Belthangadi

ಬೆಳ್ತಂಗಡಿ: ನೇತ್ರಾವತಿ ಶಿಖರದ ಬಳಿ ಕಾಡ್ಗಿಚ್ಚು-ಸಾವಿರಾರು ಎಕರೆ ಸಸ್ಯವರ್ಗ ನಾಶ

(ನ್ಯೂಸ್ ಕಡಬ) newskadaba.com ಮಾ. 12: ನೇತ್ರಾವತಿ ಶಿಖರದ ಕೆಳಗಿನ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಕಾಡ್ಗಿಚ್ಚು ಸಾವಿರಾರು ಎಕರೆಗಳನ್ನು ಆವರಿಸಿದ ಘಟನೆ ಸಂಭವಿಸಿದೆ. ದಿಡುಪೆಯ ಗೋಡೌನ್ ಬೆಟ್ಟದ ಬಳಿ ಆಕಸ್ಮಿಕವಾಗಿ ಪ್ರಾರಂಭವಾದ ಬೆಂಕಿ, ಶುಷ್ಕ ಹವಾಮಾನದಿಂದಾಗಿ ವೇಗವಾಗಿ ಹರಡಿ, ಸಸ್ಯವರ್ಗವನ್ನು ನಾಶಪಡಿಸಿತು ಮತ್ತು ಹತ್ತಿರದ ಮನೆಗಳಿಗೆ ಅಪಾಯವನ್ನುಂಟು ಮಾಡಿ ಖಾಸಗಿ ಭೂಮಿಯಲ್ಲಿ ಪ್ರಾರಂಭವಾದ ಬೆಂಕಿಯು ಶೀಘ್ರದಲ್ಲೇ ಸರ್ಕಾರಿ ಸ್ವಾಮ್ಯದ ಅರಣ್ಯ ಭೂಮಿಗೆ ಹರಡಿ, ಮರಗಳು ಮತ್ತು ಸಸ್ಯಗಳಿಗೆ ಹಾನಿಯನ್ನುಂಟು ಮಾಡಿತು. ಬಲವಾದ ಗಾಳಿ […]

ಬೆಳ್ತಂಗಡಿ: ನೇತ್ರಾವತಿ ಶಿಖರದ ಬಳಿ ಕಾಡ್ಗಿಚ್ಚು-ಸಾವಿರಾರು ಎಕರೆ ಸಸ್ಯವರ್ಗ ನಾಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ನೇತ್ರಾವದಿ ನದಿಯಲ್ಲಿ ಮುಳುಗಿ ಆರ್ಎಸ್ಎಸ್ ಕಾರ್ಯಕರ್ತ ಸಾವು

(ನ್ಯೂಸ್ ಕಡಬ) newskadaba.com ಡಿ. 04 ಬೆಳ್ತಂಗಡಿ: ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. ಸೋಮವಾರ ನೇತ್ರಾವತಿ ಈಜಾಡಲು ಸಂಜೆ ನದಿಯಲ್ಲಿ ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು.

ಬೆಳ್ತಂಗಡಿ: ನೇತ್ರಾವದಿ ನದಿಯಲ್ಲಿ ಮುಳುಗಿ ಆರ್ಎಸ್ಎಸ್ ಕಾರ್ಯಕರ್ತ ಸಾವು Read More »

ಕರಾವಳಿ

ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 04. ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. ಸೋಮವಾರ ನೇತ್ರಾವತಿ ಈಜಾಡಲು ಸಂಜೆ ನದಿಯಲ್ಲಿ ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ಎಂಬಲ್ಲಿಯ ಓಡಿ ಎಂಬವರ

ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಸೆ.22ರಂದು ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.21. ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗಿರುವ ಅವಕಾಶಗಳು , ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ, ಪರೀಕ್ಷೆಗಳಿಗೆ ತಯಾರಾಗುವ ಬಗೆ, ವೈಜ್ಞಾನಿಕ ಸ್ಟಡಿ ಮಾದರಿ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ವಿಸ್ತ್ರುತ ಮಾಹಿತಿಯ ಓರಿಯಂಟೇಷನ್ ಕಾರ್ಯಕ್ರಮ ಇದೇ ಸಪ್ಟೆಂಬರ್ 22 ರ ಭಾನುವಾರ ಬೆಳಿಗ್ಗೆ 11:30 ಕ್ಕೆ ಗುರುವಾಯನಕೆರೆಯ ವಿದ್ವತ್ ಪಿ ಯು ಕಾಲೇಜಿನಲ್ಲಿ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಹೆಸರಾಂತ ತರಬೇತಿದಾರರು

ಬೆಳ್ತಂಗಡಿ: ಸೆ.22ರಂದು ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಾರ್ಯಗಾರ Read More »

ಕರಾವಳಿ

ಬೆಳ್ತಂಗಡಿ: ಸಿಬ್ಬಂದಿ ನಿರ್ಲಕ್ಷ್ಯದಿಂದ ಕಂದಮ್ಮ ಮೃತ್ಯು – ದೂರು ದಾಖಲು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.09. ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಒಂದೂವರೆ ತಿಂಗಳ ಮಗು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ 1.5 ತಿಂಗಳು ಹೆಣ್ಣು ಮಗು ಅಂಶಿಕಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಗುವಿನಲ್ಲಿ ಕಫ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಅಂಶಿಕಾಳನ್ನು ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್

ಬೆಳ್ತಂಗಡಿ: ಸಿಬ್ಬಂದಿ ನಿರ್ಲಕ್ಷ್ಯದಿಂದ ಕಂದಮ್ಮ ಮೃತ್ಯು – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ – ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.05. ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಅವಿನಾಶ್ ಧರ್ಮಸ್ಥಳ, ನಂದೀಪ್ ಧರ್ಮಸ್ಥಳ ಹಾಗೂ ಅಕ್ಷತ್ ಉಪ್ಪಿನಂಗಡಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಬಸ್ ನಿಲ್ದಾಣ ಬಳಿ, ರಿಕ್ಷಾ ಚಾಲಕ ಮಹಮ್ಮದ್ ಆಸೀಕ್ ಎಂಬವರ ಮೇಲೆ ಹಲ್ಲೆಯಾಗಿದ್ದು, ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ

ಬೆಳ್ತಂಗಡಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ – ಮೂವರು ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪರ ಬೃಹತ್ ಸಮಾವೇಶ – ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.04.  ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳಾರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳಿಂದ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ಉಜಿರೆಯಲ್ಲಿ ನಡೆಯಿತು. ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆಯ ಮೂಲಕ ಸಾಗಿಬಂದ ಬೃಹತ್ ಮೆರವಣಿಗೆಯು, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರ ಜೊತೆ ಶಿಸ್ತು ಬದ್ಧವಾಗಿ ಸಾಗಿಬಂದಿತ್ತು. ಎಲ್ಲರ ಕೈಯಲ್ಲೂ ಕ್ಷೇತ್ರದ ಮತ್ತು

ಬೆಳ್ತಂಗಡಿ: ಧರ್ಮಸ್ಥಳ ಪರ ಬೃಹತ್ ಸಮಾವೇಶ – ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ Read More »

ಕರಾವಳಿ

ಬೈಕ್ ಹಾಗೂ ಕಾರು ಅಪಘಾತ ➤ ಮಹಿಳೆ ಗಂಭೀರ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು. 03. ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಕನ್ಯಾಡಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಬೆಳ್ತಂಗಡಿಯ ದೇವಸ್ಥಾನವೊಂದರ ಸಹ ಅರ್ಚಕ ಅಮೇಯ ಭಟ್‌ ಎಂಬವರ ಪತ್ನಿ ಶ್ರೀರಕ್ಷಾಕಿಣಿ ಎಂದು ಗುರುತಿಸಲಾಗಿದೆ. ರಕ್ಷಾಕಿಣಿಯವರು ತನ್ನ ತಾಯಿ ಮನೆಗೆ ತೆರಳಿದ್ದು, ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಉಜಿರೆ ಕಡೆಯಿಂದ ಬರುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಹಾಗೂ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್‌ ಇಬ್ಭಾಗವಾಗಿ ಸಂಪೂರ್ಣ ಜಖಂಗೊಂಡಿದ್ದು, ಸವಾರೆ

ಬೈಕ್ ಹಾಗೂ ಕಾರು ಅಪಘಾತ ➤ ಮಹಿಳೆ ಗಂಭೀರ Read More »

ಕರಾವಳಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 20. ಅಪ್ರಾಪ್ತ ಬಾಲಕಿಯನ್ನು ಆಟೋ ರಿಕ್ಷಾದಲ್ಲಿ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ರಿಕ್ಷಾ ಚಾಲಕ ಸಾದಿಕ್ ಮತ್ತು ಕರೀಂ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂತ್ರಸ್ತೆ ಬಾಲಕಿಯು ನೆರೋಲ್ದಪಲ್ಕೆ ಎಂಬಲ್ಲಿ ಜೂನ್ 18 ರಂದು ತನ್ನ ತಾಯಿಯ ಸ್ವಸಹಾಯ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಬೈಕ್  ಮತ್ತು ಪಿಕಪ್ ನಡುವೆ ಅಪಘಾತ ➤ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.21. ಬೈಕ್ ಮತ್ತು ಪಿಕಪ್ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ. ಕೊಕ್ರಾಡಿಯ ನಿವಾಸಿ ಉಜ್ವಲ್ ಹೆಗ್ಡೆ (18) ಮೃತ ವಿದ್ಯಾರ್ಥಿ. ಇಂದು ಬೆಳಿಗ್ಗೆ ಉಜ್ವಲ್ ಬೈಕ್ ನಲ್ಲಿ ಮೂಡಬಿದ್ರೆಯ ಕಾಲೇಜಿಗೆ ಹೋಗುತ್ತಿದ್ದಾಗ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಉಜ್ವಲ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. .  

ಬೆಳ್ತಂಗಡಿ: ಬೈಕ್  ಮತ್ತು ಪಿಕಪ್ ನಡುವೆ ಅಪಘಾತ ➤ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top