ಆ.10 : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್ಡ್ ಒಂಜಿ ದಿನ ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು
(ನ್ಯೂಸ್ ಕಡಬ) newskadaba.com, ಆ.08: ಸವಣೂರು : ಅಭ್ಯುದಯ ಯುವಕ ಮಂಡಲ (ರಿ.) ಚೆನ್ನಾವರ ಪಾಲ್ತಾಡಿ ಇದರ ವತಿಯಿಂದ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದಲ್ಲಿ 4ನೇ ವರ್ಷದ ಆಟಿದ ಕೂಟ-ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಆ.10ರಂದು ಚೆನ್ನಾವರ ಗುತ್ತಿನ ಗದ್ದೆಯಲ್ಲಿ ನಡೆಯಲಿದೆ. ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಚೆನ್ನಾವರಗುತ್ತು ಕಾರ್ಯಕ್ರಮ ಉದ್ಘಾಟಿಸುವರು. ಕ್ರೀಡಾಂಗಣ ಉದ್ಘಾಟನೆಯನ್ನು ಅಬುದಾಭಿ ಇಂಡಿಯನ್ ಸ್ಕೂಲ್, ಅಬುದಾಭಿಯ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್.ಸುವರ್ಣ ನೆರವೇರಿಸುವರು. […]

