auto Accident

ಮಂಗಳೂರು: ರಿಕ್ಷಾ ಅಪಘಾತ: ಚಾಲಕ ಮೃತ್ಯು

(ನ್ಯೂಸ್ ಕಡಬ)newskadaba.com   ಮಂಗಳೂರು, ನ.24: ಬ್ರೇಕ್ ಫೇಲ್ ನಿಂದ ನಡೆದ ರಿಕ್ಷಾ ಅಪಘಾತದಲ್ಲಿ ಚಾಲಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಕಲ್ಕಾರ್ ಎಂಬಲ್ಲಿ ಆದಿತ್ಯವಾರದಂದು ಸಂಭವಿಸಿದೆ. ಕುಂಬಳೆ ಮಂಜಂತ್ತಡ್ಕ ನಿವಾಸಿ ನಾರಾಯಣ ಗಟ್ಟಿ ಮೃತರು. ಉಳ್ಳಾಲದ ಕೊಲ್ಯ ಅಡ್ಕ ಸಮೀಪ ನಡೆದಿದ್ದ ಸಂಬಂಧಿಕರ ಹುಟ್ಟುಹಬ್ಬ ಸಮಾರಂಭಕ್ಕೆ ಕುಂಬಳೆಯಿಂದ ರಿಕ್ಷಾದಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಸಂಬಂಧಿಕರನ್ನು ಕೊಣಾಜೆ ಕಲ್ಕಾರ್ ಎಂಬಲ್ಲಿಗೆ ಬಿಟ್ಟು ಬರಲು ರಿಕ್ಷಾದಲ್ಲೇ ತೆರಳಿದ್ದರು. ಕಲ್ಕಾರ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ರಿಕ್ಷಾ ಢಿಕ್ಕಿ […]

ಮಂಗಳೂರು: ರಿಕ್ಷಾ ಅಪಘಾತ: ಚಾಲಕ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಿ.ಸಿ.ರೋಡ್: ಆಟೋ ರಿಕ್ಷಾ ಪಲ್ಟಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 05. ಆಟೋರಿಕ್ಷಾ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿಸಿರೋಡು ತಲಪಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಆಟೋ ತಲಪಾಡಿಯಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಘಟನೆಯ ವೇಳೆ ಆಟೋದಲ್ಲಿ ಇಬ್ಬರೇ ಇರುವುದಾಗಿ ಸ್ಥಳೀಯರು ತಿಳಿಸಿದ್ದು, ಚಾಲಕ ಗಂಭೀರ ಗಾಯಗೊಂಡರೆ ಪ್ರಯಾಣಿಕನಿಗೂ ಗಾಯವಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಿ.ಸಿ.ರೋಡ್: ಆಟೋ ರಿಕ್ಷಾ ಪಲ್ಟಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top