‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬ್ಯುರೋಕ್ರಸಿಯ ಅಟ್ಟಹಾಸ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ – ಬಂಟ್ವಾಳ SDPI ನಾಯಕರ ಸಭೆಯಲ್ಲಿ ರಿಯಾಝ್ ಕಡಂಬು
(ನ್ಯೂಸ್ ಕಡಬ) newskadaba.com, ಸೆ.13 ಬಂಟ್ವಾಳ : ‘ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನಮ್ಮ ಸಂವಿಧಾನ ಮತ್ತು ಸಂವಿಧಾನ ಪ್ರತಿಪಾದಿಸಿದ ಮೌಲ್ಯ ಮತ್ತು ಕಾನೂನುಗಳೇ ಅಂತಿಮವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಘನತೆ, ಗೌರವದ ಮತ್ತು ಸ್ವಾಭಿಮಾನದ ಬದುಕನ್ನ ಸಂವಿಧಾನ ಪ್ರತಿಪಾದಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ವಾಕ್ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ನಾಗರಿಕನಿಗೂ ಖಾತ್ರಿಪಡಿಸಿದ ಸಂವಿಧಾನಕ್ಕೆ ವಿರುದ್ಧವಾಗಿ ಅನ್ಯಾಯವನ್ನು ಪ್ರಶ್ನಿಸಿದವರಿಗೆ ಇಲ್ಲಿನ ಅಧಿಕಾರಶಾಹಿಯು ಅನ್ಯಾಯವಾಗಿ ಪ್ರಕರಣ ದಾಖಲಿಸುವ ಮೂಲಕ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಇದು […]

