ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ ಸೀಟು ಗಿಟ್ಟಿಸಿದ ಕಡಬದ ಯುವ ವೈದ್ಯ ಡಾ. ಅವಿನ್
(ನ್ಯೂಸ್ ಕಡಬ) newskadaba.com ಕಡಬ, ಜೂ.20. ಇತ್ತೀಚೆಗೆ ನಡೆದ ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಬದ ಯುವ ವೈದ್ಯರೋರ್ವರು ದೇಶದ ಪ್ರತಿಷ್ಠಿತ ಲಕ್ನೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೋಣಿಮನೆ ಶ್ರೀ ದುಷ್ಯಂತ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಯ ಪುತ್ರ ಯುವ ವೈದ್ಯ ಡಾ. ಅವಿನ್ ದೋಣಿಮನೆ, ನೀಟ್ ಪರೀಕ್ಷೆ ಬರೆದು MCh ನ್ಯೂರೋ ಸರ್ಜರಿ (Brain & […]

