budoli

ಮಾಣಿ: ಕೆಎಸ್ಸಾರ್ಟಿಸಿ ಬಸ್ – ಬುಲೆಟ್ ನಡುವೆ ಢಿಕ್ಕಿ ➤ ಬುಲೆಟ್ ಸವಾರ ಕಡಬ ನಿವಾಸಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಕೆಎಸ್ಸಾರ್ಟಿಸಿ ಬಸ್ ಹಾಗೂ ಬುಲ್ಲೆಟ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬುಲ್ಲೆಟ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗಾಯಗೊಂಡ ಬುಲ್ಲೆಟ್ ಸವಾರ‌ನನ್ನು ಕಡಬ ತಾಲೂಕಿನ ನೆಟ್ಟಣ ನಿವಾಸಿ ಸಂಜಿತ್ ಸದಾನಂದನ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಡಬ ಕಡೆಗೆ ತೆರಳುತ್ತಿದ್ದ ಬುಲೆಟ್ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಬುಡೋಳಿ ಸಮೀಪದ ಬೊಳ್ಳುಕಳ್ಳು ಎಂಬಲ್ಲಿ ಢಿಕ್ಕಿ ಸಂಭವಿಸಿದೆ. […]

ಮಾಣಿ: ಕೆಎಸ್ಸಾರ್ಟಿಸಿ ಬಸ್ – ಬುಲೆಟ್ ನಡುವೆ ಢಿಕ್ಕಿ ➤ ಬುಲೆಟ್ ಸವಾರ ಕಡಬ ನಿವಾಸಿ ಗಂಭೀರ Read More »

ಕರಾವಳಿ

ಬುಡೋಳಿ: ಆ್ಯಕ್ಟಿವಾ – ಲಾರಿ ಢಿಕ್ಕಿ ► ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ.07. ಮರಳು ಸಾಗಾಟದ ಲಾರಿ ಹಾಗೂ ಹೋಂಡಾ ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಗುರುವಾರದಂದು ನಡೆದಿದೆ. ಉಪ್ಪಿನಂಗಡಿ ಕಡೆಗೆ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಮಂಗಳೂರು ಕಡೆಗೆ ತೆರಳುತ್ತಿದ್ದ ಆ್ಯಕ್ಟಿವಾ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಆ್ಯಕ್ಟಿವಾ ಸವಾರ ಬೆಳ್ತಂಗಡಿ ನಿವಾಸಿ ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಮಾಣಿಯ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ

ಬುಡೋಳಿ: ಆ್ಯಕ್ಟಿವಾ – ಲಾರಿ ಢಿಕ್ಕಿ ► ಸವಾರ ಗಂಭೀರ Read More »

ಕರಾವಳಿ

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.01. ಬೈಕ್ ಮತ್ತು ಟಿವಿಎಸ್ ಜುಪಿಟರ್ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಉಪ್ಪಿನಂಗಡಿ ನಿವಾಸಿ ಮುಸ್ತಫಾ ಮತ್ತು ಜುಪಿಟರ್ ಸವಾರ ಗಡಿಯಾರ ನಿವಾಸಿ ಝುಬೈರ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ಬುಡೋಳಿ: ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಟ್ಯಾಂಕರ್ ► ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ.20. ಟ್ಯಾಂಕರೊಂದು ಆಟೊ ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ‌‌ ಸೋಮವಾರದಂದು‌ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ನಡೆದಿದೆ. ಗಾಯಾಳು ಆಟೋ ಚಾಲಕನನ್ನು ಬುಡೋಳಿ ನಿವಾಸಿ ಆದಂ ಎಂದು ಗುರುತಿಸಲಾಗಿದೆ. ಬುಡೋಳಿಯಿಂದ ಮಾಣಿ ಕಡೆಗೆ ತೆರಳಲು ತನ್ನ ಆಟೊದಲ್ಲಿ ಜನರನ್ನು ಹತ್ತಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಗಾಯಗೊಂಡಿದ್ದಾರೆ. ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕೆ

ಬುಡೋಳಿ: ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಟ್ಯಾಂಕರ್ ► ಚಾಲಕನಿಗೆ ಗಾಯ Read More »

ಕರಾವಳಿ

ಮಾಣಿ: ಆಟೋ ರಿಕ್ಷಾ ಪಲ್ಟಿ ► ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.04. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಉರುಳಿಬಿದ್ದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಬುಡೋಳಿ ಸಮೀಪದ ಬೊಳ್ಳುಕಲ್ಲು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಬುಡೋಳಿಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ರಿಕ್ಷಾದ ಮುಂಭಾಗದ ಚಕ್ರ ಕಳಚಿ ಬಿದ್ದ ಪರಿಣಾಮ ರಿಕ್ಷಾ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಣಿ: ಆಟೋ ರಿಕ್ಷಾ ಪಲ್ಟಿ ► ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕರಾವಳಿ

ಮಾಣಿ: ಖಾಸಗಿ ಬಸ್ ಪಲ್ಟಿ ► ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.26. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಖಾಸಗಿ ಬಸ್ಸೊಂದು ಪಟ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸುಗಮ ಸಂಸ್ಥೆಯ ಖಾಸಗಿ ಬಸ್ಸು ಬುಡೋಳಿ ಸಮೀಪ ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಮಾಣಿ: ಖಾಸಗಿ ಬಸ್ ಪಲ್ಟಿ ► ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ
Scroll to Top