ಶಾಲಾ ಪ್ರವೇಶ ಪರೀಕ್ಷೆಗೆ ಸಮ್ಮತಿ, ಮಕ್ಕಳ ಕಲಿಕಾ ಮೌಲ್ಯಮಾಪನಕ್ಕೆ ವಿರೋಧ ಶಿಕ್ಷಣ ವ್ಯವಸ್ಥೆಯ ಈ ದ್ವಂದ್ವ ನೀತಿ ಏಕೆ? ✍🏻 ಮೊಯ್ದಿನ್ ಕುಟ್ಟಿ
(ನ್ಯೂಸ್ ಕಡಬ) newskadaba.com ಜು. 25. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಒಂದು ಗಂಭೀರ ವಿರೋಧಾಭಾಸ ಕಾಣಿಸುತ್ತಿದೆ. ಒಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ನವೋದಯ, ಸೈನಿಕ್, ಮಿಲಿಟರಿ ಹಾಗೂ ವಿವಿಧ ವಸತಿ ಶಾಲೆಗಳು ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಈ ಪದ್ಧತಿಯನ್ನು ಸರ್ಕಾರಗಳು, ಅಧಿಕಾರಿಗಳು, ಶಿಕ್ಷಣ ತಜ್ಞರೆನ್ನುವವರು ಹಾಗೂ ಸಮಾಜದ ಬಹುಪಾಲು ಜನರು ಒಪ್ಪಿಕೊಂಡಿದ್ದಾರೆ ಆದರೆ ಮತ್ತೊಂದೆಡೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 5ನೇ ಅಥವಾ 7ನೇ ತರಗತಿಯ ವಿದ್ಯಾರ್ಥಿಗಳ […]

