ಇಂದಿನಿಂದ ಹಳೆಯ ವಾಹನಗಳಿಗೆ ಇಂಧನ ಮಾರಾಟ ನಿಷೇಧ ಪೆಟ್ರೋಲ್ ಪಂಪ್ ಗಳ ಬಳಿ ಪೊಲೀಸ್ ಹಾಗೂ AI ಕ್ಯಾಮೆರಾ ನಿಯೋಜನೆ
(ನ್ಯೂಸ್ ಕಡಬ) newskadaba.com ದೆಹಲಿ, ಜು. 01. ಇಂದಿನಿಂದ ದಿಲ್ಲಿಯಲ್ಲಿ ಹಳೆಯ ವಾಹನಗಳಿಗೆ ಇಂಧನ ಮಾರಾಟ ಮಾಡುವುದಕ್ಕೆ ನಿಷೇಧ ಜಾರಿಗೊಳಿಸಲಾಗಿದೆ. ಇಂತಹ ಹಳೆಯ ವಾಹನಗಳನ್ನು ಪತ್ತೆ ಹಚ್ಚಲು ದೆಹಲಿ ಸರಕಾರ ಸುಮಾರು 350 ಪೆಟ್ರೋಲ್ ಪಂಪ್ ಗಳ ಬಳಿ ಸ್ವಯಂಚಾಲಿತ ಸಂಖ್ಯಾಫಲಕ ರೀಡರ್ ಕ್ಯಾಮೆರಾಗಳನ್ನು ಅಳವಡಿಸಿರುವ ಕುರಿತು ವರದಿಯಾಗಿದೆ. ಈ ನಿಷೇಧದ ಭಾಗವಾಗಿ, ಸಾರಿಗೆ ಇಲಾಖೆಯ ಸಿಬ್ಬಂದಿಗಳು, ದಿಲ್ಲಿ ಪೊಲೀಸರು, ಸಂಚಾರಿ ಪೊಲೀಸರು ಹಾಗೂ ದಿಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿಸ್ತೃತ ಸಿಬ್ಬಂದಿಗಳ ನಿಯೋಜನೆಯ ಯೋಜನೆಯನ್ನು ಸಾರಿಗೆ […]

