death

ಮದುವೆ ವೇದಿಕೆಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಮೃತ್ಯು.!

(ನ್ಯೂಸ್ ಕಡಬ)Newskadaba.com ಛತ್ತೀಸ್‌ಗಢ,ಮೇ.11 ಮದುವೆ ಸಂಭ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ ಸಂಭವಿಸಿ ವೇದಿಕೆಯಲ್ಲಿ ಕುಸಿದು ಬಿದ್ದು  ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರಗಢದಲ್ಲಿ ನಡೆದಿದೆ. ಮೃತರನ್ನು ದಿಲೀಪ್ ರೌಜ್ಕರ್ ಎಂದು ಗುರುತಿಸಲಾಗಿದೆ.ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ ದಿಲೀಪ್ ರೌಜ್ಕರ್ ಛತ್ತೀಸ್‌ಗಢದ ಬಲೋದ್ ಜಿಲ್ಲೆಯ ನಿವಾಸಿ. ಅವರು ಇತ್ತೀಚೆಗೆ ತಮ್ಮ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದು, ಅಲ್ಲಿ ತನ್ನ ಆತ್ಮೀಯರೊಂದಿಗೆ ಮದುವೆ ವೇದಿಕೆಯಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಬಹಳ ಸಂತಸದಿಂದ ಭಿನ್ನ – ವಿಭಿನ್ನವಾಗಿ ಹಾಡಿಗೆ ಹೆಜ್ಜೆ […]

ಮದುವೆ ವೇದಿಕೆಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಮೃತ್ಯು.! Read More »

ರಾಷ್ಟ್ರೀಯ ನ್ಯೂಸ್

ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ಬಿಎಂಟಿಸಿ ಯಲಹಂಕ ಡಿಪೊ- 30ರಲ್ಲಿ ಎಲೆಕ್ಟ್ರಿಕ್ ಬಸ್ ಗೋಡೆಗೆ ಡಿಕ್ಕಿ ಹೊಡೆದಿದ್ದು, ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಸೋಮಶೇಖರಯ್ಯ (59) ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿ ಡಿಪೊಗೆ ಬಂದಿದ್ದ ಅವರು, ಕಚೇರಿಯಲ್ಲಿ ಟಿಕೆಟ್ ಹಣ ಜಮೆ ಮಾಡಿ ವಾಪಸು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸೋಮಶೇಖರಯ್ಯ ಅವರಿಗೆ ಗುದ್ದಿಕೊಂಡು ಮುಂದಕ್ಕೆ ಹೋಗಿದ್ದ ಬಸ್‌, ಗೋಡೆಗೆ ಡಿಕ್ಕಿ ಹೊಡೆದಿತ್ತು. ಬಸ್‌ ಹಾಗೂ ಗೋಡೆ ನಡುವೆ ಸಿಲುಕಿ ಸೋಮಶೇಖರಯ್ ದೇಹ ಜಜ್ಜಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು

ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..! Read More »

ಕರ್ನಾಟಕ

ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..!

(ನ್ಯೂಸ್ ಕಡಬ)Newskadaba.com ದಾವಣಗೆರೆ,ಮೇ.09 ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ನಡೆದಿದೆ. ಗಣೇಶ್ (16), ಹೇಮಂತ್ (15) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಗಣೇಶ್‌ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದ. ದೋಣಿಹಳ್ಳಿ ಶಾಲೆಗೆ ಈತನೇ ಪ್ರಥಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ. ಹೇಮಂತ್ 9ನೇ ತರಗತಿ ತೇರ್ಗಡೆಗೊಂಡು‌ ಎಸ್ಸೆಸ್ಸೆಲ್ಸಿಗೆ ದಾಖಲಾಗಬೇಕಿತ್ತು. ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.        

ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..! Read More »

ಕರ್ನಾಟಕ

ಜೇನುನೊಣದ ದಾಳಿಗೆ ಹೆದರಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದ ವ್ಯಕ್ತಿ.! ➤ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)Newskadaba.com ಗುಜರಾತ್,ಮೇ.09 ಜೇನುನೊಣಗಳ ದಾಳಿಗೆ ಹೆದರಿದ ವ್ಯಕ್ತಿಯೊಬ್ಬರು ಗುಜರಾತ್ ನ ಖಾಂಡ್ವಾದ ಜಿಲ್ಲಾ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಸ್ಥಳದಲ್ಲೇ ಮೃತಟ್ಟಿದ್ದಾರೆ.ದುರಂತವೆಂದರೆ ಮೃತರ ಪತ್ನಿ ಅದೇ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ ಈ ಘಟನೆ ವರದಿಯಾಗಿದೆ. ಘಟನೆಯ ನಂತರ ಸಂತಸ ತುಂಬಿದ್ದ ಕುಟುಂಬದಲ್ಲಿ ಕತ್ತಲೆ ಕವಿದಿದೆ.ಮಾಹಿತಿ ಪ್ರಕಾರ ಮೃತರನ್ನು ಸಚಿನ್ ಸೋಲಂಕಿ ಎಂದು ಗುರುತಿಸಲಾಗಿದ್ದು ಅವರು ಖಾಂಡ್ವಾ ಜಿಲ್ಲೆಯ ಸಿಂಗೋಟ್‌ನ ರಾಂಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.    

ಜೇನುನೊಣದ ದಾಳಿಗೆ ಹೆದರಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದ ವ್ಯಕ್ತಿ.! ➤ಸ್ಥಳದಲ್ಲೇ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ಪತನ..!➤ಮೂವರು ಮೃತ್ಯು

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.08 ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಬಳಿ ಪತನಗೊಂಡಿದೆ. ಇದು ಮನೆಯೊಂದರ ಮೇಲೆ ಬಿದ್ದಿದೆ. ಇದರ ಪರಿಣಾಮ ಮೂವರು ಗ್ರಾಮಸ್ಥರು ಮೃತಪಟ್ಟಿದ್ದಾರೆ.ಈ ವಿಮಾನ ಸೂರತ್‌ಗಢದಿಂದ ಟೇಕಾಫ್ ಆಗಿತ್ತು.ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಪತನಗೊಂಡಿದೆ. ತಾಂತ್ರಿಕ ದೋಷದಿಂದಾಗಿ ವಿಮಾನವು ಹನುಮಾನ್‌ಗಢ್ ಜಿಲ್ಲೆಯ ಪಿಲಿಬಂಗಾ ಬಳಿ ಪತನಗೊಂಡಿದೆ.ಪೈಲಟ್ ಮತ್ತು ಸಹ ಪೈಲಟ್ ಸಕಾಲದಲ್ಲಿ ವಿಮಾನದಿಂದ ಜಿಗಿದರು ಮತ್ತು ಪ್ಯಾರಾಚೂಟ್ ಸಹಾಯದಿಂದ ಡ್ರೈನ್ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಆದರೆ, ವಿಮಾನ ಮನೆಯೊಂದರ ಮೇಲೆ

ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ಪತನ..!➤ಮೂವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಬೈಕ್​ ಗೆ KSRTC ಬಸ್ ಢಿಕ್ಕಿ ➤ ಸ್ಥಳದಲ್ಲೇ ನವವಿವಾಹಿತೆ ಮೃತ್ಯು

(ನ್ಯೂಸ್ ಕಡಬ)newskadaba.com ಮೈಸೂರು, ಮೇ.08. ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಬಳಿ ನಡೆದಿದೆ. ಹಲ್ಲರೆ ಗ್ರಾಮದ ಪೂಜಾ(19) ಮೃತ ದುರ್ದೈವಿಯಾಗಿದ್ದಾರೆ. ಪತಿ ಮದನ್ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಡಿಯಾಲ ಗ್ರಾಮದಿಂದ ಸಾರಿಗೆ ಬಸ್ ನಂಜನಗೂಡು ಕಡೆಗೆ ಬರುತ್ತಿದ್ದ ವೇಳೆ ಬೈಕ್ ​ನಲ್ಲಿ ನವದಂಪತಿಗಳು ತೆರಳುತ್ತಿದ್ದಾಗ ಈ ಸಂಭವಿಸಿದೆ.  

ಬೈಕ್​ ಗೆ KSRTC ಬಸ್ ಢಿಕ್ಕಿ ➤ ಸ್ಥಳದಲ್ಲೇ ನವವಿವಾಹಿತೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಪತ್ತೆಯಾಗಿದ್ದ ಸುಳ್ಯದ ಯುವಕನ ಮೃತದೇಹ ನದಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಮೇ.08. ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಗೆ ಸ್ನೇಹಿತರೊಂದಿಗೆ ಜಲ ಕ್ರೀಡೆಯಾಡಲೆಂದು ಹೋಗಿ ನಾಪತ್ತೆಯಾಗಿದ್ದ ಸುಳ್ಯದ ಯುವಕನ ಮೃತದೇಹ ಪತ್ತೆಯಾಗಿದೆ. ಸುಳ್ಯದ ನಿವಾಸಿ ಸುಹಾಸ್ ಎಂ (21) ಮೃತ ಯುವಕ ಎಂದು ತಿಳಿದುಬಂದಿದೆ. ಸುಹಾಸ್ ಮೃತದೇಹ ಮುಳುಗಿದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕೋಟ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ನಾಪತ್ತೆಯಾಗಿದ್ದ ಸುಳ್ಯದ ಯುವಕನ ಮೃತದೇಹ ನದಿಯಲ್ಲಿ ಪತ್ತೆ Read More »

ಕರಾವಳಿ

ಬೆಳ್ತಂಗಡಿ: ರಸ್ತೆ ಬದಿಯ ಬರೆಗೆ ಖಾಸಗಿ ಬಸ್ ಢಿಕ್ಕಿ !!! ➤ ಮಹಿಳೆ ಮೃತ್ಯು, ಐವರು ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ, 08. ಖಾಸಗಿ ಬಸ್ಸೊಂದು ರಸ್ತೆ ಬದಿಯ ಬರೆಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ನಾವೂರು ಬಳಿ ನಡೆದಿದೆ. ಮೃತರನ್ನು ಇಂದಬೆಟ್ಟು ಗ್ರಾಮದ ಸುಂದರಿ (60) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಐವರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಬೆಳ್ತಂಗಡಿ: ರಸ್ತೆ ಬದಿಯ ಬರೆಗೆ ಖಾಸಗಿ ಬಸ್ ಢಿಕ್ಕಿ !!! ➤ ಮಹಿಳೆ ಮೃತ್ಯು, ಐವರು ಪ್ರಯಾಣಿಕರಿಗೆ ಗಾಯ Read More »

ಕರಾವಳಿ

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಲೇಡಿ ಕಾನ್ಸ್​ಟೆಬಲ್..!

(ನ್ಯೂಸ್ ಕಡಬ)Newskadaba.com ಹೈದರಾಬಾದ್,ಮೇ.08 ವಯಸ್ಸಾದರೂ ಮದುವೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಮನನೊಂದು ಮಹಿಳಾ ಕಾನ್ಸ್​ಟೆಬಲ್ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.ಸುರೇಖಾ (28) ಮೃತ ಲೇಡಿ ಕಾನ್ಸ್​ಟೆಬಲ್. ಈಕೆ ತೆಲಂಗಾಣದ ಕಂದಕುರ ಮಂಡಲದ ಜೈತವರಮ್​ ಗ್ರಾಮದ ನಿವಾಸಿ. ಹೈದರಾಬಾದ್​ನ ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಸಾಲಿಬಂದ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಶಮ್ಶಿರಾಗಂಜ್​ ಕಾಲ್ವಗಡ್ಡದಲ್ಲಿ ತನ್ನ ಅಕ್ಕನ ಮನೆಯಲ್ಲಿ ಸುರೇಖಾ ವಾಸವಿದ್ದಳು. ಸುರೇಖಾ  ಒಂದು ವರ್ಷದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಲೇಡಿ ಕಾನ್ಸ್​ಟೆಬಲ್..! Read More »

ರಾಷ್ಟ್ರೀಯ ನ್ಯೂಸ್

ಯುವತಿಯೋರ್ವಳ ಬರ್ಬರ ಹತ್ಯೆ ! ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ)newskadaba.com  ತ್ರಿಶೂರು, ಏ. 08. ಯುವತಿಯನ್ನು ಬರ್ಬರವಾಗಿ ಕೊಲೆ‌ ಮಾಡಿ ಮೃತದೇಹವನ್ನು ಕಾಡಿನಲ್ಲಿ ಎಸೆದಿರುವ ಘಟನೆ ಕೇರಳದಲ್ಲಿ ನಡೆದಿದೆ. 26 ವರ್ಷದ ಮಹಿಳೆ ಅಥಿರಾಗೆ ಕೊಲೆ‌ ಮಾಡಿ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ಎಸೆಯಲಾಗಿದೆ ಎಂದು ವರದಿ ತಿಳಿಸಿದೆ.  

ಯುವತಿಯೋರ್ವಳ ಬರ್ಬರ ಹತ್ಯೆ ! ➤ ಓರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top