chikkamagalur

ಕಾಫಿ ಬೆಲೆ ಹೆಚ್ಚಳ ; ದಾಖಲೆ ನಿರ್ಮಿಸಿದ ಬೆಲೆ

(ನ್ಯೂಸ್ ಕಡಬ) newskadaba.com ಅ.18, ಚಿಕ್ಕಮಗಳೂರು. ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್‌ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಇದರ ಲಾಭ ಕಾಫಿ ದಾಸ್ತಾನು ಇರಿಸಿಕೊಂಡಿದ್ದ ಕೆಲವೇ ಕೆಲವು ಬೆಳೆಗಾರರು ಮತ್ತು ವರ್ತಕರಿಗೆ ಮಾತ್ರ ಲಭ್ಯವಾಗಿದೆ. ಕಾಫಿಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ.  

ಕಾಫಿ ಬೆಲೆ ಹೆಚ್ಚಳ ; ದಾಖಲೆ ನಿರ್ಮಿಸಿದ ಬೆಲೆ Read More »

ಬ್ರೇಕಿಂಗ್ ನ್ಯೂಸ್

ಕಾರ್ಯಕರ್ತನೋರ್ವನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ..!!

(ನ್ಯೂಸ್ ಕಡಬ)newskadaba.com  ಚಿಕ್ಕಮಗಳೂರು, ಜ.15. ಕಾರ್ಯಕರ್ತನೊಬ್ಬನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ(17) ಮೃತ ಬಾಲಕಿ. ಕಾರ್ಯಕರ್ತ ಹಿತೇಶ್ (25) ಅಪ್ರಾಪ್ತ ಬಾಲಕಿ ದೀಪ್ತಿಯನ್ನ ಪ್ರೀತಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ದೀಪ್ತಿ ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿ ಆಹ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಅವಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ದೀಪ್ತಿ ಮೃತಪಟ್ಟಿದ್ದಾಳೆ.

ಕಾರ್ಯಕರ್ತನೋರ್ವನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top