fire

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ ► ಅಪಾಯದಿಂದ ಪಾರು..!!!

(ನ್ಯೂಸ್ ಕಡಬ) newskadaba.com ಮುಂಬೈ, ಅ.25. ನಗರದ ಬಾಂದ್ರಾದಲ್ಲಿ ವಾಸವಾಗಿರುವ ಐಶ್ವರ್ಯ ರೈ ತಾಯಿ ಮನೆ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಅಭಿಷೇಕ್ ಜೊತೆ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಮನೆಗೆ […]

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ ► ಅಪಾಯದಿಂದ ಪಾರು..!!! Read More »

ಕರ್ನಾಟಕ

ಬಿಜೈ: ಲಾಂಡ್ರಿ ಬೆಂಕಿಗಾಹುತಿ ► ದುಬಾರಿ ಸೀರೆ ಸೇರಿ ಲಕ್ಷಕ್ಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.19. ಇಲ್ಲಿನ ಬಿಜೈನಲ್ಲಿರುವ ಲಾಂಡ್ರಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದ್ದು, ಒಂದು ಲಕ್ಷ ರೂ. ನಷ್ಟು ನಷ್ಟ ಉಂಟಾದ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ. ರೆನ್ವಿಕ್ ಎಂಬವರ ಮಾಲಕತ್ವದ ಆಧುನಿಕ ತಂತ್ರಜ್ಞಾನವಿರುವ ಮೈ ಆಂಗರ್ ಲಾಂಡ್ರಿಗೆ ಬೆಂಕಿ ಹೊತ್ತಿಕೊಂಡು ದುಬಾರಿ ಮೌಲ್ಯದ ಸೀರೆಗಳು ಸೇರಿದಂತೆ ಇತರ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಕದ್ರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು

ಬಿಜೈ: ಲಾಂಡ್ರಿ ಬೆಂಕಿಗಾಹುತಿ ► ದುಬಾರಿ ಸೀರೆ ಸೇರಿ ಲಕ್ಷಕ್ಕೂ ಅಧಿಕ ನಷ್ಟ Read More »

ಕರಾವಳಿ

ಮಂತ್ರಾಲಯದಲ್ಲಿ ಅಗ್ನಿ ಅವಘಡ ► 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!

(ನ್ಯೂಸ್ ಕಡಬ) newskadaba.com ರಾಯಚೂರು, ಸೆ.18,: ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಅಕಸ್ಮಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಅಂಗಡಿಗಳು ಸುಟ್ಟು ಸುಮಾರು 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿದೆ. ರಾಘವೇಂದ್ರ ಸ್ವಾಮಿ ಮಠದ ಬಳಿ ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ನಡೆದಿದ್ದು, 5 ಅಂಗಡಿಗಳು ಹೊತ್ತಿ ಉರಿದಿವೆ. ತುಂಗಭದ್ರಾ ನದಿ ತೀರದಲ್ಲಿರುವ ಪೂಜೆ ಸಾಮಗ್ರಿ, ಆಟಿಕೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಗುರು, ಭೀಮಣ್ಣ, ಜಗಂ ಮಹೇಶ್, ಆದಿ, ಬಂದೇಜಿ ರಾವ್ ಎಂಬವರಿಗೆ ಸೇರಿದ ಅಂಗಡಿಗಳು

ಮಂತ್ರಾಲಯದಲ್ಲಿ ಅಗ್ನಿ ಅವಘಡ ► 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮ! Read More »

ಕರ್ನಾಟಕ

ಕುಡಿದ ಮತ್ತಿನಲ್ಲಿ ಪತ್ನಿ, ಮಕ್ಕಳಿಗೆ ಬೆಂಕಿಯಿಟ್ಟು ► ಆತ್ಮಹತ್ಯೆಗೆ ಶರಣಾದ ಪತಿ..!!!

(ನ್ಯೂಸ್ ಕಡಬ) newskadaba.com ಬಾಗಲಕೋಟೆ,ಸೆ.7, ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿ ಹಾಗು ಮಕ್ಕಳಿಗೆ ಬೆಂಕಿ ಇಟ್ಟು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೆಲವಗಿ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಎಂಬವರು ತನ್ನ ಕುಟುಂಬದೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಘಟನೆಯಲ್ಲಿ ಪತ್ನಿ ನಿರ್ಮಲಾ ಮತ್ತು ಮಕ್ಕಳಾದ ಸವಿತಾ ಮತ್ತು ರಾಹುಲ್ ಬದುಕುಳಿದಿದ್ದಾರೆ. ಬೆಂಕಿ ಹಚ್ಚಿಕೊಂಡ ಬಸಪ್ಪ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಾನಮತ್ತರಾಗಿದ್ದ ಬಸಪ್ಪ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತನ್ನ

ಕುಡಿದ ಮತ್ತಿನಲ್ಲಿ ಪತ್ನಿ, ಮಕ್ಕಳಿಗೆ ಬೆಂಕಿಯಿಟ್ಟು ► ಆತ್ಮಹತ್ಯೆಗೆ ಶರಣಾದ ಪತಿ..!!! Read More »

ಕರಾವಳಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 28, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ಹತ್ತಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು, ಬೇಕರಿ, ಮೊಬೈಲ್ ಶಾಪ್ ಸೇರಿದಂತೆ ಐದು ಅಂಗಡಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ಈ ಕುರಿತು ನೆಲೋಗಿ ಪೊಲೀಸ್

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ Read More »

ಕರ್ನಾಟಕ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ

(ನ್ಯೂಸ್ ಕಡಬ) newskadaba.com ಕಾರವಾರ, ಆ.01. ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಟವೇರಾ ಕಾರೊಂದು ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಮುಂಡಗೋಡು ನಿವಾಸಿ ಕಾರು ಚಾಲಕ ಪ್ರಭು  ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನಲ್ಲಿ ಯಲ್ಲಾಪುರದ ಉಮ್ಮಚಗಿಯಿಂದ  ತನ್ನ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ Read More »

ಕರ್ನಾಟಕ
Scroll to Top