ಚಾಮರಾಜನಗರದಲ್ಲಿ ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಮೃತ್ಯು
(ನ್ಯೂಸ್ ಕಡಬ) newskadaba.com, ಸೆ.17 ಚಾಮರಾಜನಗರ : ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ಕೊಳ್ಳೇಗಾಲದ ಯಳಂದೂರು ಮಾರ್ಗಮಧ್ಯದ ಎಳೆ ಪಿಳ್ಳಾರಿ ದೇವಸ್ಥಾನದ ಹತ್ತಿರ ಘಟನೆ ನಡೆದಿದೆ. ಸುಮಂತ್ (22), ನಿತಿನ್ ಕುಮಾರ್ (16) ಸಾವನ್ನಪ್ಪಿದ ದುರ್ದೈವಿಗಳು. ಲಾರಿಗೆ ಟೊಮ್ಯಾಟೊ ತುಂಬಿಕೊಂಡು ಹೋಗುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಅಪಘಾತವಾಗುತ್ತಿದ್ದಂತೆ ರಸ್ತೆಗೆ ಟೊಮ್ಯಾಟೊ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. […]
ಚಾಮರಾಜನಗರದಲ್ಲಿ ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಮೃತ್ಯು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
