ಹೃದಯಾಘಾತ- ಎಎಸ್ಐ ವಿಧಿವಶ
(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 24. ಹೃದಯಘಾತದಿಂದ ಪೊಲೀಸ್ ಅಧಿಕಾರಿಯೋರ್ವರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಎಂದು ಗುರುತಿಸಲಾಗಿದೆ. ಜಿ.ಕೆ ಮುರಳೀಧರ್ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದು, ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಳಸದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿ.ಕೆ ಮುರಳೀಧರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೃದಯಾಘಾತ- ಎಎಸ್ಐ ವಿಧಿವಶ Read More »
ಕರ್ನಾಟಕ, ಕ್ರೈಮ್ ನ್ಯೂಸ್