ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ
(ನ್ಯೂಸ್ ಕಡಬ) newskadaba.com ಮಾಣಿ, ಆ.27. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ಮಾರುತಿ ಬ್ರೆಝಾ ಕಾರು ಮತ್ತು ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಗಾಯಗೊಂಡ ಆಕ್ಟಿವಾ ಸವಾರರನ್ನು ಗಡಿಯಾರದ ನಿವಾಸಿಗಳಾದ ಮೋನು ಕರಾಯ ಮತ್ತು ಅವರ ಪುತ್ರಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋನುರವರು ತನ್ನ ಮಗಳೊಂದಿಗೆ ಮನೆ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ Read More »
ಕರಾವಳಿ
