ಗೋಳಿತ್ತಡಿ: ರಸ್ತೆ ಡಾಮರೀಕರಣಕ್ಕೆ ಸಚಿವ ರೈಯವರಿಂದ ಶಂಕುಸ್ಥಾಪನೆ ► ಎರಡೆರಡು ಬಾರಿ ಶಂಕುಸ್ಥಾಪನೆ ಭಾಗ್ಯ ಕಂಡ ಏಣಿತ್ತಡ್ಕ ರಸ್ತೆ
(ನ್ಯೂಸ್ ಕಡಬ) newskadaba.com ಕಡಬ, ಡಿ.06. ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಏಣಿತಡ್ಕ-ಗೋಳಿತ್ತಡಿ ರಸ್ತೆಯ ಸುಮಾರು ಒಂದೂವರೆ ಕಿಲೋಮೀಟರ್ ಉದ್ದ ರಸ್ತೆಗೆ ಡಾಮರೀಕರಣಕ್ಕಾಗಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ರಾಮಕುಂಜದ ಗೋಳಿತ್ತಡಿಯಲ್ಲಿ ನಾಮ ಫಲಕ ಅನಾವರಣ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಉದನೆಯಲ್ಲಿ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಶಾಂತಿಮೊಗೇರು ನೂತನ ಸೇತುವೆ ಉದ್ಘಾಟನೆ ಮಾಡಿದ ಸಚಿವರು ಸಂಜೆ ತರಾತುರಿಯಲ್ಲಿ ಗೋಳಿತ್ತಡಿಯಲ್ಲಿ ನಬಾರ್ಡ್ ಯೋಜನೆಯಡಿ ಸುಮಾರು 49 ಲಕ್ಷ […]

