death news

ಧಾರವಾಡದಿಂದ ಬಂದ ರೈಲಿನಲ್ಲಿ 3 ವರ್ಷದ ಬಾಲಕಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಬೆಳಗಾವಿ, ಮಾ. 17. ಧಾರವಾಡದಿಂದ ಬೆಳಗಾವಿಗೆ ಬಂದ ಪ್ಯಾಸೆಂಜರ್ ರೈಲಿನ ಸೀಟಿನ ಕೆಳಗಡೆ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಮೂಲಗಳ ಪ್ರಕಾರ, ಮೈಸೂರು-ಧಾರವಾಡ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07357) ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ರೈಲು ನಿಲ್ದಾಣವನ್ನು ತಲುಪಿತ್ತು. ಎಸ್ 3 ಕೋಚ್ ನ ಸೀಟ್ ನಂ. 20ರ ಕೆಳಗೆ ಸಂಜೆ 4 ಗಂಟೆ ಸುಮಾರಿಗೆ ರೈಲ್ವೇ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾಗ ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫ್ರಾಕ್ ಧರಿಸಿದ್ದ […]

ಧಾರವಾಡದಿಂದ ಬಂದ ರೈಲಿನಲ್ಲಿ 3 ವರ್ಷದ ಬಾಲಕಿಯ ಶವ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆ ಕುಸಿದುಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 15. ಕೂಲಿ ಕೆಲಸಕ್ಕೆಂದು ತೆರಳಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಮೃತ ಮಹಿಳೆಯನ್ನು ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ ಎಂದು ಗುರುತಿಸಲಾಗಿದೆ‌. ಇವರು ಮುಂಡಾಜೆ ಗ್ರಾಮದ ಸೋಮಂತ್ತಡ್ಕ ಗಣೇಶ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡರೆನ್ನಲಾಗಿದೆ. ಕೂಡಲೇ ಚಿಕಿತ್ಸೆಗಾಗಿ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ

ಬೆಳ್ತಂಗಡಿ: ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆ ಕುಸಿದುಬಿದ್ದು ಮೃತ್ಯು Read More »

ಕರಾವಳಿ

ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ➤ ದಂಪತಿ ಮೃತ್ಯು

(ನ್ಯೂಸ್ ಕಡಬ) newskadaba.com ಹಾವೇರಿ, ಡಿ. 28. ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಹಾವೇರಿಯ ಹಾನಗಲ್ ತಾಲೂಕಿನ ಬೆಳಗಲಪೇಟೆ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ಕಾಸರಗೋಡು ತಳಂಗರೆಯ ನಿವಾಸಿಗಳಾದ ಮುಹಮ್ಮದ್ ಹಾಗೂ ಪತ್ನಿ ಆಯಿಷಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತರ ಪುತ್ರ ಝಿಯಾದ್, ಸೊಸೆ ಹಾಗೂ ಮೊಮ್ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿ‌ನ ಮಾಹಿತಿ ನಿರೀಕ್ಷಿಸಲಾಗಿದೆ.

ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ➤ ದಂಪತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ. 27. ಮೀನು ಹಿಡಿಯಲೆಂದು ಹೋಗಿ ನೇತ್ರಾವತಿ ನದಿಯಲ್ಲಿ ಡಿ. 26ರಂದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹವು ಇಂದು ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಮೃತರನ್ನು ಮೊಗ್ರು ದಂಡುಗ ನಿವಾಸಿ ಜನಾರ್ಧನ ಎಂದು ಗುರುತಿಸಲಾಗಿದೆ. ಜನಾರ್ಧನ ಹಾಗೂ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ಸಂದರ್ಭ ಜನಾರ್ಧನ ರವರು ನೀರುಪಾಲಾಗಿದ್ದರು. ಆದರೆ ಜೊತೆಗಿದ್ದ ಮಹೇಶ್ ವಿಷಯ ಯಾರಿಗೂ ತಿಳಿಸದೇ ತನ್ನ ಪಾಡಿಗೆ ವಾಪಸ್ ಬಂದಿದ್ದರು.

ನೆಲ್ಯಾಡಿ: ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಸ್ಕಾರ್ಪಿಯೋ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಡಿ. 26. ಸ್ಕಾರ್ಪಿಯೋ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ಸಮೀಪದ ಕಳಾರದಲ್ಲಿ ನಡೆದಿದೆ. ಮೃತಪಟ್ಟವರನ್ನು ಕಳಾರ ನಿವಾಸಿ ಉಮ್ಮರ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

ಕಡಬ: ಸ್ಕಾರ್ಪಿಯೋ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ
Death, deadbody, Waterfall

ಪಾದಚಾರಿಗೆ ಜೀಪ್ ಢಿಕ್ಕಿ ➤ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 09. ಜೀಪೊಂದು ಢಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಂತೆಕಟ್ಟೆ ಸಮೀಪದ ಎಲ್‌ವಿಟಿ ಆಟೋ ನಿಲ್ದಾಣದ ಬಳಿ ನಡೆದಿದೆ. ಮೃತರನ್ನ ರಾಮಚಂದ್ರ ಎಂದು ಗುರುತಿಸಲಾಗಿದೆ. ಇವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಜೀಪೊಂದು ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಜೀಪು ಚಾಲಕನು ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಕುರಿತು ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಜೀಪ್ ಢಿಕ್ಕಿ ➤ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ತೆಂಗಿನ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 08. ತೆಂಗಿನಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಅರಂತೋಡಿನಿಂದ ವರದಿಯಾಗಿದೆ.   ಮೃತರನ್ನು ಸುಳ್ಯದ ಅರಂತೋಡು ಬಾಲಣ್ಣರವರ ಪತ್ನಿ ಕಮಲ ಎಂದು ಗುರುತಿಸಲಾಗಿದೆ. ಇವರು ಉಳುವಾರು ಮೇದಪ್ಪ ಗೌಡ ಎಂಬವರ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ವೇಳೆ ಒಣಗಿದ ತೆಂಗಿನ ಮರವೊಂದು ಇವರ ಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡಿದ್ದ ಇವರನ್ನು ಕೂಡಲೇ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು

ಸುಳ್ಯ: ತೆಂಗಿನ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ಖ್ಯಾತಿಯ ನಟ ಗುರುಮೂರ್ತಿ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ . 19,: ತೀವ್ರ ಹೃದಯಾಘಾತದಿಂದ ಹಿರಿಯ ನಟ ಗುರುಮೂರ್ತಿ(70) ಕಳೆದ ರಾತ್ರಿ ನಗರದ ಕನಕಪುರ ರಸ್ತೆ ಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೊಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಿರಿಯ ಪುತ್ರ ಯೂರೋಪ್ ಪ್ರವಾಸದಲ್ಲಿರುವುದರಿಂದ ವಾಪಸ್ ಬಂದ ನಂತರ ಅಂತ್ಯಕ್ರಿಯೆ

‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ಖ್ಯಾತಿಯ ನಟ ಗುರುಮೂರ್ತಿ ನಿಧನ Read More »

ಕರ್ನಾಟಕ
Scroll to Top