತ್ಯ ದಾಖಲೆ ಪತ್ರಗಳು ಸೇರಿದಂತೆ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಘಟನೆಗೆ ನಿಖರವಾದ

ಹೊಸ್ಮಠ: ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟಕ್ಕೆ ► ಹೊಸ್ಮಠದ ಹುಸೇನ್ ಅಝ್ಮಾಲ್ ಆಯ್ಕೆ 

(ನ್ಯೂಸ್ ಕಡಬ) newskadaba.com ಕಡಬ, ನ.01. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕ್ರೀಡಾಕೂಟ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ 29ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹುಸೇನ್ ಅಝ್ಮಾಲ್ ಆಯ್ಕೆಯಾಗಿದ್ದಾರೆ. ಇವರು ನವೆಂಬರ್ 4ರಿಂದ 7ರವರೆಗೆ ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ದ.ಕ. ಜಿಲ್ಲೆಯ ಏಕೈಕ ಕ್ರೀಡಾಪಟುವಾಗಿದ್ದಾರೆ. ಇವರಿಗೆ ಕಡಬ

ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟಕ್ಕೆ ► ಹೊಸ್ಮಠದ ಹುಸೇನ್ ಅಝ್ಮಾಲ್ ಆಯ್ಕೆ  Read More »

ಕ್ರೀಡಾ ನ್ಯೂಸ್

ಹೊಸಮಠ ಪ್ರಾ.ಕೃ.ಪ. ಸಹಕಾರಿ ಸಂಘದ ಮಹಾಸಭೆ ► ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಅವ್ಯವಹಾರ ಬಯಲಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವರಾಮ ಪಿ.ಬಿ ಎಂಬವರು ನಡೆಸಿದರೆನ್ನಲಾದ ಅವ್ಯವಹಾರ ಸಾಬೀತಾಗಿದ್ದು, ಅವರು ನಡೆಸಿದ ಅವ್ಯವಹಾರ ಆದ ನಷ್ಟ ಹಾಗೂ ದಂಡನೆ ವಿಧಿಸಿ ಅವರಿಗೆ ವಸೂಲಿ ಮಾಡಿಕೊಳ್ಳಲಾಗಿರುವ ವಿಚಾರವನ್ನು ಸಭೆಗೆ ತಿಳಿಸಲಾಗಿದ್ದು ಈ ಬಗ್ಗೆ ಚರ್ಚೆ ನಡೆದ ಘಟನೆ ನಡೆಯಿತು. 2016-17ನೇ ಸಾಲಿನಲ್ಲಿ ಸಂಘವು 37.21.626 ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ ಮಾಡಲಾಗಿದ್ದು, ಸಂಘವು ಎ

ಹೊಸಮಠ ಪ್ರಾ.ಕೃ.ಪ. ಸಹಕಾರಿ ಸಂಘದ ಮಹಾಸಭೆ ► ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಅವ್ಯವಹಾರ ಬಯಲಿಗೆ Read More »

ಕರಾವಳಿ

ಸೇತುವೆ ಕಾಮಗಾರಿ ನಡೆದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ, ಈ ವರ್ಷವೂ ನೆರೆ ನೀರಿನ ಭೀತಿ ತಪ್ಪಿಲ್ಲ….!

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿಗೆ ಸಮೀಪದ ಹೊಸಮಠ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಮುಗಿದರೂ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹೊಸಮಠದ ಹಳೇ ಸೇತುವೆ ಮುಳುಗಡೆಗೊಂಡು ಜನರು ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ. ಹೊಸ ಸೇತುವೆ ಕಾಮಗಾರಿ ಪುರ್ಣಗೊಂಡರೂ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹಳೆ ಸೇತುವೆಯನ್ನು ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನೆರೆ ಭೀತಿ ಹಾಗೂ ಅಪಾಯ ಇನ್ನೂ ಅಬಾಧಿತವಾಗಿದೆ. ಈ ಭಾಗದ ಜನತೆಯ ಬಹು ನಿರೀಕ್ಷೆಯ ಬೃಹತ್ ಸೇತುವೆ

ಸೇತುವೆ ಕಾಮಗಾರಿ ನಡೆದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ, ಈ ವರ್ಷವೂ ನೆರೆ ನೀರಿನ ಭೀತಿ ತಪ್ಪಿಲ್ಲ….! Read More »

ಕರಾವಳಿ

ಪ್ರಸಕ್ತ ವರ್ಷದಲ್ಲಿ ಮೊದಲ ಸಲ ಮುಳುಗಡೆಯಾದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಜು.20. ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುಳುಗೆ ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯು ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದೆ. ನೂತನ ಸೇತುವೆಯ ಕಾಮಗಾರಿ ನಡೆಯುತ್ತಿದ್ದರೂ, ಪೂರ್ತಿಯಾಗದ ಕಾರಣ ಹಳೇ ಸೇತುವೆಯನ್ನು ಕಾಯುವ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಸೇತುವೆ ಮುಳುಗಡೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರು ಇಚಿಲಂಪಾಡಿ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಿದೆ‌. ಕಡಬ ಪೊಲೀಸರು ಸ್ಥಳದಲ್ಲಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಮೊದಲ ಸಲ ಮುಳುಗಡೆಯಾದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್ Read More »

ಕರಾವಳಿ
Scroll to Top