ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಹಿನ್ನೆಲೆ ► 108 ಆಂಬ್ಯುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
(ನ್ಯೂಸ್ ಕಡಬ) newskadaba.com ಕಡಬ, ಸೆ.28. ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ಬೆಳಿಗ್ಗೆ 9.00ರ ಸುಮಾರಿಗೆ ಕಡಬ ಸಮೀಪದ ಪದವು ಎಂಬಲ್ಲಿ ನಡೆದಿದೆ. ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ರವೀಂದ್ರ ಎಂಬವರ ಪತ್ನಿ ಭವಾನಿ ಎಂಬವರು ಗುರುವಾರ ಮುಂಜಾನೆ ಹೆರಿಗೆ ನೋವು ಬಂದ ಕಾರಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ತಾಸು ಕಳೆದರೂ ವೈದ್ಯರು ಅಗಮಿಸದ ಕಾರಣ ದಾದಿಯರು ಕೊನೆಯ ಕ್ಷಣದಲ್ಲಿ […]

