crime

ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24.  ಲೇಡಿಸ್‌ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದು, ಮೃತ ಯುವತಿಯನ್ನು ಬಿಹಾರ ಮೂಲದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದೆ. ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಸುಮಾರು 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ […]

ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24. ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಆಯುಷ್ ಅಯ್ಯಪ್ಪ(21) ಎಂದು ಗುರುತಿಸಲಾಗಿದೆ. ಈತ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಅಪರಿಚಿತ ಕಾರು ಢಿಕ್ಕಿ.!   ಯುವಕನೋರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಡುಪಿ, ಜು.24. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ.  ಮೃತ ಯುವತಿಯನ್ನು ನಯನಾ (17) ಎಂದು ಗುರುತಿಸಲಾಗಿದೆ. ನಯನಾ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ ನೊಂದು ಫ್ಯಾನ್‌ ಗೆ ಚೂಡಿದಾರ್ ಕಟ್ಟಿಕೊಂಡು ಮನೆಯ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.  

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ  ಪೋಕ್ಸೊ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ರಾಮನಗರ, ಜು.23. 4 ವರ್ಷದ ಹೆಣ್ಣು ಮಗುವನ್ನು ಸಂಬಂಧಿಯೇ ಅಪಹರಿಸಿ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಗುವಿನ ಶವವು ತಿಪ್ಪಗೊಂಡನಹಳ್ಳಿ ಬಳಿ ರಾತ್ರಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ, ಆರೋಪಿ ಬೆಂಗಳೂರಿನ ಗೌರಿಪಾಳ್ಯದ ಇಮ್ರಾನ್ ಖಾನ್‌ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಸಂತ್ರಸ್ತ ಮಗುವಿನ ಕುಟುಂಬದ ಸಂಬಂಧಿಯಾದ ಆರೋಪಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಜುಲೈ 20ಕ್ಕೆ ಬಂದಿದ್ದ

4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ  ಪೋಕ್ಸೊ ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗೀಸರ್‌ ಗ್ಯಾಸ್‌ ಸೋರಿಕೆ ತಾಯಿ-ಮಗ ದಾರುಣ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.23. ಬಾತ್‌ರೂಮ್‌ ಗೆ ಹೋಗಿದ್ದಾಗ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಶೋಭಾ ಮತ್ತು 16 ವರ್ಷದ ದಿಲೀಪ್ ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ತೆರಳಿದ್ದ ಬಾಲಕ ಮೊದಲು ವಿಷಕಾರಿ ಅನಿಲವನ್ನು ಸೇವಿಸಿ ಕುಸಿದು ಬಿದ್ದಿದ್ದಾನೆ. ಎಷ್ಟೋ ಹೊತ್ತಾದರೂ ಹೊರಗೆ ಬಾರದೇ ಇದ್ದುದರಿಂದ ತಾಯಿ ನೋಡಲು ಹೋಗಿದ್ದಾರೆ. ನಂತರ ಆಕೆಯೂ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗಾಳಿಯಾಡಲು ಸ್ಥಳಾವಕಾಶವಿಲ್ಲದ ಕಾರಣ

ಗೀಸರ್‌ ಗ್ಯಾಸ್‌ ಸೋರಿಕೆ ತಾಯಿ-ಮಗ ದಾರುಣ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಓರ್ವ ಯೋಧನಿಗೆ ಗಾಯ

(ನ್ಯೂಸ್ ಕಡಬ)newskadaba.com ಜಮ್ಮು-ಕಾಶ್ಮೀರ, ಜು.23. ಮತ್ತೆ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 24 ಗಂಟೆಗಳಲ್ಲಿ ನಡೆದ 2ನೇ ಉಗ್ರರ ದಾಳಿ ಇದಾಗಿದ್ದು, ರಜೌರಿ ಸಮೀಪದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಿದ್ದ ಉಗ್ರರು ದಾಳಿ ನಡೆಸಿದ್ದಾರೆ. ಇನ್ನು ಭಾರತೀಯ ಸೇನೆಯು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆ, ಬಟ್ಟಲ್ ಸೆಕ್ಟರ್‌ನಲ್ಲಿ ಉಗ್ರರು ನುಸುಳಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಓರ್ವ ಯೋಧನಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಶಿರೂರು ಗುಡ್ಡ ಕುಸಿತ ಪ್ರಕರಣ..!    ಓರ್ವ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಶಿರೂರು, ಜು.23. ಅಂಕೋಲಾ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಮುಂಜಾನೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ‌ ಮೃತದೇಹ ಪತ್ತೆಯಾಗಿದ್ದು ಹೀಗಾಗಿ ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾದಂತಾಗಿದೆ ಎಂದು ವರದಿ ತಿಳಿಸಿದೆ. ಶಿರೂರು ಪ್ರಕರಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ 5 ಮಂದಿ, ಒಬ್ಬ ಮಹಿಳೆ ಹಾಗೂ ಮೂವರು ಟ್ಯಾಂಕರ್ ಚಾಲಕರು ಹಾಗೂ ಟಿಂಬರ್ ಲಾರಿ ಚಾಲಕ ನಾಪತ್ತೆ ಆಗಿರುವ ಬಗ್ಗೆ ದೂರುಗಳು ಬಂದಿತ್ತು ಎನ್ನಲಾಗಿದೆ. ಗಂಗಾವಳಿ ನದಿ

ಶಿರೂರು ಗುಡ್ಡ ಕುಸಿತ ಪ್ರಕರಣ..!    ಓರ್ವ ಮಹಿಳೆಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗ್ರೈಂಡರ್ ಗೆ ಶಾಲ್ ಸಿಲುಕಿ ಗೃಹಿಣಿ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.23. ಗ್ರೈಂಡರ್ ಗೆ ಶಾಲ್ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಮೃತರನ್ನು ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( 52) ಗುರುತಿಸಲಾಗಿದೆ. ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪತಿ ಇಸ್ಮಾಯಿಲ್ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗ್ರೈಂಡರ್ ಗೆ ಶಾಲ್ ಸಿಲುಕಿ ಗೃಹಿಣಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್  ವಿದ್ಯಾರ್ಥಿಗಳು ಗಂಭೀರ !

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.22. ಶಿವಮೊಗ್ಗ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಘಟನೆ ವರದಿಯಾಗಿದೆ. ಖಾಸಗಿ ಬಸ್ಸು ಶಿವಮೊಗ್ಗದಿಂದ ಬೈಂದೂರಿಗೆ ಬರುತ್ತಿತ್ತು. ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಚರಂಡಿಗೆ ಇಳಿದು ಓರೆಯಾಗಿ ಮರಕ್ಕೆ ತಾಗಿ ನಿಂತಿದೆ. ಬಸ್ಸಿನಲ್ಲಿ ಕೊಲ್ಲೂರು ಮೂಕಾಂಬಿಕ ಹೈಸ್ಕೂಲ್ ನ 6 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 11 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್  ವಿದ್ಯಾರ್ಥಿಗಳು ಗಂಭೀರ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಬೈಕ್ ನಿಂದ ರಸ್ತೆಗೆ ಬಿದ್ದು ಯುವಕ ಮೃತ್ಯು ಓರ್ವ ಗಂಭೀರ….!

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.22. ಬೈಕ್ ನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಯುವಕನೋರ್ವ ಮೃತಪಟ್ಟಿದ್ದು, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ವಿಘ್ನೇಶ್ (26) ಎಂದು ಗುರುತಿಸಲಾಗಿದೆ. ಗಾಯಗೊಂಡಾತನನ್ನು ಶ್ರೀ ನಿಧಿ (25) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 1.30 ರ ಸುಮಾರಿಗೆ ವಿಘ್ನೇಶ್ ಮತ್ತು ಶ್ರೀ ನಿಧಿ ರೆಸ್ಟೋರೆಂಟ್‌ ನಲ್ಲಿ ಊಟ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ನಿಯಂತ್ರಣ ತಪ್ಪಿ ಬೈಕ್ ನಿಂದ ರಸ್ತೆಗೆ ಬಿದ್ದು ಯುವಕ ಮೃತ್ಯು ಓರ್ವ ಗಂಭೀರ….! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top