death

ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಡಿ. 27. ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ವಿರಾಜಪೇಟೆಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸಚಿನ್ ಮುತ್ತಣ್ಣ (26) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆರ್ಮುಗ ಎಂದು ಗುರುತಿಸಲಾಗಿದೆ. ಇವರನ್ನು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ➤ ಓರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಸ್ಕೂಟರ್ ಢಿಕ್ಕಿ ➤ ಅಪರಿಚಿತ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 27. ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಲ್ಲುಗುಂಡಿಯ ಗೂನಡ್ಕ ಕಡೆಪಾಲ ಬಳಿ ವರದಿಯಾಗಿದೆ. ಕಳೆದ 4 ದಿನಗಳಿಂದ ಕಲ್ಲುಗುಂಡಿ ಆರಂತೋಡು ಪರಿಸರದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ ಸ್ಕೂಟಿಗೆ ಬಲಿಯಾಗಿದ್ದಾರೆ. ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಸ್ಕೂಟರ್ ಢಿಕ್ಕಿ ➤ ಅಪರಿಚಿತ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 27. ಬೈಕೊಂದು ಮಾರ್ಗಮಧ್ಯೆ ಪುಟ್ ಪಾತ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮೃತರನ್ನು ಬಿಬಿಎಂಪಿ ಹೆಲ್ತ್ ಇನ್ ಸ್ಪೆಕ್ಟರ್ ಪ್ರಶಾಂತ್ (27) ಎಂದು ಗುರುತಿಸಲಾಗಿದೆ. ಜೆ.ಪಿ.ನಗರದಲ್ಲಿ ವಾಸವಿದ್ದ ಪ್ರಶಾಂತ್ ನಾಯ್ಕ್ ಬೈಕ್ ನಲ್ಲಿ ಸದಾಶಿವನಗರದಿಂದ ಜೆ.ಪಿ.ನಗರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.    

ರಸ್ತೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಕಲೇಟು ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಡಿ. 27. ಒಂದು ವರ್ಷದ ಹೆಣ್ಣು ಮಗುವಿನ ಗಂಟಲಲ್ಲಿ ಚಾಕಲೇಟ್ ಸಿಲುಕಿ‌ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸತಾರದಲ್ಲಿ ವರದಿಯಾಗಿದೆ. ಮೃತಪಟ್ಟ ಮಗುವನ್ನು ಶಾರ್ವರಿ ಸುಧೀರ್ ಜಾಧವ್ ಎಂದು ಗುರುತಿಸಲಾಗಿದೆ. ಮಗು ಚಾಕೊಲೇಟ್​ ನುಂಗಿ ಒದ್ದಾಡಿ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದು, ಇದನ್ನು ಕಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟಿದೆ.  

ಚಾಕಲೇಟು ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಮೃತ್ಯು           

(ನ್ಯೂಸ್ ಕಡಬ) newskadaba.com  ಚಾಮರಾಜನಗರ, ಡಿ.26. ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ಸಂಭವಿಸಿದೆ.  ಮೃತಪಟ್ಟವರನ್ನು 28 ವರ್ಷದ ಕುಮಾರ್ ಹಾಗೂ 35 ವರ್ಷದ ಶಿವರಾಜು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಸಿದ್ದರಾಜು ಪರಿಸ್ಥಿತಿ ಗಂಭೀರವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತರು ಕಾಗಲವಾಡಿಯ ಮೊಳೆ ಗ್ರಾಮದವರಾಗಿದ್ದು ಕ್ವಾರಿಗೆ ಕುಳಿ ಹೊಡೆಯಬೇಕಾದರೆ ಈ ಅವಘಡ ಸಂಭವಿಸಿದೆ. ಕಲ್ಲುಬಂಡೆಗಳ ರಾಶಿ ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಇಬ್ಬರು ಸ್ಥಳದಲ್ಲೇ

ಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಮೃತ್ಯು            Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೈಲು ಢಿಕ್ಕಿ- 90 ಕುರಿಗಳು ಹಾಗೂ 8 ರಣಹದ್ದುಗಳು ಸಾವು         

(ನ್ಯೂಸ್ ಕಡಬ) newskadaba.com ಲಕ್ನೋ, ಡಿ. 26. ರೈಲು ಢಿಕ್ಕಿ ಹೊಡೆದ ಪರಿಣಾಮ 90 ಕುರಿಗಳು ಮತ್ತು 8 ರಣಹದ್ದುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಮಪುರದ ಪಂಚ ಪರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಸರಯು ಸೇತುವೆ ಬಳಿ ಸಂಭವಿಸಿದೆ. ನಾಯಿಗಳು ಕುರಿಗಳ ಹಿಂಡನ್ನು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಗಾಬರಿಗೊಂಡ ಕುರಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ಈ ಸಂದರ್ಭ ಆ ಮಾರ್ಗದಲ್ಲಿ ಬಂದ ರೈಲೊಂದು ಢಿಕ್ಕಿ ಹೊಡೆದು ಕುರಿಗಳು ಸಾವಿಗೀಡಾಗಿವೆ. ಇದಾದ ಸ್ವಲ್ಪ ಸಮಯದ ಬಳಿಕ ಸತ್ತ ಕುರಿಗಳ

ರೈಲು ಢಿಕ್ಕಿ- 90 ಕುರಿಗಳು ಹಾಗೂ 8 ರಣಹದ್ದುಗಳು ಸಾವು          Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 26. ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಾಲ್ಮರ ಮುದ್ದೋಡಿ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸಾಲ್ಮರ ಮುದ್ದೋಡಿ ನಿವಾಸಿ ನಾರಾಯಣ ನಾಯ್ಕ (64) ಎಂದು ಗುರುತಿಸಲಾಗಿದೆ. ಅವರು ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.  

ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಮೃತ್ಯು  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರಡಿ ದಾಳಿ  ➤ ಓರ್ವ ಮೃತ್ಯು                

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ. 26. ಕರಡಿಯೊಂದು ದನಗಾಹಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಪುಣಜನೂರು ಗ್ರಾಮದ ರಾಜು ದು ಗುರುತಿಸಲಾಗಿದೆ. ಈತ ಎಂದಿನಂತೆ ದನಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕರಡಿ, ಈತನನ್ನು ಕಚ್ಚಿ ಸಾಯಿಸಿದಲ್ಲದೇ ದೇಹವನ್ನು ತಿಂದು ಹಾಕಿದೆ. ವಿಷಯ ತಿಳಿದ ವಲಯ ಅರಣ್ಯಧಿಕಾರಿ ನಿಸಾರ್ ಅಹಮದ್ ಹಾಗೂ ಅರಣ್ಯ ವೀಕ್ಷಕರಾದ ಚಪ್ಪಾಜಿ ಸ್ಥಳಕ್ಕೆ ಭೇಟಿ ನೀಡಿ

ಕರಡಿ ದಾಳಿ  ➤ ಓರ್ವ ಮೃತ್ಯು                 Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಢಿಕ್ಕಿ   ➤ ಯುವಕ ಮೃತ್ಯು                                

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ಪಾದಚಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನ ಗೋಪಾಲಗೌಡ ಜಂಕ್ಷನ್ ಸಂಭವಿಸಿದೆ. ಮೃತಪಟ್ಟ ಯುವಕನನ್ನು ರಾಜಾಜಿನಗರ ಸಮೀಪದ ಪ್ರಕಾಶ್ ನಗರದ ನಿವಾಸಿ ಅಲೆಕ್ಸ್ ತಂಬಿರಾಜ್ ಎಂದು ಗುರುತಿಸಲಾಗಿದೆ. ಈತ ಕಾರ್ಖಾನೆಯೊಂದರಲ್ಲಿ ಸಿಎನ್ ಸಿ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಘಟನೆಯಲ್ಲಿ ಅಲೆಕ್ಸ್ ಅವರ ಸ್ನೇಹಿತನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಿಸ್ ಮಸ್ ಹಿನ್ನೆಲೆ ಪ್ರಾರ್ಥನೆ

ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಢಿಕ್ಕಿ   ➤ ಯುವಕ ಮೃತ್ಯು                                 Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಮತ್ತು ಕಾರಿನ ನಡುವೆ ಅಪಘಾತ  ➤ ಓರ್ವ ಮೃತ್ಯು                               

(ನ್ಯೂಸ್ ಕಡಬ) newskadaba.com ಕುಣಿಗಲ್, ಡಿ. 26. ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಣಿಗಲ್ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಂಗಳೂರಿನ ಶಿವಪುರದ ಸುರೇಶ್ ಎಂದು ಗುರುತಿಸಲಾಗಿದೆ. ಬೋನಹಳ್ಳಗೆ ಬೈಕ್ ನಲ್ಲಿ ತೆರಳುವ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.    

ಬೈಕ್ ಮತ್ತು ಕಾರಿನ ನಡುವೆ ಅಪಘಾತ  ➤ ಓರ್ವ ಮೃತ್ಯು                                Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top