death

➤ ಯಾದಗಿರಿ ಮಗನ ಸಾವಿನ ಸುದ್ದಿ ಕೇಳಿ ಸಾವಿಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com.ಯಾದಗಿರಿ, ಮಾ 4.   ಮಗನ ಸಾವಿನ ಸುದ್ದಿ ಕೇಳಿ ತಂದೆ ಬಸವರಾಜ ಬಿರಾದಾರ (55) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ನಡೆದಿದೆ.  ಮದ್ದರಕಿ ಗ್ರಾಮದ ಹೊರಭಾಗದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತವಾಗಿತ್ತು. ಇದರಲ್ಲಿ ಬಸವರಾಜ ಅವರ ಮಗ ಶಿವಕುಮಾರ ಬಿರಾದರ ( 34) ಸಾವನ್ನಪ್ಪಿದ್ದರು. ಈ ಘಟನೆಯಿಂದ ತೀವ್ರ ಮನನೊಂದಿದ್ದ ತಂದೆ ಬಸವರಾಜ ಮಗ ಹೋದ ಮೇಲೆ ನಾನು ಇರಲ್ಲ ಎಂದು […]

➤ ಯಾದಗಿರಿ ಮಗನ ಸಾವಿನ ಸುದ್ದಿ ಕೇಳಿ ಸಾವಿಗೆ ಶರಣಾದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ

(ನ್ಯೂಸ್ ಕಡಬ)newskadaba.com ಅಥೆನ್ಸ್, ಮಾ.04. ರೈಲುಗಳೆರಡರ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಕನಿಷ್ಠ 26 ಮಂದಿ ಸಾವನ್ನಪ್ಪಿದ ಘಟನೆ ಗ್ರೀಸ್‌‌ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಥೆನ್ಸ್‌ನ ಉತ್ತರ ನಗರ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್‌ ರೈಲು ಮತ್ತು ಮಧ್ಯ ಗ್ರೀಸ್‌ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ತುಂಬಿದ (ಕಾರ್ಗೋ) ರೈಲು ನಡುವೆ ಢಿಕ್ಕಿ ಸಂಭವಿಸಿದೆ.

ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ Read More »

ರಾಷ್ಟ್ರೀಯ ನ್ಯೂಸ್

➤ ಕಡಬ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಕಡಬ, ಮಾ 3. ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಮಹಮ್ಮದ್ ಆತ್ಮಹತ್ಯೆಗೆ ಶರಣಾದವರು. ಕೋಡಿಂಬಾಳದ  ಕಾರ್ಖಾನೆ ಎಂಬಲ್ಲಿ  ಮಾವಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸುಮಾರು 06 ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಯಾವುದೇ ಕೆಲಸ ಮಾಡಲು ಆಗದೆ ಇದ್ದುದರಿಂದ ಮಾನಸಿಕವಾಗಿ ನೊಂದಿದ್ದು, ಅದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು  ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

➤ ಕಡಬ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ! Read More »

ಕರಾವಳಿ, ಕ್ರೈಮ್ ನ್ಯೂಸ್

ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದು ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com  ಚಾಮರಾಜನಗರ, ಮಾ.03. ಸಿಹಿ ಎಂದು ಭಾವಿಸಿ ಇರುವೆಗೆ ಸಿಂಪಡಿಸುವ ಪೌಡರ್ ಸೇವಿಸಿ ಐದು ವರ್ಷದ ಬಾಲಕ ಅಸುನೀಗಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ‌ ಪುಟ್ಟಿರಮ್ಮನದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕ್ಯಾತೆ ಗೌಡ ಎಂಬುವರ 5 ವರ್ಷದ ಮಗ ಶಿವು ಎಂಬ ಬಾಲಕ ಎಂದು ತಿಳಿದುಬಂದಿದ್ದು, ಮನೆಯಲ್ಲಿ ಇರುವೆಗಳನ್ನು ನಾಶ ಪಡಿಸಲು ತಂದಿಟ್ಟಿದ್ದ ಇರುವೆ ನಾಶಕವನ್ನು ಸಿಹಿ ತಿಂಡಿ ಎಂದು ತಿಂದಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.  

ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದು ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾರ್ಜ್‌ಗಿಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟ..! ➤ ವ್ಯಕ್ತಿಯೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಮಾ.03. ಮೊಬೈಲ್‌ ಫೋನ್‌ನ್ನು ಚಾರ್ಜ್‌ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಫೋನ್ ಸ್ಪೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದಯಾರಾಮ್ ಬರೋದ್ (68) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಪತ್ನಿ ಸಾವನ್ನಪ್ಪಿದ ಬಳಿಕ ಬದ್‌ನಗರ ತೆಹಸಿಲ್‌ನ ರುನಿಜಾ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು, ಮೊಬೈಲ್‌ನ್ನು ಚಾರ್ಜ್‌ಗೆ ಇರಿಸಿ ತನ್ನ ಸ್ನೇಹಿತನೊಂದಿಗೆ ಅದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.  

ಚಾರ್ಜ್‌ಗಿಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟ..! ➤ ವ್ಯಕ್ತಿಯೋರ್ವ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟೆಂಪೊ ಮತ್ತು ಸ್ಕೂಟರ್ ನಡುವೆ ಅಪಘಾತ..! ➤ ಓರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.03. 407 ಟೆಂಪೊ ಹಾಗೂ ಸ್ಕೂಟರ್ ನಡುವಿನ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕರಾವಳಿ ಬೈಪಸ್ ನಲ್ಲಿ ವರದಿಯಾಗಿದೆ. ಗಣಪತಿ ಪೈ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಣಪತಿಯವರು ಕರಾವಳಿ ಬೈಪಸ್ ನಿಂದ ಸಂತೆಕಟ್ಟೆಯತ್ತ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಟೆಂಪೋಗೆ ಡೀಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಂಪೊ ಮತ್ತು ಸ್ಕೂಟರ್ ನಡುವೆ ಅಪಘಾತ..! ➤ ಓರ್ವ ಮೃತ್ಯು Read More »

ಕರಾವಳಿ

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ)newskadaba.com ತೆಲಂಗಾಣ, ಮಾ.02. ಗುಡಿಸಲಿನ ಮೇಲೆ ಲಾರಿವೊಂದು ಹರಿದು ಕರ್ನಾಟಕದ ಮೂವರು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದುಬಂದಿದೆ. ಲಾರಿ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು! Read More »

ರಾಷ್ಟ್ರೀಯ ನ್ಯೂಸ್

ಬಸ್ಸಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು..!    

(ನ್ಯೂಸ್ ಕಡಬ)newskadaba.com ಉಡುಪಿ, ಮಾ.02. ಕಾರ್ಕಳ ತಾಲೂಕಿನ ಹಿರ್ಗಾನದ ಸಮೀಪದಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಮೃತ ಬೈಕ್ ಸವಾರ ಹಿರ್ಗಾನ ಗ್ರಾಮದ ಕಾನಂಗಿ ಹಂಕರಬೆಟ್ಟು ನಿವಾಸಿ ಮನೋಹರ ಪೂಜಾರಿ(43ವ) ಎಂದು ಗುರುತಿಸಲಾಗಿದೆ.

ಬಸ್ಸಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು..!     Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.02. ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಘಟನೆ ಉಪ್ಪಳ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತಪಟ್ಟವರು.  

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿ ಮೃತ್ಯು

(ನ್ಯೂಸ್ ಕಡಬ)newskadaba.com ದುಬೈ, ಮಾ.02. ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ. ಜರ್ಮನಿಯಲ್ಲಿ ನೆಲೆಸಿದ್ದ ಹೋಮ್ಸ್‌ನ 53 ವರ್ಷದ ಸಿರಿಯನ್ ವ್ಯಕ್ತಿ ಗಾಝಿ ಜಸ್ಸಿಮ್ ಶೆಹದೆಹ್ ಸೈಕಲ್ ನಲ್ಲಿ ಪ್ರಯಾಣಿಸಿ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದರು‌. ಶೆಹಾದೆಹ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು. ಅವರ ಅನುಭವಗಳು ಮತ್ತು ಸವಾಲುಗಳನ್ನು ತಮ್ಮ ಅನುಯಾಯಿಗಳೊಂದಿಗೆ

ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್
Scroll to Top