bantwal

ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ

(ನ್ಯೂಸ್ ಕಡಬ) newskadaba.com. ಮಂಗಳೂರು,ಜ.12.ಮಂಗಳೂರಿನ ಯುವತಿಯೋರ್ವರು ಸಂಜೆ ವೇಳೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಬಸ್ ತಂಗುದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಆ ಸಮಯಕ್ಕೆ ಅವರಿಗೆ ಫೇಸುಬುಕ್  ಮುಖಾಂತರ ಪರಿಚಯವಾದ ಮನ್ಸೂರು ಎಂಬಾತನು ಓಮ್ನಿ ಕಾರಿನಲ್ಲಿ ಅಲ್ಲಿಗೆ ಬಂದರು. ಯುವತಿಯನ್ನು ಮನ್ಸೂರು ಕಾರಲ್ಲಿ ಬಾ ಎಂದು ಕರೆದಾಗ ಯುವತಿ ಬರಲು ಒಪ್ಪದಿದ್ದಾಗ ಒತ್ತಾಯ ಪೂರ್ವಕವಾಗಿ ಹೇಗೋ ಪುಸಲಾಯಿಸಿಕೊಂಡು ಕಾರಿನಲ್ಲಿ ಕುಳ್ಳಿರಿಸಿ ಯುವತಿಯ ಮನೆಗೆ ಬಿಡುವುದಾಗಿ ಹೇಳಿದನು. ಬಳಿಕ ಮನೆಗೆ ಬಿಡದೇ ಬೇರೆ ಬೇರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು […]

ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ Read More »

ಕರಾವಳಿ

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ !

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಡಿ.29.ಬಂಟ್ವಾಳ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮ,ಮುಂಡಡ್ಕ ಮನೆ ಕರುಣಕರ ಶೆಟ್ಟಿ ಪ್ರಾಯ  (50)   ಮುಂಡಡ್ಕ ಮನೆ, ಎಂಬವರು ದಿನಾಂಕ 25-12-2018 ರಂದು ಸಮಯ  ರಾತ್ರಿ 11.30 ಗಂಟೆಗೆ ತಮ್ಮ ಬಾಬ್ತು  ಬೈಕ್ KA 19 EY 7945 ನೇದನ್ನು ಕಳ್ಳಿಗೆ ಗ್ರಾಮದ ತೊಡಂಬಿಲ ಚರ್ಚ್ ಬಳಿ ನಿಲ್ಲಿಸಿ, ಚರ್ಚ್ ವಠಾರದಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಹೋಗಿದ್ದು, ನಂತರ ನಾಟಕ ಮುಗಿದ ನಂತರ ಸದ್ರಿ ಬೈಕನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ಸದ್ರಿ ಮೊಟರ್ ಸೈಕಲ್

ಬಂಟ್ವಾಳ: ನಾಟಕ ನೋಡಲು ಹೋಗಿ ಬಂದವನಿಗೆ ಕಾದಿತ್ತು ಶಾಕಿಂಗ್ ನ್ಯೂಸ್ ! Read More »

ಕರಾವಳಿ

ಬಂಟ್ವಾಳ ಗೃಹರಕ್ಷಕ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ಭೇಟಿ

(ನ್ಯೂಸ್ ಕಡಬ) newskadaba.com  ಬಂಟ್ವಾಳ ಡಿ. 22. ದಿನಾಂಕ 21-12-2018ರ ಶುಕ್ರವಾರ ಬಂಟ್ವಾಳ ಗೃಹರಕ್ಷಕ ಘಟಕದ ವಾರದ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿ ವಾರದ ಕವಾಯತು ವೀಕ್ಷಣೆ ನಡೆಸಿದರು. ನಂತರ ಬಂಟ್ವಾಳ ಘಟಕದಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿದ ಐತ್ತಪ್ಪರವರನ್ನು ತಿಂಗಳ ಗೃಹರಕ್ಷಕರಾಗಿ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಮಾಡೆಂಟ್  ಗೃಹರಕ್ಷಕ ಐತ್ತಪ್ಪರವರ 26 ವರ್ಷದ ಸೇವೆ ಇಲಾಖೆ ಗೌರವ ತಂದಿದೆ.

ಬಂಟ್ವಾಳ ಗೃಹರಕ್ಷಕ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ಭೇಟಿ Read More »

ಕರಾವಳಿ

ಬಂಟ್ವಾಳ ಪೊಲೀಸರ ಸಿನಿಮೀಯ ಶೈಲಿಯ ಕಾರ್ಯಾಚರಣೆ ► ಕಾರಿನ ಮೇಲೆ ಗುಂಡು ಹಾರಿಸಿ ಮೂವರ ಬಂಧನ, ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.01. ವೇಗವಾಗಿ ಬಂದ ವಾಹನವೊಂದನ್ನು‌ ನಿಲ್ಲಿಸಲು ಸೂಚಿಸಿದರೂ ನಿಲ್ಲಿದೆ ಪರಾರಿಯಾಗುವ ಯತ್ನದಲ್ಲಿದ್ದಾಗ ಸಿನಿಮೀಯ ಶೈಲಿಯಲ್ಲಿ ಫೈರಿಂಗ್ ಮಾಡಿ ಮೂವರನ್ನು ಬಂಧಿಸಿದ ಘಟನೆ ಬಂಟ್ವಾಳದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಬಂಧಿತ ಆರೋಪಿಗಳನ್ನು ಮಾರಿಪಳ್ಳ ನಿವಾಸಿ ಸದ್ದಾಂ, ಸುರತ್ಕಲ್ ನಿವಾಸಿ ಮೌಸೀನ್ ಹಾಗೂ ಬೊಳ್ಳಾಯಿ ನಿವಾಸಿ ಇರ್ಶಾದ್ ಎಂದು ಗುರುತಿಸಲಾಗಿದೆ. ಅಮ್ಮೆಮಾರ್ ನಿವಾಸಿಗಳಾದ ಮನ್ಸೂರ್ ಹಾಗೂ ಅಮ್ಮಿ ಪರಾರಿಯಾಗಿದ್ದಾರೆ. ಬೆಳ್ತಂಗಡಿ ಕಡೆಯಿಂದ ವೇಗವಾಗಿ ಬಂದ ಉಡುಪಿ ನೋಂದಣಿಯ ಸ್ವಿಫ್ಟ್ ಕಾರನ್ನು ಬೆಳ್ತಂಗಡಿ ಚೆಕ್ ಪೋಸ್ಟ್

ಬಂಟ್ವಾಳ ಪೊಲೀಸರ ಸಿನಿಮೀಯ ಶೈಲಿಯ ಕಾರ್ಯಾಚರಣೆ ► ಕಾರಿನ ಮೇಲೆ ಗುಂಡು ಹಾರಿಸಿ ಮೂವರ ಬಂಧನ, ಇಬ್ಬರು ಪರಾರಿ Read More »

ಕರಾವಳಿ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ 4 ತ್ರಿಚಕ್ರ ವಾಹನ, 3 ಚತುರ್‍ಚಕ್ರ ವಾಹನ ಮತ್ತು 1 ದ್ವಿಚಕ್ರ ವಾಹನಗಳನ್ನು ನವೆಂಬರ್ 27 ರಂದು ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ 3 ತ್ರಿಚಕ್ರ ವಾಹನಗಳು, 6 ದ್ವಿಚಕ್ರ ವಾಹನಗಳು ಹಾಗೂ ಚತುರ್‍ಚಕ್ರ 1 ನವೆಂಬರ್ 28 ರಂದು ಬಹಿರಂಗ ಹರಾಜಿಗೆ ಒಳಪಡಿಸಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹರಾಜು ನಿರ್ವಾಹಣಾ ಅಧಿಕಾರಿಗಳಾದ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು Read More »

ಕರಾವಳಿ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.24. ಏಳು ವರ್ಷದ ಬಾಲಕನೋರ್ವ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಶುಕ್ರವಾರದಂದು ನಡೆದಿದೆ. ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬವರ ಪುತ್ರ ಶ್ರೀರಾಮ್(7) ಮೃತ ದುರ್ದೈವಿ ಬಾಲಕ. ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ಇತರರ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಅ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ► ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.20. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ. 22ರಂದು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ 148.29 ಕೋಟಿ ರೂ.ಗಳ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ 104.21 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ಉದ್ಘಾಟನೆಗೊಳ್ಳಲಿರುವ ಯೋಜನೆಗಳು: ಬಿಸಿರೋಡ್‌ನಲ್ಲಿ

ಅ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ► ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ Read More »

ಕರಾವಳಿ

ಲೈಸೆನ್ಸ್ ಇಲ್ಲದೆ ಮಕ್ಕಳು ವಾಹನ ಚಲಾಯಿಸಿದರೆ ಹೆತ್ತವರು ಹೊಣೆ ► ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.15. ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವಷ್ಟೇ ಅಪರಾಧ ಅವರಿಗೆ ವಾಹನ ಕೊಡುವ ಪೋಷಕರದ್ದಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಬಿ ಸಿ ರೋಡಿನ ರೋಟರಿ ಭವನದಲ್ಲಿ ಶನಿವಾರ ಸಂಜೆ ಕಾಲೇಜು ಮುಖ್ಯಸ್ಥರಿಗೆ ನಡೆದ ಸಭೆಯಲ್ಲಿ ಮಾತನಾಡಿ, ಕೆಲವು ಅಪ್ರಾಪ್ತ ಬಾಲಕರು ಎಲ್ಲೆಂದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿ

ಲೈಸೆನ್ಸ್ ಇಲ್ಲದೆ ಮಕ್ಕಳು ವಾಹನ ಚಲಾಯಿಸಿದರೆ ಹೆತ್ತವರು ಹೊಣೆ ► ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ Read More »

ಕರಾವಳಿ

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.11. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಶುಕ್ರವಾರದಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗದಲ್ಲಿ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು, ಸಂಘಟನೆಯ ಮುಖಂಡರು ಸಾಥ್ ನೀಡಿದರು. ವಿವಿಧ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತನಾಡಿ ಸಿದ್ದರಾಮಯ್ಯ ಸರಕಾರದ

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಕರಾವಳಿ
Scroll to Top