dakshina kannada

ಆಯುಷ್ ಆಸ್ಪತ್ರೆ: ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಅ.23. ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಮಂಗಳೂರಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಮೂಲವ್ಯಾಧಿ, Piles, Fistula and Fissure ಇನ್ನಿತರ ಗುದಗತ ರೋಗಗಳಿಂದ ಬಳಲುತ್ತಿರುವಂತಹ ರೋಗಿಗಳ ಉಪಯೋಗಕ್ಕಾಗಿ ಆಯುರ್ವೇದದ ಯಶಸ್ವಿ ಶಸ್ತ್ರಚಿಕಿತ್ಸಾ ವಿಧಾನವಾದ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನವನ್ನು ಜಿಲ್ಲೆಯ ಹೆಸರಾಂತ ಆಯುರ್ವೇದ ಶಸ್ತ್ರಚಿಕಿತ್ಸಕ ಡಾ.ರವಿಶಂಕರ್ ಪೆರುವಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಬಡರೋಗಿಗಳಿಗೆ ಆಯುರ್ವೇದ ಚಿಕಿತ್ಸೆಗಳ ಉಪಯೋಗವನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು […]

ಆಯುಷ್ ಆಸ್ಪತ್ರೆ: ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ ಉದ್ಘಾಟನೆ Read More »

ಕರಾವಳಿ

ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ- ಜಿ.ಪಂ ಸಿಇಓ ಡಾ. ಆನಂದ್ ಕೆ

(ನ್ಯೂಸ್ ಕಡಬ) newskadaba.com ಅ.23.  ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದಿಂದ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪ ಅನಾಹುತಗಳನ್ನು ಗುರುತಿಸಿ ಅವುಗಳ ಅಪಾಯ ತಗ್ಗಿಸಲು ಅಗತ್ಯ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಿಟಿಗೇಶನ್ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ ಕಡಲತೀರದ ನಿರ್ವಹಣಾ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ- ಜಿ.ಪಂ ಸಿಇಓ ಡಾ. ಆನಂದ್ ಕೆ Read More »

ಕರಾವಳಿ
Crime

ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ..! ಪೊಲೀಸರಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.com ಅ. 23. ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾದ ಕುರಿತು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಎಂಬಲ್ಲಿಂದ ವರದಿಯಾಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕೆಲಸ ಮಾಡುವವರು ನೋಡಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಸಬ್ ಇನ್ಸ್‌ಪೆಕ್ಟರ್ ಮುರಳೀಧರ್ ನಾಯ್ಕ್ ಸೇರಿದಂತೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತಿಸಲು ಅಸಾಧ್ಯವಾಗಿದೆ. ಫೋರೆನಿಕ್ಸ್ ಲ್ಯಾಬ್ ಅಧಿಕಾರಿಗಳ

ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ..! ಪೊಲೀಸರಿಂದ ಪರಿಶೀಲನೆ Read More »

ಕ್ರೈಮ್ ನ್ಯೂಸ್

ಮಲ್ಪೆಯಲ್ಲಿ ಬರೋಬ್ಬರಿ 250 ಕೆಜಿ ತೊರಕೆ ಮೀನು ಬಲೆಗೆ..!

(ನ್ಯೂಸ್ ಕಡಬ) newskadaba.com ಅ. 22. ಅದೃಷ್ಟ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ ಅದರಲ್ಲೂ ಮೀನುಗಾರರಿಗೆ ಅದೃಷ್ಟ ಅನ್ನೋದು ಬಹಳ ಮುಖ್ಯವಾಗುತ್ತದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆಂದು ತಿಂಗಳುಗಟ್ಟಲೆ ಹೋಗಿ ಖಾಲಿ ಕೈಯಲ್ಲೂ ವಾಪಾಸ್ ಬರೋದಿದೆ. ಆದರೆ ಮಲ್ಪೆ ಮೀನುಗಾರರು ಭರ್ಜರಿ ತೊರಕೆ ಮೀನೊಂದನ್ನು ಭೇಟೆಯಾಡಿದ್ದಾರೆ. ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆ.ಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು,

ಮಲ್ಪೆಯಲ್ಲಿ ಬರೋಬ್ಬರಿ 250 ಕೆಜಿ ತೊರಕೆ ಮೀನು ಬಲೆಗೆ..! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕನ್ನಡ ರಾಜ್ಯೋತ್ಸವ: ಎಲ್ಲಾ ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ. 21. ಜಿಲ್ಲಾಡಳಿತ ವತಿಯಿಂದ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್.ಜಿ ಸೂಚಿಸಿದ್ದಾರೆ. ಅವರು ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೆಂಬರ್ 1ರಂದು ನೆಹರೂ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಎಲ್ಲ ಇಲಾಖೆಗಳು

ಕನ್ನಡ ರಾಜ್ಯೋತ್ಸವ: ಎಲ್ಲಾ ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ಜಾಗೃತಿ ಮೂಡಿಸಲು ಉಪವಿಭಾಗಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ. 15. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯು ಬಡವರಿಗೆ ಉಪಯೋಗಕಾರಿಯಾಗಿದ್ದು ಈ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು, ಜನರಿಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ತಾಲೂಕು ಸಹಾಯಕ ಆಯುಕ್ತ ಹರ್ಷವರ್ಧನ್ ತಿಳಿಸಿದ್ದಾರೆ. ಅವರು ಸೋಮವಾರ ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವು ಹುಟ್ಟಿನಿಂದ ಮಕ್ಕಳಲ್ಲಿ ಕಂಡು ಬರುವ ನ್ಯೂನತೆ ಪತ್ತೆ ಹಚ್ಚಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ಜಾಗೃತಿ ಮೂಡಿಸಲು ಉಪವಿಭಾಗಾಧಿಕಾರಿ ಸೂಚನೆ Read More »

ಕರಾವಳಿ
Crime

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ದೂರು ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಅ. 14. ಮಹಿಳೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ನಿವಾಸಿ ಮಹಿಳೆಯೋರ್ವರು ಶನಿವಾರದಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಮಹಿಳೆಯ ಬಾವ ಶಂಕರ ಅವರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹಚ್ಚಿರುವ

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಡಿ.ಕೆ.ಎಸ್.ಸಿ ಪಾಣೆಮಂಗಳೂರು: ನೂತನ ಶಾಖೆಯ ಶುಭಾರಂಭ

(ನ್ಯೂಸ್ ಕಡಬ) newskadaba.com ಅ. 12. ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿ ಮಂಗಳೂರು ಇದರ ಅಧೀನದಲ್ಲಿ ಪಾಣೆಮಂಗಳೂರು ಶಾಖೆಯು ಎಸ್.ಎಸ್.ಅಡಿಟೋರಿಯಂ ಆಲಡ್ಕ ಇದರ ಸಭಾಂಗಣದಲ್ಲಿ ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಹು ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಳ್ ರವರ ಘನ ಅಧ್ಯಕ್ಷತೆಯಲ್ಲಿ ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಮುಹಮ್ಮದ್ ಹಾಶಿಂ ಕಿರಾಅತ್ ಪಠಿಸಿದರು. ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಮುಹಮ್ಮದ್ ಅಲ್ ಖಾಸಿಮಿ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದ್ರಿಯಾ ಜುಮ್ಮಾ ಮಸೀದಿ ಆಲಡ್ಕ ಇದರ

ಡಿ.ಕೆ.ಎಸ್.ಸಿ ಪಾಣೆಮಂಗಳೂರು: ನೂತನ ಶಾಖೆಯ ಶುಭಾರಂಭ Read More »

ಕರಾವಳಿ

ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಬಸ್ – ಚಾಲಕ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ಅ. 12. ಬೆಂಗಳೂರು ಮೂಲದ ಖಾಸಗಿ ಸ್ಲೀಪರ್‌ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರು ಬೆಂಗಳೂರು ಮೂಲದವರೆಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಷ್ಟೇ. ಈ ಖಾಸಗಿ ಸ್ಲೀಪರ್‌ ಬಸ್‌ ಗುರುವಾರದಂದು ಬೆಂಗಳೂರಿನಿಂದ ಬಂದು ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್‌-ಅಪ್‌

ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಬಸ್ – ಚಾಲಕ ಸ್ಥಳದಲ್ಲೇ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿ – ದೂರು ದಾಖಲು

(ನ್ಯೂಸ್ ಕಡಬ) newskadaba.com ಅ. 11. ಮನೆಮಂದಿ ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವನನ್ನು ವಾಮಂಜೂರು ಸೈಂಟ್ ರೈಮಂಡ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮೇಗಿನಪೇಟೆ ನಿವಾಸಿ ಮುಹಮ್ಮದ್ ಯಾಸೀನ್ ಅಫ್ನಾನ್ (16) ಎಂದು ಗುರುತಿಸಲಾಗಿದೆ. ನಿರಂತರವಾಗಿ ಮೊಬೈಲ್ ನೋಡುವ ಚಟ ಹೊಂದಿದ್ದ ಈತ, ಸೆ.25ರಂದು ಮನೆಯಲ್ಲಿದ್ದ ವೇಳೆ ಅವನ ಬಳಿಯಿಂದ ಮೊಬೈಲ್‌ ನ್ನು ಮನೆಯವರು ಕಿತ್ತುಕೊಂಡಿದ್ದರು. ಬಳಿಕ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ

ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿ – ದೂರು ದಾಖಲು Read More »

ಕರಾವಳಿ
Scroll to Top