ವಿಟ್ಲದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ► ಯುವಕನಿಗೆ ಹಲ್ಲೆಗೈದು ಕಾರು, ನಗದು, ಚಿನ್ನಾಭರಣ ದರೋಡೆ
(ನ್ಯೂಸ್ ಕಡಬ) newskadaba.com ವಿಟ್ಲ, ಅ.21. ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಸ್ವತ್ತುಗಳನ್ನು ದರೋಡೆಗೈದ ಘಟನೆ ಶನಿವಾರ ಮುಂಜಾನೆ ವಿಟ್ಲ ಸಮೀಪದ ಕುಡ್ತಮೊಗೇರು ಎಂಬಲ್ಲಿ ನಡೆದಿದೆ. ಹನೀಫ್ ಎಂಬಾತನೇ ತಂಡದಿಂದ ಹಲ್ಲೆಗೊಳಗಾದ ಯುವಕ. ಕುಡ್ತಮೊಗೇರು ಫ್ಲ್ಯಾಟ್ ನಲ್ಲಿ ಮುಂಜಾನೆ ಮೂರು ಗಂಟೆ ಸುಮಾರಿಗೆ ತಂಡವೊಂದು ಹಲ್ಲೆ ನಡೆಸಿ ಹನೀಫ್ ಬಳಿಯಿದ್ದ ಸ್ವಿಫ್ಟ್ ಕಾರು, ಐದು ಪವನ್ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರುವ ಹನೀಫ್ ನನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಟ್ಲದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ► ಯುವಕನಿಗೆ ಹಲ್ಲೆಗೈದು ಕಾರು, ನಗದು, ಚಿನ್ನಾಭರಣ ದರೋಡೆ Read More »
ಕರಾವಳಿ
