Cyber crime

ನಕಲಿ ನೋಟಿಸ್ ನಂಬಿ ಎಪಿಕೆ ಆಪ್ ಡೌನ್ ಲೋಡ್ ಕಾರ್ಕಳದ ವ್ಯಕ್ತಿಯ 6.83 ಲಕ್ಷ ಸೈಬರ್ ಖದೀಮರ ಪಾಲು!

(ನ್ಯೂಸ್ ಕಡಬ) newskadaba.com ಜು. 15. ಮೊಬೈಲ್‌ ಗೆ ಬಂದ ಸಂಚಾರ ನಿಯಮ ಉಲ್ಲಂಘನೆಯ ನಕಲಿ ನೋಟಿಸ್ ಹಾಗೂ ‘mParivahan.apk’ ಎಂಬ ಲಿಂಕ್ ನಂಬಿ ಆಪ್ ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹6,83,599 ಹಣ ಕಳೆದುಕೊಂಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರದಿಯ ಪ್ರಕಾರ, ಅಜೆಕಾರು ನಿವಾಸಿ ರತ್ನಾಕರ ಅಮೀನ್ ಎಂಬವರ ವಾಟ್ಸಾಪ್‌’ಗೆ ಜುಲೈ 5 ರಂದು ‘ಪರಿವಾಹನ್’ ಹೆಸರಿನ ಖಾತೆಯಿಂದ ಸಂದೇಶ ಬಂದಿತ್ತು. ಅದರಲ್ಲಿ […]

ನಕಲಿ ನೋಟಿಸ್ ನಂಬಿ ಎಪಿಕೆ ಆಪ್ ಡೌನ್ ಲೋಡ್ ಕಾರ್ಕಳದ ವ್ಯಕ್ತಿಯ 6.83 ಲಕ್ಷ ಸೈಬರ್ ಖದೀಮರ ಪಾಲು! Read More »

ಕರಾವಳಿ, ಕ್ರೈಮ್ ನ್ಯೂಸ್

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 68.3 ಲಕ್ಷ ರೂ. ವಂಚನೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಜೂ. 27. ಆನ್‌ ಲೈನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭದ ಭರವಸೆ ನೀಡಿ 68.3 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ದೂರಿನ ಪ್ರಕಾರ, ಅಪರಿಚಿತರು ಅಜಿತ್ ಕುಮಾರ್ ಎಂಬವರನ್ನು ‘372 SCBI ಇನ್ವೆಸ್ಟಿಂಗ್ ಲ್ಯಾಬ್’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಿ ಬಳಿಕ, ಗುಂಪಿನ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವ ಸಂದೇಶಗಳನ್ನು ಕಳುಹಿಸಿದ್ದಾರೆ.

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 68.3 ಲಕ್ಷ ರೂ. ವಂಚನೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಸಾಮಾಜಿಕ ಮಾಧ್ಯಮದ ಪ್ರಭಾವಿ ಯುವತಿಯರೇ ಸೈಬರ್ ವಂಚಕರ ಟಾರ್ಗೆಟ್!

(ನ್ಯೂಸ್ ಕಡಬ) newskadaba.com ಡಿ. 24: ಬೆಂಗಳೂರು: ದಿನಗಳು ಕಳೆದಂತೆಲ್ಲಾ ಸೈಬರ್ ವಂಚಕರು ಹೊಸ ಹೊಸ ವೇಷ ತೊಟ್ಟು ವಂಚಿಸುವ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟ್ರೆಂಡ್‌ನಲ್ಲಿ ಲಾಭದಾಯಕ ಸಹಯೋಗದ ಅವಕಾಶ ನೀಡುವ ಬ್ರ್ಯಾಂಡ್‌ಗಳು ಅಥವಾ ಏಜೆನ್ಸಿಗಳ ಸೋಗಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಅದರಲ್ಲೂ ಮಹಿಳಾ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಮುಂದಾಗಿದ್ದಾರೆ. ವೃತ್ತಿಪರ ಪಾಲುದಾರಿಕೆಯ ಹೆಸರಿನಲ್ಲಿ ಈ ವಂಚಕರು ಮಹಿಳೆಯರ ವೈಯಕ್ತಿಕ ಮಾಹಿತಿ, ಫೊಟೋಗಳು ಮತ್ತು ವಿಡಿಯೋಗಳನ್ನು ಕೇಳುತ್ತಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು, ಅವುಗಳನ್ನು

ಸಾಮಾಜಿಕ ಮಾಧ್ಯಮದ ಪ್ರಭಾವಿ ಯುವತಿಯರೇ ಸೈಬರ್ ವಂಚಕರ ಟಾರ್ಗೆಟ್! Read More »

ಬ್ರೇಕಿಂಗ್ ನ್ಯೂಸ್

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ

(ನ್ಯೂಸ್ ಕಡಬ) newskadaba.com ಅ.16. ಕೆಲವು ದಿನಗಳ ಹಿಂದೆ ಡೀಪ್ ಫೇಕ್ ವಿಡಿಯೋ ಮೂಲಕ ವೈರಲ್ ಆಗಿ ಸಂಚಲನ ಮೂಡಿಸಿದ್ದ, ಸದ್ಯ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಕುರಿತು ನಟಿ ರಶ್ಮಿಕಾ, ‘ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ Read More »

ಲೈಫ್‍ಸ್ಟೈಲ್, ಸಿನಿಮಾ

ಆನ್ ಲೈನ್ ವಂಚನೆ- ಇಬ್ಬರ ಬಂಧನ; 13.95 ಲಕ್ಷ ರೂ. ನಗದು ವಶಕ್ಕೆ

 (ನ್ಯೂಸ್ ಕಡಬ) newskadaba.com ಉಡುಪಿ, ಆ. 26. ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ಆನ್ ಲೈನ್ ಮೂಲಕ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತರನ್ನು ಗುಜರಾತ್ ರಾಜ್ಯದ ಸೂರತ್ ನ ನವಾದಿಯಾ ಮುಖೇಶ್ ಭಾಯಿ ಗಣೇಶ್‌ಬಾಯಿ(44) ಹಾಗೂ ಗುಜರಾತ್ ರಾಜ್ಯದ ರಾಜ್‌ಕೋಟ್ ಜಿಲ್ಲೆಯ ಧರಮ್ಮಿತ್ ಕಮಲೇಶ್ ಚೌಹಾನ್(28) ಎಂದು ಗುರುತಿಸಲಾಗಿದೆ. ಬಂಧಿತರಿಂದ 5 ಮೊಬೈಲ್  ಗಳು ಹಾಗೂ 13,95,000ರೂ.

ಆನ್ ಲೈನ್ ವಂಚನೆ- ಇಬ್ಬರ ಬಂಧನ; 13.95 ಲಕ್ಷ ರೂ. ನಗದು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸೈಬರ್ ಕ್ರೈಂ- ಹೂಡಿಕೆ ಹೆಸರಿನಲ್ಲಿ ವಂಚನೆ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com, ಮಂಗಳೂರು, ನ. 25. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಿದ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡಿನ ಕಣ್ಣನ್‌ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಇವರು ಅ. 03ರಂದು ಫೇಸ್‌ಬುಕ್‌ ಖಾತೆಗೆ ಬಂದಿದ್ದ ಲಿಂಕ್‌ ತೆರೆದು ನೋಡಿದಾಗ ಅದರಲ್ಲಿದ್ದ ಮಾಹಿತಿಯನ್ನು ನಂಬಿ ಟ್ರೇಡಿಂಗ್‌ ಖಾತೆ ತೆರೆದಿದ್ದರು. ಇದೀಗ ಅವರ ಖಾತೆಯಿಂದ ಮೂರು ಬಾರಿ ಹಣ ವರ್ಗಾಯಿಸಿಕೊಳ್ಳಲಾಗಿದ್ದು, ಆದರೆ ಯಾವುದೇ

ಸೈಬರ್ ಕ್ರೈಂ- ಹೂಡಿಕೆ ಹೆಸರಿನಲ್ಲಿ ವಂಚನೆ – ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ: ಉದ್ಯೋಗದ ಆಮಿಷ- 13 ಲಕ್ಷ ರೂ.ವಂಚನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 13. ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೋರ್ವ 13 ಲಕ್ಷ ರೂ. ವಂಚಿಸಿದ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ‘ದೂರುದಾರ ವ್ಯಕ್ತಿಗೆ ಜುಲೈ 15ರಂದು ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ, ವಿಮಾನಯಾನ ಸಂಸ್ಥೆಯಿಂದ ಕರೆ ಮಾಡಿರುವುದಾಗಿ ಹೇಳಿ, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿ ಇದ್ದು, ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ಇರಲಿವೆ ಎಂದು ತಿಳಿಸಿದ್ದರು. ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿದ ಅಪರಿಚಿತ, ಹಂತ ಹಂತವಾಗಿ

ಬೆಳ್ಳಾರೆ: ಉದ್ಯೋಗದ ಆಮಿಷ- 13 ಲಕ್ಷ ರೂ.ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸೈಬರ್ ಕ್ರೈಂ- ಪಾರ್ಟ್‌ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಪಾರ್ಟ್‌ಟೈಮ್ ಜಾಬ್ ಇದೆ ಎಂದು ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ ಬಳಿಕ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಇನ್‌ಸ್ಟಾಗ್ರಾಂ ಖಾತೆಗೆ ಸೆ. 09ರಂದು ಅಪರಿಚಿತ ಹೆಸರಿನಲ್ಲಿ ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್‌ ನ್ನು ಒತ್ತಿದಾಗ ಪ್ರತಿ ದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ

ಸೈಬರ್ ಕ್ರೈಂ- ಪಾರ್ಟ್‌ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವವರೇ ಎಚ್ಚರ – ಸಾಲ ಮರುಪಾವತಿಸಿದರೂ ಯುವಕನ ಫೋಟೋ ಅಶ್ಲೀಲಗೊಳಿಸಿ ವೈರಲ್- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 28. ಲೋನ್ ಆ್ಯಪ್ ಮೂಲಕ 4,200 ರೂ. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾದರರ ಪ್ರಕಾರ, ತಾನು ಲೋನ್ ಆ್ಯಪ್ ಮೂಲಕ 3,500 ರೂ. ಸಾಲಕ್ಕೆ ಅರ್ಜಿ ಹಾಕಿದ ಬಳಿಕ ತನ್ನ ಬ್ಯಾಂಕ್ ಖಾತೆಗೆ 2,800 ರೂ. ಜಮೆಯಾಗಿದೆ. ಈ ಸಾಲವನ್ನು ಜು. 26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದುದ್ದರಿಂದ ಜು.19ರಂದು 1,400 ರೂ. ಮರುಪಾವತಿ ಮಾಡಲಾಗಿದೆ.

ಲೋನ್ ಆ್ಯಪ್ ಮೂಲಕ ಸಾಲ ಪಡೆಯುವವರೇ ಎಚ್ಚರ – ಸಾಲ ಮರುಪಾವತಿಸಿದರೂ ಯುವಕನ ಫೋಟೋ ಅಶ್ಲೀಲಗೊಳಿಸಿ ವೈರಲ್- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top