beach

ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಗೋವಾದ ಮಾದರಿಯಲ್ಲಿ ರಾಜ್ಯದ ಬೀಚ್‌ಗಳಲ್ಲಿ ಟೆಂಟ್ ಹಾಕುವುದು ಮತ್ತು ಮದ್ಯ ಮಾರಾಟ, ಮದ್ಯಪಾನಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ನಡೆದ ‘ಕನೆಕ್ಟ್ 2024’ನಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆವಿ, ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಾವು ಬೀಚ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ , ಬೀಚ್​ ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ ಎಂದರು. ಬೀಚ್​ ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು, […]

ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ Read More »

ಕರಾವಳಿ, ಕರ್ನಾಟಕ

ಎಚ್ಚರಿಕೆಗೆ ಕ್ಯಾರೇ ಎನ್ನದೇ ಸಮುದ್ರಕ್ಕೆ ಇಳಿದ ಬಾಲಕ-ನೀರುಪಾಲು

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 13. ಎಷ್ಟೇ ಎಚ್ಚರಿಸಿದರೂ ಕ್ಯಾರೇ ಎನ್ನದೇ ಸುಮದ್ರಕ್ಕಿಳಿದಿದ್ದ ಮೂವರ ಪೈಕಿ ಓರ್ವ ಮೃತಪಟ್ಟು, ಇನ್ನಿಬ್ಬರು ಸಮುದ್ರಕ್ಕೆ ಇಳಿದು ನಾಪತ್ತೆಯಾಗಿರುವ ಘಟನೆ ಮುಂಬೈನ ಜುಹು ಬೀಚ್ ನಲ್ಲಿ ನಡೆದಿದೆ. 12 ರಿಂದ 16 ವರ್ಷ ವಯಸ್ಸಿನ ಐದು ಹುಡುಗರ ಗುಂಪೊಂದು, ಜೀವರಕ್ಷಕ ದಳದವರ ಎಚ್ಚರಿಕೆಗೆ ಮಣಿಯದೇ ಸಮುದ್ರಕ್ಕಿಳಿದು, ನಂತರ ದಡದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾಗಿದ್ದರು. ಈ ಪೈಕಿ  ಇಬ್ಬರು ಬಾಲಕರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಓರ್ವ ಆಸ್ಪತ್ರೆಗೆ ಕರೆತಂದ

ಎಚ್ಚರಿಕೆಗೆ ಕ್ಯಾರೇ ಎನ್ನದೇ ಸಮುದ್ರಕ್ಕೆ ಇಳಿದ ಬಾಲಕ-ನೀರುಪಾಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೀಚ್‌ನಲ್ಲಿ ಮುಳುಗಿ ಇಬ್ಬರು ಭಾರತೀಯರ ಮೃತ್ಯು

(ನ್ಯೂಸ್ ಕಡಬ)newskadaba.com ನ್ಯೂಜಿಲಾಂಡ್, ಜ.25. ನ್ಯೂಜಿಲೆಂಡ್‌ನ ಪಿಹಾ ಬೀಚ್‌ನಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಮುಳುಗಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ‘ಮೃತರನ್ನು ಸೌರಿನ್‌ ನಯನ್‌ಕುಮಾರ್‌ ಪಟೇಲ್ (28) ಮತ್ತು ಅನ್ಶೌಲ್‌ ಶಾ (31) ಎಂದು ಗುರುತಿಸಲಾಗಿದೆ. ಇವರು ಗುಜರಾತ್‌ನ ಅಹಮದಾಬಾದ್‌ ಮೂಲದವರಾಗಿದ್ದು, ಆಕ್ಲೆಂಡ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು’ ಎಂದು ವರದಿ ಮಾಡಿದೆ. ಎಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗಿದ್ದ ಪಟೇಲ್ ಕಳೆದ ವರ್ಷ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಶಾ, ಅನಿಲ ಕೇಂದ್ರದಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬೀಚ್‌ನಲ್ಲಿ ಮುಳುಗಿ ಇಬ್ಬರು ಭಾರತೀಯರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾರವಾರ,ಅ.03. ಸಮುದ್ರಕ್ಕೆ ಆಟವಾಡಲು ತೆರಳಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಂಜೆ ನೀರಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಬಾಲಕರು ಸಮುದ್ರದ ಅಲೆಗಳಿಗೆ ಸಿಳುಕಿ ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರು ಬಾಲಕರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು Read More »

ಕರಾವಳಿ

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು‌, ಸೆ.17. ರಜೆಯ ಮಜಾ ಸವಿಯಲೆಂದು ಬಂದು ಸ್ನಾನಕ್ಕಿಳಿದ ಯುವಕನೋರ್ವ ಸಮುದ್ರಪಾಲಾದ ಘಟನೆ ಪಣಂಬೂರು ಮೀನಕಳಿಯ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಆಂಧ್ರ ಪ್ರದೇಶದ ಮೂಲದ ಸಾಯಿಚರಣ್ (19) ಮೃತ ಯುವಕ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಸಾಯಿಚರಣ್ ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ರಜೆ ಕಳೆಯಲು ಬಂದಿದ್ದ. ಮಡಿಕೇರಿಗೆ ತೆರಳಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವಕನ ಶವ ಪತ್ತೆಗೆ ಸಮುದ್ರದ ಅಲೆಗಳ ಹೊಡೆತ ಅಡ್ಡಿಯಾಗಿದ್ದು,

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು Read More »

ಕರಾವಳಿ
Scroll to Top