govt hospital

ಸುಳ್ಯ: ತಾಲೂಕು ಆರೋಗ್ಯಾಧಿಕಾರಿ ನಾಳೆ (ಜ. 31) ಸೇವೆಯಿಂದ ನಿವೃತ್ತಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 30. ತಾಲೂಕು ಆರೋಗ್ಯಾಧಿಕಾರಿಯಾಗಿ 2010ರಿಂದ ಕರ್ತವ್ಯದಲ್ಲಿದ್ದ ಡಾ.ಸುಬ್ರಹ್ಮಣ್ಯ ಎಂ.ಆರ್ ಅವರು ನಾಳೆ(ಜ. 31) ನಿವೃತ್ತಿ‌ ಹೊಂದಲಿದ್ದಾರೆ. ಕುಕ್ಕೇ ಸುಬ್ರಹ್ಮಣ್ಯದವರಾದ ಇವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಲ್ಲೇ ಪಡೆದು, ವೈದ್ಯಕೀಯ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. ಎಂ.ಬಿ.ಬಿ.ಎಸ್ ಬಳಿಕ ಮಂಡ್ಯದಲ್ಲಿ ಕೆಲ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. 1995ರಲ್ಲಿ ಸರಕಾರಿ ಸೇವೆಗೆ ನೇಮಕಾತಿ ಪಡೆದ ಇವರು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಬಳಿಕ 2006ರಲ್ಲಿ ತಾಲೂಕು […]

ಸುಳ್ಯ: ತಾಲೂಕು ಆರೋಗ್ಯಾಧಿಕಾರಿ ನಾಳೆ (ಜ. 31) ಸೇವೆಯಿಂದ ನಿವೃತ್ತಿ Read More »

ಕರಾವಳಿ, ಕರ್ನಾಟಕ

ನಾಳೆ (ಮೇ.04) ಕಡಬ ಸರಕಾರಿ ಆಸ್ಪತ್ರೆಯಲ್ಲಿ ‘ಸ್ಪೆಶಾಲಿಟಿ ಕ್ಲಿನಿಕ್’ ವಿಶೇಷ ವೈದ್ಯಕೀಯ ಶಿಬಿರ ➤ ಮೆಡಿಸಿನ್‌ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಚರ್ಮರೋಗ ತಜ್ಞರಿಂದ ಸಾರ್ವಜನಿಕ ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಕರ್ನಾಟಕ ಸರಕಾರಿ ವೈದ್ಯರ ಸಂಘದ ಆಶ್ರಯದಲ್ಲಿ ‘ಸ್ಪೆಶಾಲಿಟಿ ಕ್ಲಿನಿಕ್’ ವೈದ್ಯಕೀಯ ಶಿಬಿರವು ಶನಿವಾರದಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ನಡೆಯಲಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಚರ್ಮರೋಗ ತಜ್ಞರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ವೈದ್ಯಕೀಯ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಮೇ.04) ಕಡಬ ಸರಕಾರಿ ಆಸ್ಪತ್ರೆಯಲ್ಲಿ ‘ಸ್ಪೆಶಾಲಿಟಿ ಕ್ಲಿನಿಕ್’ ವಿಶೇಷ ವೈದ್ಯಕೀಯ ಶಿಬಿರ ➤ ಮೆಡಿಸಿನ್‌ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಚರ್ಮರೋಗ ತಜ್ಞರಿಂದ ಸಾರ್ವಜನಿಕ ಸೇವೆ Read More »

ಆರೋಗ್ಯ ಮಾಹಿತಿ
Scroll to Top